ಸುಭಿಕ್ಷ, ಸುರಕ್ಷಿತ, ಸಮೃದ್ಧ, ಸಂಪದ್ಭರಿತ ಕರ್ನಾಟಕ ಕಟ್ಟುವ ಸಂಕಲ್ಪ: ಮುಖ್ಯಮಂತ್ರಿ ಬೊಮ್ಮಾಯಿ
ಸುಭಿಕ್ಷ, ಸುರಕ್ಷಿತ, ಸಮೃದ್ಧ, ಸಂಪದ್ಭರಿತ ಕರ್ನಾಟಕವನ್ನು ಕಟ್ಟುವ ಸಂಕಲ್ಪವನ್ನು ತೊಟ್ಟಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 18th November 2021 09:16 PM | Last Updated: 19th November 2021 01:42 PM | A+A A-

ಕೊಪ್ಪಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಬಿಜೆಪಿ ಮುಖಂಡರು
ಕೊಪ್ಪಳ: ಸುಭಿಕ್ಷ, ಸುರಕ್ಷಿತ, ಸಮೃದ್ಧ, ಸಂಪದ್ಭರಿತ ಕರ್ನಾಟಕವನ್ನು ಕಟ್ಟುವ ಸಂಕಲ್ಪವನ್ನು ತೊಟ್ಟಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ವತಿಯಿಂದ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ‘ಜನಸ್ವರಾಜ್’ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಬಲದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗೌರವದ, ಸ್ವಾಭಿಮಾನದ ಬದುಕು ಕಟ್ಟಲು, ದುಡಿಮೆಯಿಂದ ಆತ್ಮಾಭಿಮಾನದಿಂದ ಬದುಕಲು ಎಲ್ಲ ರೀತಿಯ ಸೌಕರ್ಯ ಹಾಗೂ ಅವಕಾಶಗಳನ್ನು ಒದಗಿಸುವ ನಿಶ್ಚಯ ಮಾಡಲಾಗಿದೆ. ಅಮೃತ ಯೋಜನೆಯಡಿ ಆರೋಗ್ಯ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಇಂದು ರಾಜ್ಯ ಬಿಜೆಪಿ ವತಿಯಿಂದ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಾಲ್ಕು ತಂಡಗಳಿಂದ ಆಯೋಜಿಸಲಾಗಿರುವ ಜನ ಸ್ವರಾಜ್ ಯಾತ್ರೆಗೆ ಕೊಪ್ಪಳದಲ್ಲಿ ವಿಜಯದ ಕಹಳೆ ಊದುವ ಮೂಲಕ ಚಾಲನೆ ನೀಡಿ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಾಯಿತು. #ಜನಸ್ವರಾಜ್ @BJP4Karnataka pic.twitter.com/5sO9ByMW1t
— Basavaraj S Bommai (@BSBommai) November 18, 2021
ರಾಜ್ಯದ ತಲಾವಾರು ಆದಾಯ ಹೆಚ್ಚಾಗಲು, ಹಿಂದುಳಿದ ವರ್ಗಗಳು, ಎಸ್.ಸಿ.ಎಸ್.ಟಿ ಸಮುದಾಯದವರು ಹಾಗೂ ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿ ಸಬಲರಾಗಬೇಕು. ಅವರ ಕೌಟುಂಬಿಕ ಜೀವನದ ಗುಣಮಟ್ಟ ಹೆಚ್ಚಿ ರಾಜ್ಯದ ಒಟ್ಟು ತಲಾವಾರು ಆದಾಯ ಹೆಚ್ಚಾಗಬೇಕು ಎಂದರು.
ದುಡಿಮೆಯಿಂದ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಅದಕ್ಕೆ ವಿನೂತನ ಕಾರ್ಯಕ್ರಮವನ್ನು ರೂಪಿಸಿ, ಅವರೆಲ್ಲರಿಗೂ ಅವಕಾಶಗಳನ್ನು ಸರ್ಕಾರ ಮಾಡಿಕೊಡಲಿದೆ. ರಾಜ್ಯದಲ್ಲಿ 75 ಸಾವಿರ ಎಸ್ ಸಿ/ ಎಸ್ ಟಿ ಹಾಗೂ ಹಿಂದುಳಿದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ನಗರ ಪ್ರದೇಶಗಳ ಅಭಿವೃದ್ಧಿಗೆ ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ 1 ಕೋಟಿ ರೂ. ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.