ಚುನಾವಣೆ ವೇಳೆ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜ್ವರ ಶುರು: ಕುಮಾರಸ್ವಾಮಿ ಲೇವಡಿ

ಚುನಾವಣೆ ಬಂದರೆ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್‌ ಜ್ವರ ಶುರುವಾಗುತ್ತೆ. ಚುನಾವಣೆ ಹತ್ತಿರ ಬಂದರೆ ಜೆಡಿಎಸ್ ಬಿಜೆಪಿ ಒಪ್ಪಂದ ಮಾಡಿಕೊಳ್ತಾರೆ ಮುಗಿದ ಮೇಲೆ‌ ಮರೆತು ಹೋಗುತ್ತಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಶಿಡ್ಲಘಟ್ಟ: ಚುನಾವಣೆ ಬಂದರೆ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್‌ ಜ್ವರ ಶುರುವಾಗುತ್ತೆ. ಚುನಾವಣೆ ಹತ್ತಿರ ಬಂದರೆ ಜೆಡಿಎಸ್ ಬಿಜೆಪಿ ಒಪ್ಪಂದ ಮಾಡಿಕೊಳ್ತಾರೆ ಮುಗಿದ ಮೇಲೆ‌ ಮರೆತು ಹೋಗುತ್ತಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದೇನೆ. ಬಿಜೆಪಿಯವರು ಹಾಕಿದ್ದಾರೆ. ನಮ್ಮನ್ನ ಸೋಲಿಸೋದಕ್ಕೆ ಬಿಜೆಪಿಯವರು ಪ್ರಯತ್ನ ಮಾಡ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಕಳುಹಿಸಿ ಅಭ್ಯರ್ಥಿ ಮಾಡುತ್ತಾರೆ.

ಮಂಡ್ಯದಲ್ಲಿ ಮಂತ್ರಿಯ ಪಿಎ ಕರೆತಂದು ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಮಾಡಿದ್ದಾರೆ. ಅಪ್ಪ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಯಾದರೆ ಮಗ ಬಿಜೆಪಿಯಲ್ಲಿ ಅಭ್ಯರ್ಥಿ ಆಗುತ್ತಾರೆ. ನನ್ನ ಭಾಗದ ಆರು ಕ್ಷೇತ್ರದ ಮತದಾರಾರು ಕಾಂಗ್ರೆಸ್ ಗೆ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು. ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿರುವ ಕಡೆ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನಾವು ಅವರ ವಿರುದ್ಧವೂ ಹೋರಾಡಬೇಕಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈಗ ಅವರ ಮಗನಿಗೆ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಈಗ ಸಚಿವರಾಗಿರುವವರ ಆಪ್ತ ಸಹಾಯಕರಾಗಿದ್ದವರು ಈಗ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಇದು ಕಾಂಗ್ರೆಸ್, ಬಿಜೆಪಿ ನಡುವಣ ಹೊಂದಾಣಿಕೆ ತಿಳಿಸುತ್ತದೆ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com