ಸಂಘ ಪರಿವಾರದ ತ್ರಿಶೂಲ ದೀಕ್ಷೆಗೆ ಕಾಂಗ್ರೆಸ್ ಸಡ್ಡು: ಜನರಿಗೆ ಸಂವಿಧಾನದ ಪ್ರತಿ ತಲುಪಿಸಲು ನಿರ್ಧಾರ!

ಆಯುಧ ಪೂಜೆಯ ದಿನದಂದು ತನ್ನ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿ ಜನಸಾಮಾನ್ಯರನ್ನು ಭಯಬೀತಗೊಳಿಸಿದ್ದ ಸಂಘಪರಿವಾರಕ್ಕೆ ಇದೀಗ ಕಾಂಗ್ರೆಸ್ ಸಡ್ಡು ಹೊಡೆದಿದೆ. ಹಿಂಸೆ ಪ್ರತಿಯಾಗಿ ಸಂವಿಧಾನದ ಸಂದೇಶ ನೀಡುವ ಉದ್ದೇಶದಿಂದ ಜನರಿಗೆ ಸಂವಿಧಾನದ ಪ್ರತಿ ನೀಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಆಯುಧ ಪೂಜೆಯ ದಿನದಂದು ತನ್ನ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿ ಜನಸಾಮಾನ್ಯರನ್ನು ಭಯಬೀತಗೊಳಿಸಿದ್ದ ಸಂಘಪರಿವಾರಕ್ಕೆ ಇದೀಗ ಕಾಂಗ್ರೆಸ್ ಸಡ್ಡು ಹೊಡೆದಿದೆ. ಹಿಂಸೆ ಪ್ರತಿಯಾಗಿ ಸಂವಿಧಾನದ ಸಂದೇಶ ನೀಡುವ ಉದ್ದೇಶದಿಂದ ಜನರಿಗೆ ಸಂವಿಧಾನದ ಪ್ರತಿ ನೀಡಲು ಮುಂದಾಗಿದೆ.

ಈ ಕುರಿತು ಮಾತನಾಡಿರುವ ಕೆಪಿಸಿಸಿ ವಕ್ತಾರ ಸಿಎಂ ಧನಂಜಯ ಅವರು, ಸಂಘಪರಿವಾರದ ತ್ರಿಶೂಲ್ ದೀಕ್ಷೆಯ ವಿರುದ್ಧ ಕಾಂಗ್ರೆಸ್ ನವೆಂಬರ್ 26 ರಿಂದ ಸಂವಿಧಾನದ ಪ್ರತಿಗಳನ್ನು ವಿತರಿಸುವ ಮೂಲಕ ಅಭಿಯಾನವನ್ನು ಪ್ರಾರಂಭಿಸಲಿದೆ, ಇದನ್ನು ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.

ತ್ರಿಶೂಲ ವಿತರಣೆ ಸಂವಿಧಾನಕ್ಕೆ ವಿರುದ್ಧವಾಗಿದ. ಬೆಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ, ಯುವಕರು ತ್ರಿಶೂಲ ಹಿಡಿದು ಕಂಬಿಗಳ ಹಿಂದೆ ಹೋಗುತ್ತೀರಾ ಅಥವಾ ದೇಶವಾಸಿಗಳನ್ನು ರಕ್ಷಿಸುವ ಸಂವಿಧಾನವನ್ನು ಓದುತ್ತೀರಾ ಎಂದು ಕೇಳುತ್ತೇವೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವುದಾಗಿ ಹೇಳಿಕೊಳ್ಳುವ ಆರ್‌ಎಸ್‌ಎಸ್ ಈಗ ರಾಜಕೀಯದಲ್ಲಿ ಅಕ್ರಮ ಮಾರ್ಗಗಳನ್ನು ಬೆಂಬಲಿಸುತ್ತಿದೆ. ಬಿಜೆಪಿಗೆ ಮಾರ್ಗದರ್ಶನ ಮಾಡುವ ಬದಲು ತಾನೇ ರಾಜಕೀಯಕ್ಕೆ ಬರಬೇಕು ಎಂದು ಸಲಹೆ ನೀಡಿದ್ದಾರೆ.

1980 ರಲ್ಲಿ ಬಿಜೆಪಿಯನ್ನು ಸಂಘಟಿಸುವಾಗಲೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮತ್ತು ಎಲ್‌ಕೆ ಅಡ್ವಾಣಿಯವರನ್ನು ಅದರ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದರಿಂದ ಆರ್‌ಎಸ್‌ಎಸ್ ತತ್ವಗಳನ್ನು ಬದಿಗಿಡಲಾಗಿತ್ತು ಎಂದು ಇದೇ ವೇಳೆ ಟೀಕಿಸಿದ್ದಾರೆ.

ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಉಲ್ಲೇಖಿಸಿದ ಧನಂಜಯ ಅವರು, ಮಾಜಿ ಸಿಎಂ ಬೆಂಬಲಿಗರ ಮೇಲೆ ನಡೆದ  ಇಡಿ ಮತ್ತು ಐಟಿ ದಾಳಿಯಲ್ಲಿ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com