ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ಹಣ ಎತ್ತಲು ಹೋಗಬೇಡಿ, ನಿಮಗೆ ಒಳ್ಳೆಯದಾಗೋಲ್ಲ: ಎಚ್‌.ವಿಶ್ವನಾಥ್‌

ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹತ್ತು ಪೈಸೆ ಖರ್ಚು ಮಾಡುವ ಅಧಿಕಾರವೂ ಇಲ್ಲವಾಗಿದೆ. ಖರ್ಚು ಮಾಡುವ ಅಧಿಕಾರವಿದ್ದರೆ, ಅದು ವಿಜಯೇಂದ್ರನಿಗೆ ಮಾತ್ರ. ಪ್ರತಿ ಬಿಲ್‌ ಅನ್ನು ಬೆಂಗಳೂರಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಿಸಿದರು.
ವಿಶ್ವನಾಥ್
ವಿಶ್ವನಾಥ್

ಮೈಸೂರು:  ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹತ್ತು ಪೈಸೆ ಖರ್ಚು ಮಾಡುವ ಅಧಿಕಾರವೂ ಇಲ್ಲವಾಗಿದೆ. ಖರ್ಚು ಮಾಡುವ ಅಧಿಕಾರವಿದ್ದರೆ, ಅದು ವಿಜಯೇಂದ್ರನಿಗೆ ಮಾತ್ರ. ಪ್ರತಿ ಬಿಲ್‌ ಅನ್ನು ಬೆಂಗಳೂರಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣದ ಮೇಲೆ‌ ಸರ್ಕಾರ ಹಣ ಮಾಡಲು ಹೋಗಬಾರದು,  ನಿಮಗೆ ಒಳ್ಳೆಯದಾಗಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲಾ ಪವರ್ ವಿಜಯೇಂದ್ರ ಬಳಿ ಇದೆ. ಸರ್ಕಾರದ ಆಡಳಿತ ಕೇಂದ್ರೀಕರಣ ಆಗಿದೆ. ಇದೆಲ್ಲವು ಪರ್ಸೆಂಟೇಜ್‌ಗಾಗಿ ಮಾಡಿಕೊಂಡಿರವುದಾಗಿದೆ, ಮೈಸೂರು ಡಿಸಿಗೆ 10 ಪೈಸೆ ಖರ್ಚು ಮಾಡುವ ಪವರ್ ಇಲ್ಲ. ಜಿಲ್ಲಾ ಮಂತ್ರಿಗೂ ಕೂಡ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು ಎಂದು
ವಿಜಯೇಂದ್ರ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

‘ಸಮರ್ಥವಾಗಿ ಕೋವಿಡ್‌ ನಿರ್ವಹಿಸಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳನ್ನು ಪ್ರತಿ ಜಿಲ್ಲೆಗೆ ನಿಯೋಜಿಸಬೇಕು. ಅವರಿಗೆ ಸಂಪೂರ್ಣ ಅಧಿಕಾರ ನೀಡಿ, ಹಣ ಬಳಸಲು ಅವಕಾಶ ಕೊಡಬೇಕು. ಪ್ರತಿ ಜಿಲ್ಲೆಗೆ 100 ಕೋಟಿ ರು. ಮೀಸಲಿಡಿ. ಅವರ ಕೆಳಗೆ ಜಿಲ್ಲಾಧಿಕಾರಿಗಳು ಕೆಲಸ ಮಾಡಲಿ. ಆಮೇಲೆ  ಬೇಕಾದರೆ ಅಧಿಕಾರಿಗಳನ್ನು ಪ್ರಶ್ನಿಸಿ’ ಎಂದು ಸಲಹೆ ನೀಡಿದರು.

ಇನ್ನು ಹಳ್ಳಿಗಳಲ್ಲಿ ಸದ್ಯ ಸೋಂಕಿನ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಆದರೆ ಜಿಲ್ಲಾಧಿಕಾರಿಗಳು ಒಂದು ದಿನವೂ ಕೂಡ ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ. ಟಾಸ್ಕ್‌ಪೋರ್ಸ್ ಸಹ ಹೋಗಲಿಲ್ಲ. ಹಳ್ಳಿಗರ ಗೋಳು ಯಾರು ಕೇಳುತ್ತಿಲ್ಲ. ಸಿದ್ದರಾಮಯ್ಯ ಅವರೇ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅಹಿಂದ ಜನರು ಸಾಯುತ್ತಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com