ರಿಲ್ಯಾಕ್ಸ್ ಮೂಡ್'ನಲ್ಲಿ ಬಿಎಸ್.ಯಡಿಯೂರಪ್ಪ: ಶಿಕಾರಿಪುರದಲ್ಲಿ ಸ್ನೇಹಿತರ ಭೇಟಿ!
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬಿಡುವಿಲ್ಲದ ಚುನಾವಣಾ ವೇಳಾಪಟ್ಟಿಯಿಂದ ಬಿಡುವು ಮಾಡಿಕೊಂಡು ತಮ್ಮ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಭೇಟಿ ನೀಡಿದ್ದು, ಈ ವೇಳೆ ಸ್ನೇಹಿತರನ್ನು ಭೇಟಿ ಮಾಡಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದದ್ದು ಕಂಡು ಬಂದಿತ್ತು.
ಸೋಮವಾರ ಮತ್ತು ಮಂಗಳವಾರದಂದು ಶಿಕಾರಿಪುರದಲ್ಲಿಯೇ ಉಳಿದುಕೊಂಡಿದ್ದ ಯಡಿಯೂರಪ್ಪ ಅವರು ಈ ವೇಳೆ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆದರು. ಅಲ್ಲದೆ, ಬಿಜೆಪಿ ನಾಯಕರೊಬ್ಬರ ಮಗಳ ಮದುವೆ ಸಮಾರಂಭಕ್ಕೂ ಭೇಟಿ ನೀಡಿ ದಂಪತಿಗಳಿಗೆ ಶುಭಹಾರೈಸಿದರು. ಇದೇ ವೇಳ ಸ್ವಕ್ಷೇತ್ರದಲ್ಲಿ ನಡೆಯುತ್ತಿರುವ ಕೆರೆ ಕಾಮಗಾರಿಗಳನ್ನೂ ಪರಿಶೀಲನೆ ನಡೆಸಿದರು.
ಮೂಲಗಳ ಪ್ರಕಾರ ಶಿಕಾರಿಪುರದಲ್ಲಿದ್ದ ಯಡಿಯೂರಪ್ಪ ಅವರು ತಮ್ಮ ಹಳೆಯ ಗಳೆಯ ಮತ್ತು ಆರ್'ಎಸ್ಎಸ್ ನಾಯಕ ಅಂಗಡಿ ರಾಮಣ್ಣ ಅವರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ರಾಮಣ್ಣ ಅವರ ಭೇಟಿ ಬಳಿಕ ಮತ್ತೊಬ್ಬ ಕೆಳೆ. ಚಿಕ್ಕ ಜೋಯಿಸ್ ಅವರನ್ನು ಭೇಟಿ ಮಾಡಿದ್ದಾರೆ. ಕಲ್ಲೇನಹಳ್ಳಿಯಲ್ಲಿರುವ ಶ್ರೀ ಶಿವ ಯೋಗಾಶ್ರಮದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಶ್ರೀಗಳ ಭೇಟಿ ಬಳಿಕ ಕಲ್ಲೇನಹಳ್ಳಿಯ ನೀರಾವರಿ ಯೋಜನೆಗಳನ್ನು ಪರಿಶೀಲನೆ ನಡೆಸಿದರು. ಯೋಜನೆಯ ವೆಚ್ಚ ರೂ.125 ಕೋಟಿ ಆಗಿದ್ದು, ಈಗಾಗಲೇ ಇದರ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ ಎಂದು ತಿಳಿದುಬದಿದೆ.
ಇದಷ್ಟೇ ಅಲ್ಲದೆ, ಉಡುಗಣಿ-ತಲಗುಂದ-ಹೊಸೂರು ಕೆರೆ ಯೋಜನೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಯೋಜನೆಯ ವೆಚ್ಚ ಅಂದಾಜು 8 ಸಾವಿರ ಕೋಟಿ ಆಗಿದ್ದು, ಒಟ್ಟು 255 ಕೆರೆಗಳ ಕಾರ್ಯ ಭರದಿಂದ ಸಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ