ಮುಂದಿನ ರಾಜ್ಯರಾಜಕಾರಣ ಉಳಿಯಲು ಜೆಡಿಎಸ್ ಅನಿವಾರ್ಯ, ನಮ್ಮ ಟಾರ್ಗೆಟ್ 123: ಎಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಮುಂದಿನ ರಾಜ್ಯರಾಜಕಾರಣ ಉಳಿಯಲು ಜೆಡಿಎಸ್ ಪಕ್ಷದ ಅವಶ್ಯಕತೆಯಿದ್ದು, 2023 ರಲ್ಲಿ ಜನತಾದಳದ ಟಾರ್ಗೆಟ್ ಮಿಷನ್ 123. ಇದನ್ನು ಕಾದು ನೋಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ರಾಜ್ಯರಾಜಕಾರಣ ಉಳಿಯಲು ಜೆಡಿಎಸ್ ಪಕ್ಷದ ಅವಶ್ಯಕತೆಯಿದ್ದು, 2023 ರಲ್ಲಿ ಜನತಾದಳದ ಟಾರ್ಗೆಟ್ ಮಿಷನ್ 123. ಇದನ್ನು ಕಾದು ನೋಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಗುಲ್ಬರ್ಗಾ ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಕಾರ್ಪೋರೇಷನ್ ಚುನಾವಣೆ ಹಿನ್ನಲೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಪಕ್ಷದ ಮುಖಂಡರೊಂದಿಗೆ ಪಕ್ಷ ಸಂಘಟನೆ ಸಂಬಂಧ ಗುರುವಾರ ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ಹಳೆ ಕರ್ನಾಟಕದಲ್ಲಿ ಮುಗಿಸೇಬಿಟ್ಟಿದ್ದೇವೆ ಎಂದವರೀಗ ಜೆಡಿಎಸ್ ನೆರಳಿನಲ್ಲಿ ರಾಜಕಾರಣ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ನಿಂದ ಭೀತಿ ಶುರುವಾಗಿದೆ. ಜೆಡಿಎಸ್ ಪಕ್ಷದಿಂದಲೇ ಮುಂದಿನ ರಾಜ್ಯರಾಜಕಾರಣ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆ ಕರ್ನಾಟಕ ಭಾಗದಲ್ಲಿಯೇ ಜೆಡಿಎಸ್ ಅನ್ನು ಮುಗಿಸಿಬಿಟ್ಟಿದ್ದೇವೆ. ಈಗಿನ ಬಿಜೆಪಿ ಸರ್ಕಾರ ಉಳಿಯಲು ಸರ್ಕಾರದ ರಕ್ಷಣೆಗೆ ಜೆಡಿಎಸ್ ನ ಸಹಕಾರದ ಹೆಸರು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷವಿದೆ ಎನ್ನುವ ಗುಮ್ಮವನ್ನು ಮುಂದೆ ಬಿಟ್ಟು ಈಗ ಸರ್ಕಾರವನ್ನು ಉಳಿಸಲು ಜೆಡಿಎಸ್ ನೆರಳನ್ನು ಆಶ್ರಯಿಸುತ್ತಿದ್ದಾರೆಂದು ಸೂಚ್ಯವಾಗಿ ಹೇಳಿದರು.

ಪ್ರಾದೇಶಿಕ ನೆಲಗಟ್ಟನ್ನು ಹೊಂದಿರುವ ಜೆಡಿಎಸ್ ಪಕ್ಷ ಇದಾಗಿದ್ದು, ಚಂದ್ರಬಾಬು ನಾಯ್ಡು ದೇವೇಗೌಡರು ಪ್ರಧಾನಿಯಾಗಿದ್ದಾಗ ನೀಡಿದ ಬೆಂಬಲ ಹಿಂಪಡೆಯಲು ಬೆದರಿಕೆ ಹಾಕಿದ್ದರ ಬಗ್ಗೆ ಈಗ ಪತ್ರಿಕೆಗಳಲ್ಲಿ ಚರ್ಚೆಯಾಗುತ್ತಿದೆ. ದೇವೇಗೌಡರಿಗೂ ಜನತಾದಳಕ್ಕೂ ಕಾಂಗ್ರೆಸ್ ಬಿಜೆಪಿಗೂ ಇರುವ ವ್ಯತ್ಯಾಸವೇನು ಎನ್ನುವುದನ್ನು ಉತ್ತರ ಕರ್ನಾಟಕದ ಜನರು ಅರ್ಥಮಾಡಿಕೊಳ್ಳಬೇಕು. ಬೆಂಗಳೂರಿಗರಿಗೆ ಕುಡಿಯಲು ಕಾವೇರಿ ನೀರು ನೀಡಿದ್ದು ದೇವೇಗೌಡರು ನೀಡಿದ ಕೊಡುಗೆಯೇ ಹೊರತು ಕಾಂಗ್ರೆಸ್, ಬಿಜೆಪಿಯಾಗಲೀ ಅಲ್ಲ. ಕರ್ನಾಟಕ ಜನರು ತಮ್ಮ ಶಕ್ತಿ ಎಲ್ಲಿದೆ ಎನ್ನುವುದನ್ನು ಅರಿಯಬೇಕು. ಜನರು ಬುದ್ಧಿವಂತರಾಗದೇ ಇದ್ದರೆ ರಾಜ್ಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಆಗುತ್ತಿರುವ ಅವಮಾನವನ್ನು ಕಾಪಾಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೇಕೆದಾಟು ಯೋಜನೆ ಬಗ್ಗೆ ಸಿ.ಟಿ.ರವಿಗೆ ತಿರುಗೇಟು ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಕನ್ನಡಿಗ ನಾನು. ಸಿ.ಟಿ.ರವಿ ಭಾರತೀಯನಿರಬಹುದು. ನನ್ನ ತಾಯಿಯನ್ನು ಕಾಪಾಡಬೇಕಾಗಿದ್ದು ನನ್ನ ಕರ್ತವ್ಯ. ನನ್ನ ತಾಯಿಯನ್ನು ಉಳಿಸಿಕೊಳ್ಳಬೇಕು. ಆಮೇಲೆ ಭಾರತೀಯ ತಾಯಿ ಎಂದು ಸೂಚ್ಯವಾಗಿ ಹೇಳಿದರು.

ಈಗಿನ ಬಿಜೆಪಿಯಲ್ಲಿ ನಡೆಯುತ್ತಿರುವುದು ಮಕ್ಕಳ ಆಟವೆಂದು ಟೀಕಿಸಿದ ಎಚ್.ಡಿಕೆ, ಶಿಸ್ತುಬದ್ಧ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಅಪಹಾಸ್ಯಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಮಾರಣ್ಣನವರ ಕಾಲದಲ್ಲಿ ಕೆಲಸಗಳಾಗುತ್ತಿದ್ದವು, ಗೌರವಗಳು ಸಿಗುತ್ತಿದ್ದವು. ಆದರೆ ನಮ್ಮದೇ ಸರ್ಕಾರದಲ್ಲಿ ಕೆಲಸಗಳಾಗುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ಶಾಸಕ ಎಂ.ಪಿ.ಕುಮಾರಸ್ವಾಮಿಯೇ ಹೇಳಿದ್ದನ್ನು ನೋಡಿದರೆ ಈ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲವೆನ್ನುವುದು ಸ್ಪಷ್ಟವಾಗಿದೆ. ಎಂ.ಪಿ.ಕುಮಾರಸ್ವಾಮಿ ಹೇಳಿದಂತೆ ಬಹುತೇಕ ಬಿಜೆಪಿ ಶಾಸಕರ ಆಂತರಿಕ ಭಾವನೆಯೂ ಇದೇ ಆಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com