ಡಾ. ಕೆ. ಸುಧಾಕರ್
ರಾಜಕೀಯ
ಬಿಟ್ ಕಾಯಿನ್ ಹಗರಣ: ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ- ಡಾ. ಕೆ. ಸುಧಾಕರ್
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಆರೋಪ ಮಾಡುತ್ತಿರುವಂತೆ ರಾಜ್ಯ ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಆರೋಪ ಮಾಡುತ್ತಿರುವಂತೆ ರಾಜ್ಯ ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಕೆ. ಸುಧಾಕರ್, ತನಿಖಾ ತಂಡ ಎಲ್ಲಾ ಮಾಹಿತಿಯನ್ನು ಇಂಟರ್ ಪೋಲ್, ಇಡಿ ಮತ್ತು ಸಿಬಿಐನೊಂದಿಗೆ ಹಂಚಿಕೊಂಡಿದೆ ಎಂದು ಹೇಳಿದರು.
ನಾವು ಸಮಗ್ರ ತನಿಖೆ ನಡೆಸಲು ಬಯಸುತ್ತೇವೆ. ನಾವು ಯಾವುದೇ ಸತ್ಯಗಳನ್ನು ಮರೆಮಾಚಲು ಅಥವಾ ಯಾರನ್ನೂ ರಕ್ಷಿಸಲು ಬಯಸುವುದಿಲ್ಲ, ತನಿಖೆಗೆ ಆದೇಶಿಸಿದ್ದು ನಾವೇ. ಶೀಘ್ರದಲ್ಲೇ ಎಲ್ಲ ಸಾಕ್ಷ್ಯಗಳೊಂದಿಗೆ ಸರ್ಕಾರ ಮುಂದೆ ಬರಲಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ