
ಬೆಂಗಳೂರು: ಉಪಚುನಾವಣಾ ಪ್ರಚಾರಕ್ಕೆ ಬಿರುಸು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 17ರಂದು ಸಿಂಧಗಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಲಿದ್ದಾರೆ.
ಈ ಬಗ್ಗೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರಿಗೆ ಬೊಮ್ಮಾಯಿ ಸ್ಪಷ್ಟಪಡಿಸಿದರು. ಅಕ್ಟೋಬರ್ 17 ರಂದು ಸಿಂಧಗಿಗೆ ತೆರಳಿ ಅಲ್ಲಿ ಎರಡು ದಿನ ಪ್ರಚಾರದಲ್ಲಿ ತೊಡಗಿ ಬಳಿಕ ಹಾನಗಲ್ ಪ್ರಚಾರಕ್ಕೆ ತೆರಳುತ್ತೇನೆ. ಅ.20ರ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪರನ್ನು ಬೆಂಗಳೂರಿನ ಕೆ.ಕೆ.ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿಯಾದರು. ಉಪಚುನಾವಣಾ ಪ್ರಚಾರದ ವಿಚಾರವಾಗಿ ಬಿಎಸ್ವೈ ಜತೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಹಾನಗಲ್, ಸಿಂದಗಿ ಉಪಚುನಾವಣೆ ನಿಟ್ಟಿನಲ್ಲಿ ಅಕ್ಟೋಬರ್ 20ರ ಬಳಿಕ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪಗೆ ದಸರಾ ಹಬ್ಬದ ಶುಭ ಕೋರಿದ ಸಿಎಂ
ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದ ಸಿಎಂ ಬೊಮ್ಮಾಯಿ ಬಿಎಸ್ ವೈ ಅವರಿಗೆ ದಸರಾ ಹಬ್ಬದ ಶುಭ ಕೋರಿದರು. ಬಳಿಕ ಅವರ ಆಶೀರ್ವಾದ ಪಡೆದರು. ಈ ಬಗ್ಗೆ ಮಾತನಾಡಿದ ಅವರು, ಮೈಸೂರಿನಲ್ಲಿಂದು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ. ನಾಳೆ (ಅಕ್ಟೋಬರ್ 16) ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ತೆರಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಹಾನಗಲ್ ಉಪಚುನಾವಣೆ: 13 ಅಭ್ಯರ್ಥಿಗಳು ಕಣದಲ್ಲಿ
ಅಂತೆಯೇ ಅಕ್ಟೋಬರ್ 17ರಂದು ಹಾನಗಲ್ಗೆ ಹೋಗುತ್ತೇನೆ. ನಂತರ ಎರಡು ದಿನಗಳ ಕಾಲ ಸಿಂದಗಿಗೆ ತೆರಳುತ್ತೇನೆ. ಅ.20ರ ಬಳಿಕ ಹಾನಗಲ್, ಸಿಂದಗಿ ಎರಡೂ ಕಡೆ ಯಡಿಯೂರಪ್ಪ ಪ್ರಚಾರಕ್ಕೆ ಬರುತ್ತಾರೆ. ಶಾಸಕ ಮಸಾಲೆ ಜಯರಾಂ ಜೊತೆ ಈ ಸಂಬಂಧ ಮಾತನಾಡಿದ್ದೇನೆ. ಶಾಸಕ ಮಸಾಲೆ ಜಯರಾಂ ನಮ್ಮ ಒಳ್ಳೆಯ ಸ್ನೇಹಿತರು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Advertisement