ಮಠ ಮಾನ್ಯಗಳಿಗೆ ನೀಡಿರುವ ದೇಣಿಗೆ ವಾಪಸ್ ಕೇಳಿ, ಕೊರೋನಾ ಸಂಕಷ್ಟಕ್ಕೆ ಬಳಸಿಕೊಳ್ಳಿ: ವಿಶ್ವನಾಥ್ ಸಲಹೆ

ಕೋವಿಡ್ ಸಂಕಷ್ಟ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ಹೀಗಾಗಿ ಮಠ ಮಾನ್ಯಗಳಿಗೆ ನೂರಾರು ಕೋಟಿ ದೇಣಿಗೆ ನೀಡಿದ್ದೀರಿ, ಈ ಸಂದರ್ಭದಲ್ಲಿ ಹಣ ವಾಪಾಸ್ಸು ಕೇಳಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ವಿಶ್ವನಾಥ್
ವಿಶ್ವನಾಥ್

ಮೈಸೂರು: ಕೋವಿಡ್ ಸಂಕಷ್ಟ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ಹೀಗಾಗಿ ಮಠ ಮಾನ್ಯಗಳಿಗೆ ನೂರಾರು ಕೋಟಿ ದೇಣಿಗೆ ನೀಡಿದ್ದೀರಿ, ಈ ಸಂದರ್ಭದಲ್ಲಿ ಹಣ ವಾಪಾಸ್ಸು ಕೇಳಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮಠ ಮಾನ್ಯಗಳಿಗೆ ಸರ್ಕಾರದ ಖಜಾನೆಯಿಂದ ಕೊಟ್ಟಿದ್ದೀರಿ. ಈಗ ಸಂಕಷ್ಟದ ಸಮಯ ಹಣ ವಾಪಸ್ಸು ಸಹಾಯ ಕೇಳಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮಠಗಳು ಮುಂದೆ ಬರಬೇಕು, ಅಗತ್ಯವಿರುವವರಿಗೆ ಊಟ, ಔಷಧಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನಾನು ಶಕ್ತಿಪೀಠದಲ್ಲಿ ಕುಳಿತ ಸಿಎಂ ಬಗ್ಗೆ ಮಾತಾಡಿದ್ದೇನೆ. ಶಕ್ತಿಕೇಂದ್ರ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ ಎಂದಿದ್ದೆ. ಆ ಶಕ್ತಿ ಕೇಂದ್ರದ ಕಣ್ಣು, ಕಿವಿ ಬಗ್ಗೆ ಹೇಳಿಕೆ ನೀಡಿದ್ದೆ. ಇಬ್ಬರು ಡಿಸಿಗಳಿಗೆ ಬಾಯಿ ಮುಚ್ಚಿ ಎಂದು ಹೇಳುವ ಧೈರ್ಯ ಸಿಎಂಗೆ ಇಲ್ಲ. ಶಕುನಿಗಳ ಮಾತು ರೈಲು ಹತ್ತಿಸುವವರ ಮಾತು ಕೇಳಬೇಡಿ ಎಂದಿದ್ದೆ ಎಂದು ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಎಸ್ ಟಿ ಸೋಮಶೇಖರ್ ಅವರೇ ಬರೀ ಅಧಿಕಾರಿಗಳ ಮಾತು ಕೇಳಬೇಡಿ. ನೀವೆ ನೇರವಾಗಿ ಆಸ್ಪತ್ರೆಗೆ ಹೋಗಿ ನೋಡಿ. ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತವಾಗುತ್ತದೆ. ಮೈಸೂರಿನಲ್ಲಿ ಡಿಎಚ್‌ಓ ಅವರೂ ಅಸಹಾಯಕರಾಗಿದ್ದಾರೆ. ಕರ್ನಾಟಕದ ಆಡಳಿತದವರಿಗೆ ಗರ ಬಡಿದಿದೆ. ಇಬ್ಬರು ಜಿಲ್ಲಾಧಿಕಾರಿಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಿಕೊಂಡಿದ್ದಾರೆ. ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತ. ಡಿಎಚ್‌ಓ ಸಹ ಅಸಹಾಯಕರಾಗಿದ್ದಾರೆ. ಕರ್ನಾಟಕದ ಆಡಳಿತದವರಿಗೆ ಗರ ಬಡಿದಿದೆ. ಪಕ್ಕದ ರಾಜ್ಯದವರು ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಬಿಎಂಪಿ ಬೆಡ್ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ವಾ.? ಒಬ್ಬ ಎಂಪಿ ಈ ಹಗರಣವನ್ನು ಬಯಲು ಮಾಡಬೇಕಾಗಿತ್ತಾ.? ಸರ್ಕಾರ ಏನು ಮಾಡುತ್ತಿದೆ. ನಾವು ಸಂಸದ ತೇಜಸ್ವಿ ಸೂರ್ಯರನ್ನು ಅಭಿನಂದಿಸಬೇಕು. ಇದಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಈ ಕೆಲಸ ಮಾಡಬಾರದು, ತೇಜಸ್ವಿ ಸೂರ್ಯ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದರು. ಸರ್ಕಾರ ಆಂಧ್ರ ಪ್ರದೇಶ ಮಾದರಿ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com