ಬಿಟ್ ಕಾಯಿನ್ ಹಗರಣದ ಸತ್ಯಾಸತ್ಯತೆಗಳ ಮುಚ್ಚಲು ತನಿಖೆ ನಡೆಸಲಾಗುತ್ತಿದೆ: ಪ್ರಿಯಾಂಕಾ ಖರ್ಗೆ

ಬಿಟ್‌ಕಾಯಿನ್ ಹಗರಣ ಬಯಲಾಗದಂತೆ ಇರುವ ದಾರಿಗಳನ್ನು ಮುಚ್ಚಿ ಹಾಕಲು ತನಿಖೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಪ್ರಿಯಾಂಕಾ ಖರ್ಗೆ
ಪ್ರಿಯಾಂಕಾ ಖರ್ಗೆ

ಬೆಂಗಳೂರು: ಬಿಟ್‌ಕಾಯಿನ್ ಹಗರಣ ಬಯಲಾಗದಂತೆ ಇರುವ ದಾರಿಗಳನ್ನು ಮುಚ್ಚಿ ಹಾಕಲು ತನಿಖೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಬಿಟ್ ಕಾಯಿನ್ ಹಗರಣ ಕುರಿತು ಮಾತನಾಡಿರುವ ಪ್ರಿಯಾಂಕಾ ಖರ್ಗೆಯವರು, ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸುವ ಕುರಿತು ಇರುವ ದಾಖಲೆಗಳ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಏನಿದು ಬಿಟ್ ಕಾಯಿನ್ ಪಕರಣ? ಹಗರಣ ಹೇಗಾಯಿತು?
ನಾವು ಕೇವಲ ಮೇಲ್ಮೈ ಮಾಹಿತಿಗಳನ್ನಷ್ಟೇ ಕಲೆ ಹಾಕಿದ್ದೇವೆ. ಹ್ಯಾಕರ್'ನ್ನು ಮೊದಲೇ ಬಂಧಿಸಲಾಗಿದೆ. ಆದರೆ, ಜನರಿಗೆ ಮಾಹಿತಿ ನೀಡಲಾಗಿರಲಿಲ್ಲ. ಈ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾದ ಬಳಿಕೇ ಹ್ಯಾಕರ್ ಬಂಧನವಾಗಿದೆ ಎಂಬ ವಿಚಾರ ನಮಗೆ ತಿಳಿದಿದ್ದು. ಹಲವು ಪ್ರಕರಣಗಳನ್ನು ದಾಖಲಿಸಿ ಆತನನ್ನು ಪೊಲೀಸರು ತಮ್ಮ ವಶದಲ್ಲಿಯೇ ಇರಿಸಿಕೊಂಡಿದ್ದಾರೆ. ಸರ್ಕಾರಿ ವೆಬ್‌ಸೈಟ್‌ಗಳು, ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ಗಳನ್ನು ಹ್ಯಾಕ್ ಮಾಡಿರುವುದಾಗಿ ಆರೋಪಿ ಹೇಳಿರುವುದರಿಂದ ಇದರಲ್ಲಿ ಸಾಕಷ್ಟು ಅನುಮಾನಗಳೂ ಮೂಡತೊಡಗಿವೆ.

ಆರೋಪಿ ಸ್ವಯಂಪ್ರೇರಿತ ಹೇಳಿಕೆಗಳಲ್ಲಿ, ಗೇಮಿಂಗ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಅಕ್ರಮವಾಗಿ ಲಾಭ ಗಳಿಸಿದ್ದೇನೆ ಮತ್ತು ಮೂರು ಕರೆನ್ಸಿ ಎಕ್ಸ್‌ಚೇಂಜ್‌ಗಳಿಗೆ ಹ್ಯಾಕ್ ಮಾಡಿದ್ದೇನೆಂದು ಹೇಳಿದ್ದಾನೆ. ಪೊಲೀಸರ ವಶದಲ್ಲಿದ್ದಾಗ ಆತನನ್ನು ಹಣ ಗಳಿಸಲು ಇತರೆ ಮಾರ್ಗಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಅನುಮಾನಗಳು ಮೂಡುತ್ತಿವೆ. ಆರೋಪಿ ಬಂಧನವಾದ ಕೂಡಲೇ ಸರ್ಕಾರವೇಕೆ ಇಡಿ ಹಾಗೂ ಇಂಟರ್ ಪೋಲ್'ಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ. ಆತನನ್ನು 3 ತಿಂಗಳುಗಳ ಕಾಲ ಕಸ್ಟಡಿಯಲ್ಲಿಟ್ಟುಕೊಳ್ಳಲಾಗಿದೆ. ಕೇಂದ್ರೀಯ ಸಂಸ್ಥೆಗಳು ಮಾಹಿತಿ ಕೇಳಿದ ಬಳಿಕ ಆತನಿಗೆ ಜಾಮೀನು ದೊರೆತಿದೆ. ಈ ಎಲ್ಲಾ ಬೆಳವಣಿಗೆಗಳು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಎಲ್ಲವೂ ಆರೋಪಿಯ ಹೇಳಿಕೆಗಳನ್ನು ಆಧರಿಸಿದೆ ಎಂದು ತೋರುತ್ತಿದೆ. ಆರೋಪಿ ಶ್ರೀಕೃಷ್ಣ ಸುಳ್ಳು ಹೇಳುತ್ತಿದ್ದಾನೆಂದು ಗೃಹ್ ಸಚಿವರು ಹೇಳುತ್ತಿದ್ದಾರೆ. ನಮ್ಮ ಆರೋಪಗಳು ಕೇವಲ ಆರೋಪಿಯ ಹೇಳಿಕೆಗಳನ್ನು ಆಧರಿಸಿಯೇ ಆಗಿಲ್ಲ. ಆದರೆ ಅಧಿಕೃತ ದಾಖಲೆಗಳು ಮತ್ತು ಪಂಚನಾಮ ವರದಿಗಳನ್ನು ಆಧರಿಸಿದೆ. ಆ ವರದಿಗಳಲ್ಲಿ, 31.8 ಬಿಟ್‌ಕಾಯಿನ್‌ಗಳಿವೆ ಎಂದು ಹೇಳಲಾಗಿದೆ ಮತ್ತು ಅವರು ಸುರಕ್ಷಿತವಾಗಿರಿಸಲು ಪಾಸ್‌ವರ್ಡ್ ಅನ್ನು ಬದಲಾಯಿಸಿದ್ದಾರೆಂದು ತಿಳಿದುಬಂದಿದೆ.

ಬಿಟ್ ಕಾಯಿನ್ ಗಳನ್ನು ಪೊಲೀಸರ ವ್ಯಾಲೆಟ್'ಗೆ ವರ್ಗಾಸಲು ವಿಫಲವಾಗಿರುವುದು ಕಂಡು ಬಂದಿದೆ. ಅಧಿಕೃತ ದಾಖಲೆಗಳಲ್ಲಿ ಇದೆಲ್ಲವೂ ಇದೆ. ಅವರು ಮಾಧ್ಯಮದ ಮುಂದೆ ಬಂದು ಮೂರು ಪಚನಾಮಾ ವರದಿಗಳನ್ನು ವಿವರಿಸಲಿ. ಜನವರಿ 12 ರಂದು ಆರೋಪಿ ತಂದೆ ತಮ್ಮ ಮಗನಿಗೆ ಡ್ರಗ್ಸ್ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಏಕೆ ಆರೋಪಿಯ ರಕ್ತದ ಮಾದರಿಗಳನ್ನು ಪರೀಕ್ಷಿಸಲಿಲ್ಲ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಲಿ. ಇಡಿಗೆ ಪತ್ರ ಬರೆಯಲು ಯಾವ ಕಾರಣಕ್ಕೆ ವಿಳಂಬ ಮಾಡಲಾಯಿತು? ಇದು ವಿಚಾರವೇ ಅಲ್ಲ ಎಂದಾದರೆ, ಮುಖ್ಯಮಂತ್ರಿಗಳೇಕೆ ಪ್ರಧಾನಿ ಜತೆ ಚರ್ಚಿಸಿದರು?

ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆದರೆ ಕರ್ನಾಟಕ ಮೂರನೇ ಬಿಜೆಪಿ ಮುಖ್ಯಮಂತ್ರಿಯನ್ನು ಕಾಣಲಿದೆ ಎಂದು ಹೇಳಿದ್ದೀರಿ. ಇಂತಹ ಹೇಳಿಕೆಗೆ ಆಧಾರವೇನು?
ಅಧಿಕಾರದಲ್ಲಿರುವವರ ಅನುಕೂಲಕ್ಕಾಗಿ ಆರೋಪಿಯನ್ನು ಕಸ್ಟಡಿಯಲ್ಲಿ ದುರ್ಬಳಕೆ ಮಾಡಲಾಗಿದೆ ಎಂದು ನಾವು ಅನುಮಾನಿಸುತ್ತಿದ್ದೇವೆ. ದೇಶದ ಮೊದಲ ಕ್ರಿಪ್ಟೋಕರೆನ್ಸಿ ಹಗರಣ ನಡೆಯುತ್ತಿದ್ದಾಗ, ಗೃಹ ಸಚಿವರಿಗೆ (ಅಂದು ಬಸವರಾಜ ಬೊಮ್ಮಾಯಿ ಅವರು ಗೃಹ ಮಂತ್ರಿಯಾಗಿದ್ದರು) ಅದರ ಬಗ್ಗೆ ತಿಳಿದಿರಲಿಲ್ಲ ಮತ್ತು ಅದರ ಬಗ್ಗೆ ಪ್ರತಿದಿನ ಈ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಲಾಗುವುದಿಲ್ಲವೇ? ಇದರ ಬಗ್ಗೆ ಗುಪ್ತಚರ ವರದಿಗಳು ಬರುವುದಿಲ್ಲವೇ?

ಆರೋಪಿಯು ತಾನು 1.2 ಲಕ್ಷ ಬಿಟ್‌ಕಾಯಿನ್‌ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಅದಕ್ಕಿಂತ ಮುಖ್ಯವಾಗಿ, ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿದಾಗ ಮತ್ತು ಬಿಡ್‌ಗಳನ್ನು ಬದಲಾಯಿಸುವಾಗ, ಗೃಹ ಸಚಿವರು ಕ್ರಮ ಕೈಗೊಳ್ಳಲು ಇದು ಸಾಕಾಗುತ್ತದೆ. ಗೃಹ ಸಚಿವರಿಗೆ ಈ ಅರಿವಿದೆಯೋ ಇಲ್ಲವೋ? ಅರಿವಿದೆ ಎಂಬುದಾದರೆ ಕ್ರಮವೇಕೆ ಕೈಗೊಳ್ಳಲಿಲ್ಲ? ಸರ್ಕಾರರ ಮತ್ತು ಬಿಜೆಪಿ ಇದಕ್ಕೆ ಉತ್ತರಿಸಬೇಕಿದೆ. ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರೆ ಅವರ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕುತ್ತೇನೆ.

2018ರಲ್ಲಿ ಶ್ರೀಕೃಷ್ಣ ವಿರುದ್ಧ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನ ಜೊತೆ ಪ್ರಕರಣ ದಾಖಲಾಗಿತ್ತು...?
ಅವರು 2018 ರಲ್ಲಿ ಏನು ಮಾಡಿದ್ದಾರೆಂದು ನಮಗೆ ಹೇಗೆ ತಿಳಿಯುತ್ತದೆ? ಆ ಸಮಯದಲ್ಲಿ ಅಧಿಕಾರಿಗಳು ಅಸಮರ್ಥರಾಗಿದ್ದರು ಎಂದು ಭಾವಿಸೋಣ. ಆ ಅಸಮರ್ಥತೆಯನ್ನು ಮುಂದುವರಿಸುತ್ತೀರಿ ಎಂದು ಹೇಳಲು ನೀವು ಪ್ರಯತ್ನಿಸುತ್ತಿದ್ದೀರಾ? ಇದು ಸರ್ಕಾರ ಕೊಡಬೇಕಾದ ಉತ್ತರವೇ? ತಿಳಿದೋ ತಿಳಿಯದೆಯೋ ಸರ್ಕಾರ ಇದರಲ್ಲಿ ಭಾಗಿಯಾಗಿದೆ, ಅವರ ಸಂಬಂಧಿಕರು ಭಾಗಿಯಾಗಿದ್ದಾರೆ. ಈ ತನಿಖೆಯು ಹಗರಣ ಬಯಲಾಗದಂತೆ ಇರುವ ದಾರಿಗಳನ್ನು ಮುಚ್ಚಿ ಹಾಕುವ ಸಲುವಾಗಿ ಆಗಿದೆಯೇ ಹೊರತು. ಬಯಲು ಮಾಡಲು ಅಲ್ಲ.

ಇವೆಲ್ಲವೂ ರಾಜಕೀಯ ಪ್ರೇರಿತ ಆರೋಪ ಎಂದು ಸಿಎಂ ಮತ್ತು ಗೃಹ ಸಚಿವರು ಹೇಳುತ್ತಿದ್ದಾರೆ...?
ಈ ದೇಶದಲ್ಲಿ ಆಡಳಿತ ಸೇರಿದಂತೆ ಎಲ್ಲದಕ್ಕೂ ವಿರೋಧ ಪಕ್ಷದವರೇ ಹೊಣೆಯಾಗುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ತನಿಖೆಯನ್ನು ಕೇಂದ್ರ ಸಂಸ್ಥೆಗಶಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳುತ್ತಾರೆ. ಕೇಂದ್ರ ಸಂಸ್ಥೆಗಳಿಗೆ ಪ್ರಕರಣದ ತನಿಖೆಯನ್ನು ಕೊಟ್ಟಿದ್ದೇವೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅವರು ನಮ್ಮ ಬಾಯಿ ಮುಚ್ಚಿಸಬಹುದು. ಆ ದಾಖಲೆಗಳನ್ನೇಕೆ ಬಿಡುಗಡೆ ಮಾಡಲಾಗುತ್ತಿಲ್ಲ? ಬಿಡುಗಡೆಗೆ ತಡೆಯುತ್ತಿರುವ ಶಕ್ತಿಯಾದರೂ ಯಾವುದು? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com