ವಿಧಾನಪರಿಷತ್ತಿನಲ್ಲಿ ಸಚಿವ ಬೈರತಿ ಬಸವರಾಜ್ ರಾಜೀನಾಮೆಗೆ ಬಿಗಿಪಟ್ಟು: ಪ್ರತಿಭಟನೆ ಮುಂದುವರೆಸಲು ಕೈ ಸದಸ್ಯರ ನಿರ್ಧಾರ

ಭೂ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಇಂದು ಕೂಡಾ ವಿಧಾನಪರಿಷತ್ ನಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್

ಬೆಳಗಾವಿ: ಭೂ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಇಂದು ಕೂಡಾ ವಿಧಾನಪರಿಷತ್ ನಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಕ್ಕಾಗಿ 14 ಕಾಂಗ್ರೆಸ್ ಸದಸ್ಯರನ್ನು ಬುಧವಾರ ಅಮಾನತು ಮಾಡಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ದಿನದ ಮಟ್ಟಿಗೆ ಸದನವನ್ನು ಮುಂದೂಡಿದ್ದರು.

ನಿನ್ನಿ ನಿರ್ಣಯವೊಂದನ್ನು ಮಂಡಿಸಿದ ಕಾಂಗ್ರೆಸ್ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರ ರಾಜೀನಾಮೆಗೆ ಒತ್ತಾಯಿಸಿದರು.  ಬೈರತಿ ಬಸವರಾಜ್ ಮತ್ತು ಬಿಜೆಪಿ ಎಂಎಲ್ ಸಿ ಆರ್ ಶಂಕರ್, ನಕಲಿ ದಾಖಲೆ ಸೃಷ್ಟಿಸಿ, ಬೆಂಗಳೂರು ಪೂರ್ವ ತಾಲೂಕಿನ  ಕಲ್ಕೆರೆಯಲ್ಲಿ 35 ಎಕರೆ ಭೂಮಿ ಕಬಳಿಸಿರುವ ಆರೋಪವಿದೆ. ಭೂಮಿ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರು ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನ್ಯಾಯಾಲಯ ತೀರ್ಪು ನೀಡಿದೆ. 

ನಾರಾಯಣಸ್ವಾಮಿ ಅವರ ನಿರ್ಣಯನ್ನು ಬೆಂಬಲಿಸದ ಪ್ರತಿಪಕ್ಷ ನಾಯಕ ಎಸ್.ಆರ್ . ಪಾಟೀಲ್, ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಆದಾಗ್ಯೂ, ಸಭಾಪತಿ ಹೊರಟ್ಟಿ ಬೆಳಗಿನ ಕಲಾಪದ ವೇಳೆ ಚರ್ಚೆಗೆ ಅವಕಾಶ ನೀಡಲಿಲ್ಲ. ರೂಲಿಂಗ್ ನ್ನು ಪುನರ್ ಪರಿಶೀಲಿಸುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಆಗಲೂ ಸಭಾಪತಿ ಚರ್ಚೆಗೆ ಅವಕಾಶ ನೀಡದಿದ್ದಾಗ ಸದನದ ಬಾವಿಗಿಳಿದು ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು.

ಪದೇ ಪದೇ ಮನವಿಯನ್ನು ಪ್ರತಿಭಟನಾಕಾರರು ಕೇಳದಿದ್ದಾಗ ಹೊರಟ್ಟಿ 14 ಕಾಂಗ್ರೆಸ್ ಸದಸ್ಯರನ್ನು ದಿನದ ಮಟ್ಟಿಗೆ ಅಮಾನತು ಮಾಡಿದರು.ಎಸ್. ಆರ್. ಪಾಟೀಲ್, ನಾರಾಯಣಸ್ವಾಮಿ, ಸಿ.ಎಂ. ಇಬ್ರಾಹಿಂ, ಬಿ. ಕೆ. ಹರಿಪ್ರಸಾದ್, ನಜೀರ್ ಅಹ್ಮದ್, ಪಿ.ಆರ್. ರಮೇಶ್, ವೀಣಾ ಅಚ್ಚಯ್ಯ, ಪ್ರತಾಪ್ ಚಂದ್ರ ಶೆಟ್ಟಿ, ಆರ್. ಬಿ. ತಿಮ್ಮಾಪುರ್, ಬಸವರಾಜ್ ಪಾಟೀಲ್ ಇಟಗಿ, ಯು ಬಿ ವೆಂಕಟೇಶ್, ಸಿಎಂ ಲಿಂಗಪ್ಪ, ಹರೀಶ್ ಕುಮಾರ್ ಮತ್ತು ಗೋಪಾಲಸ್ವಾಮಿ ಅಮಾನತುಗೊಂಡ ಕಾಂಗ್ರೆಸ್ ಸದಸ್ಯರು. 

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದರು. ಬೈರತಿ ಬಸವರಾಜ್ ಮತ್ತು ಶಂಕರ್ 400 ಕೋಟಿ ರೂ. ಮೌಲ್ಯದ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿದರು. ಇಬ್ಬರು ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನ್ಯಾಯಾಲಯ ತೀರ್ಪು ನೀಡಿದ್ದರೂ ತಮ್ಮ ಬೇಡಿಕೆಯನ್ನು ಆಲಿಸಿದ ಸಭಾಪತಿ ಅಮಾನತು ಮಾಡಿದ್ದಾರೆ ಎಂದರು. 

ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಮತ್ತು ಶಂಕರ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸುವಂತೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟೇರ್ಟ್ ಆದೇಶಿಸಿದ್ದಾರೆ. ಬೈರತಿ ಹಾಗೂ ಅವರ ಸಂಬಂಧಿ ಶಂಕರ್ ಸಂಚು ಮಾಡಿ, 2003ರಲ್ಲಿ ತಮ್ಮ ಹೆಸರಿನಲ್ಲಿ 35 ಎಕರೆ ಭೂಮಿ ಕಬಳಿಸಿದ್ದಾರೆ. ಸಬ್ ರಿಜಿಸ್ಟ್ರರ್ ಬಳಿ ನಕಲಿ ಮಾಲೀಕರನ್ನು ತೋರಿಸಿ , ನೋಂದಣಿಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದರು. 

ಈ ವಿಷಯ ಬೆಳಕಿಗೆ ಬಂದಾಗ ಜಮೀನಿನ ಮೂಲ ಮಾಲೀಕ ಅಣ್ಣಯ್ಯಪ್ಪ, ತಹಸೀಲ್ದಾರ್ ಸಂಪರ್ಕಿಸಿದ್ದು, ಬೈರತಿ ಸೇರಿದಂತೆ ಐವರ ವಿರುದ್ಧ ದೂರು ಹೋದಾಗ ಪೊಲೀಸರು ನಿರಾಕರಿಸಿದ್ದಾರೆ. ಅವರು 2003ರಲ್ಲಿ ಕೋರ್ಟ್ ಮೆಟ್ಟಿಲೇರಿದಾಗ ಎಫ್ ಐಆರ್ ದಾಖಲಿಸಲು ನ್ಯಾಯಾಲಯ ಆದೇಶ ನೀಡಿರುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com