ಹತ್ತಿದ ಏಣಿ ಒದೆಯುವುದರಲ್ಲಿ 'ಬುರಡೆರಾಮಯ್ಯ' ನಿಸ್ಸೀಮರು: ಬಿಜೆಪಿ

ಹತ್ತಿದ ಏಣಿ ಒದೆಯುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಹತ್ತಿದ ಏಣಿ ಒದೆಯುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಬಿಜೆಪಿ ಟೀಕಿಸಿದೆ. ರಾಜಕೀಯವಾಗಿ ಬೆಳೆಸಿದ ದೇವೇಗೌಡರಿಗೆ ದ್ರೋಹ ಮಾಡಿದಿರಿ. ಹೆಗಲುಕೊಟ್ಟ ಪರಮೇಶ್ವರ್ ಅವರ ಬೆನ್ನಿಗೆ ಚೂರಿ ಹಾಕಿದಿರಿ. ಜೊತೆಯಾಗಿ ಬಂದ ಮಹದೇವಪ್ಪ ಅವರನ್ನು ದೂರವಿಟ್ಟಿರಿ. ಈಗ ಜನತಾ ಪರಿವಾರದ ದಲಿತ ನಾಯಕರನ್ನೇ ನಿಂದಿಸುತ್ತಿದ್ದೀರಿ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ದಲಿತ ಸಮುದಾಯವನ್ನು ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡು ಬುರುಡೆ ರಾಮಯ್ಯ ಅವರಿಗೆ ದಲಿತ ವರ್ಗದ ಬಗ್ಗೆ ಕಿಂಚಿತ್ ಗೌರವವೂ ಇಲ್ಲ. ದಲಿತ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳುವ ಸಿದ್ದರಾಮಯ್ಯ, ಆ ಸಮುದಾಯದ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಮೀಸಲಾತಿ ಕೊಡಿಸಿದ್ದು ಕಾಂಗ್ರೆಸ್ ಅಲ್ಲ, ನೀವೂ ಅಲ್ಲ, ಮೀಸಲು ಹಕ್ಕು ನೀಡಿದ್ದು ಸಂವಿಧಾನ, ಆದರೆ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಂವಿಧಾನ ಮತ್ತು ದಲಿತರಿಗೆ ಅನ್ಯಾಯ ಮಾಡಿದೆ. ಆ ಐತಿಹಾಸಿಕ ಅಪಮಾನವನ್ನು ಮರೆಯಲು ಸಾಧ್ಯವೇ?  ಎಂದಿದೆ. 

 ನೀವು ಹೊಟ್ಟೆಪಾಡಿಗಾಗಿ ಖರ್ಗೆ ಅವರಿಂದ ಪ್ರತಿಪಕ್ಷ ನಾಯಕನ ಸ್ಥಾನ ಕಸಿದಿರಿ, ಪರಮೇಶ್ವರರನ್ನು ಸೋಲಿಸಿದಿರಿ, ಮಹಾದೇವಪ್ಪ ಅವರನ್ನು ಓಡಿಸಿದಿರಿ, ಜಾತಿ ಗಣತಿ ಮಾಡಿಸಿದಿರಿ, ನಿಮ್ಮ ಹೊಟ್ಟೆಪಾಡಿಗಾಗಿ ದಲಿತರಿಗೆ ನಿರಂತರ ದ್ರೋಹವೆಸಗಿದ್ದನ್ನು ಮರೆಯಲು ಸಾಧ್ಯವೇ ?ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com