ಬೆಳಗಾವಿ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಗೆ ಬಂಡಾಯ ಅಭ್ಯರ್ಥಿಗಳೇ ನುಂಗಲಾರದ ತುತ್ತು!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರ ಕೂಡ ಅಂತ್ಯವಾಗಿದೆ. ಆದರೆ ಇದೇ ಮೊದಲ ಬಾರಿಗೆ ಪಕ್ಷದ ಚಿನ್ಹೆಗಳ ಮೇಲೆ ಚುನಾವಣೆ ನಡೆಯುತ್ತಿದ್ದು, ಬಂಡಾಯ ಅಭ್ಯರ್ಥಿಗಳು ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರ ಕೂಡ ಅಂತ್ಯವಾಗಿದೆ. ಆದರೆ ಇದೇ ಮೊದಲ ಬಾರಿಗೆ ಪಕ್ಷದ ಚಿನ್ಹೆಗಳ ಮೇಲೆ ಚುನಾವಣೆ ನಡೆಯುತ್ತಿದ್ದು, ಬಂಡಾಯ ಅಭ್ಯರ್ಥಿಗಳು ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. 

58 ಸದಸ್ಯ ಬಲದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಇದೇ ಸೆಪ್ಟೆಂಬರ್ 3ರಂದು ನಡೆಯಲಿದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ರಾಜಕೀಯ ಪಕ್ಷಗಳು ಈಗಾಗಲೇ ನಗರಾದ್ಯಂತ ಹೈ ವೋಲ್ಟೇಜ್ ಪ್ರಚಾರ ನಡೆಸಿವೆ. ತಮ್ಮ ಪಕ್ಷದ ಅಭ್ಯರ್ಥಿಗಳ ಶತಾಯಗತ ಜಯಕ್ಕೆ ಪಣತೊಟ್ಟಿವೆ. ಬಹಿರಂಗ ಪ್ರಚಾರ ಅಂತ್ಯವಾಗಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆ ಮತಯಾಚನೆ ನಡೆಸುತ್ತಿದ್ದಾರೆ. 

ಬಂಡಾಯ ಅಭ್ಯರ್ಥಿಗಳಿಗೆ ಶಾಕ್, ಪಕ್ಷದಿಂದ ಉಚ್ಛಾಟನೆ
 ಇದೇ ವೇಳೆ, ಬೆಳಗಾವಿ ಪಾಲಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಪಕ್ಷದ ನಾಯಕರು ಶಾಕ್ ನೀಡಿದ್ದು, ಬಿಜೆಪಿಯಲ್ಲಿ 9 ಜನ, ಕಾಂಗ್ರೆಸ್ ನಲ್ಲಿ ಇಬ್ಬರನ್ನು ಉಚ್ಛಾಟನೆ ಮಾಡಲಾಗಿದೆ. ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷೇತರರು ದೊಡ್ಡ ಸವಾಲ್ ಆಗಿದ್ದು, ಫಲಿತಾಂಶದ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಬೆಳಗಾವಿ ‌ಮಹಾನಗರ ಪಾಲಿಕೆ ಚುನಾವಣೆ ದೊಡ್ಡ ಸವಾಲ್ ಆಗಿದ್ದು, ಸ್ಥಳೀಯ ಇಬ್ಬರು ಶಾಸಕರಿಗೆ ಮುಂದಿನ ಚುನಾವಣೆಗೆ ಇದು ದಿಕ್ಸೂಚಿ ಆಗಲಿದೆ. ಹೀಗಾಗಿ ಶತಾಯ ಗತಾಯ ಮೇಲುಗೈ ಸಾಧಿಸಲು ಹೋರಾಟ ನಡೆಸುತ್ತಿದ್ದಾರೆ. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಮೊದಲ ಸಲ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದು, ಪಕ್ಷಗಳು ಅಭ್ಯರ್ಥಿಗಳ ಆಯ್ಕೆ, ಪ್ರಚಾರದಲ್ಲಿ ಅನೇಕ ಸಮಸ್ಯೆಗಳು ಎದುರಿಸಿದೆ. ಒಂದು ವಾರ್ಡ್ ನಲ್ಲಿ ಮೂರು, ನಾಲ್ಕು ಜನ ಆಕಾಂಕ್ಷಿಗಳು ಇದ್ದದ್ದು, ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಬಂಡಾಯ ಏಳಲು ಕಾರಣವಾಗಿತ್ತು. ಅಲ್ಲದೆ ಪ್ರತ್ಯೇಕ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. 

ಹೀಗೆ ಬಂಡಾಯ ಮಾಡಿದ್ದ 9 ಜನರನ್ನು  ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಮಾಜಿ ಮೇಯರ್ ಶಿವಾಜಿ ಸುಂಟಕರ, ದೀಪಕ ಜಮಖಂಡಿ, ಸುರೇಶ ಯಾದವ್.ಶಿವಾನಂದ ಮುಗಳಿಹಾಳ್, ಗಣೇಶ ನಂದಗಡಕರ್, ಸಂಜಯ ಸವಾಸೇರಿ, ಆರತಿ ಪಾಟೋಳೆ, ಶಿವಾನಂದ ಮುರಗೋಡ, ಜ್ಯೋತಿ‌ ಭಾವಿಕಟ್ಟಿ ಉಚ್ಛಾಟನೆ ಮಾಡಿ ಆದೇಶ ಮಾಡಲಾಗಿದೆ.‌ ಈ ಬಗ್ಗೆ ಪಕ್ಷದಲ್ಲಿ ಸಾಕಷ್ಟು ಚರ್ಚೆ ನಡೆದು ನಂತರ ನಿರ್ಧಾರ ಪ್ರಕಟ ಮಾಡಲಾಗಿದೆ‌. ಆದರೆ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿವರನ್ನು ಈಗ ಏಕಾಏಕಿ ಹೊರ ಹಾಕಿದರ ಬಗ್ಗೆ ಸಹ ಹಲವರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಹ ಇದೇ ರೀತಿಯ ಪರಿಸ್ಥಿತಿ ಇದ್ದು, ಜಯಶ್ರೀ ಮಾಳಗಿ ಮತ್ತು ಜಯರಾಜ್ ಹಲೇಕರ್ ಇಬ್ಬರನ್ನೂ ಉಚ್ಛಾಟನೆ ಮಾಡಲಾಗಿದೆ. 

ಈ ಬಗ್ಗೆ ಮಾತನಾಡಿರುವ ಖ್ಯಾತ ರಾಜಕಾರಣಿ ಮತ್ತು ಮಾಜಿ ಕೌನ್ಸಿಲರ್ ಶಿವನಗೌಡ ಪಾಟೀಲ್ ಅವರು, 'ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಬಂಡಾಯ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದರಿಂದ ಖಂಡಿತವಾಗಿಯೂ ಬಿಸಿ ಎದುರಿಸಬೇಕಾಗುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ತಮ್ಮ ಅಧಿಕೃತ ಅಭ್ಯರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುವುದನ್ನು ತಪ್ಪಿಸಬೇಕಾಗಿತ್ತು. ಅನೇಕ ಬಂಡಾಯ ಅಭ್ಯರ್ಥಿಗಳು ಖಂಡಿತವಾಗಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆಗೆ ಖಂಡಿತಾ ಅಪಾಯವನ್ನುಂಟು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಂಡಾಯ ಅಭ್ಯರ್ಥಿಗಳೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ
ಅಂತೆಯೇ ಕಳೆದ ಸಲ ಪಾಲಿಕೆ ಸದ್ಯರಾಗಿದ್ದ ಅನೇಕರು ಈ ಸಲ ಯಾವುದೇ ಪಕ್ಷದ ಚಿನ್ಹೆ ಬದಲಾಗಿ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ. ಜತೆಗೆ ಪಾಲಿಕೆ  ಚುನಾವಣೆ ಗೆಲುವು ಸಾಧಿಸಲು ಪಕ್ಷಕ್ಕಿಂತ ಎಲ್ಲರೂ ಮುಖ್ಯ ಎಂಬ ನಿರ್ಧಾರಕ್ಕೆ ಅನೇಕರು ಬಂದಿದ್ದಾರೆ‌. ಬೆಳಗಾವಿ ಪಾಲಿಕೆಯಲ್ಲಿ ಭಾಷೆ, ಗಡಿ ವಿಚಾರದಲ್ಲಿ ನಡೆಯುತ್ತಿದ್ದ ಚುನಾವಣೆ ಈಗ ಪಕ್ಷಗಳ ಚಿನ್ಹೆ ಮೇಲೆ ನಡೆಯುತ್ತಿರುವುದೂ ಕೂತೂಹಲಕ್ಕೆ ಕಾರಣವಾಗಿದೆ. ರಾಜಕೀಯ ತಜ್ಞರ ಪ್ರಕಾರ ಹಾಲಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಗುರುತಿಸಲ್ಪಟ್ಟ ರಾಜಕೀಯ ಪಕ್ಷಗಳಲ್ಲಿನ ಕೆಲವು ವಿಭಾಗಗಳು ಜಾತಿ ಸಮೀಕರಣಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು. ಇದಲ್ಲದೆ ಪ್ರತಿ ವಾರ್ಡಿನಲ್ಲಿಯೂ ಸ್ಥಳೀಯ ಸಮಸ್ಯೆಗಳ ಮೇಲೆ ಮಾತ್ರ ನಿಗಮದ ಚುನಾವಣೆಗಳು ನಡೆಯುತ್ತವೆ. 

ಜನರು ಸ್ಥಳೀಯ ಪ್ರದೇಶದ ಅಭಿವೃದ್ಧಿಗೆ ಕೆಲಸ ಮಾಡಲು ಸಾಮರ್ಥ್ಯಗಳನ್ನು ಆಧರಿಸಿ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ಅಂತಹ ಜನರು ಇತರ ಅಂಶಗಳನ್ನು ಪರಿಗಣಿಸಿ ಮತ ಚಲಾಯಿಸುವವರಿಗಿಂತ ದೊಡ್ಡವರಾಗಿರುತ್ತಾರೆ ಎಂದು ದರ್ಬಾರ್ ಗಲ್ಲಿ ನಿವಾಸಿ ಸಲೀಂ ಫನಿಬಂಡ್ ಹೇಳಿದ್ದಾರೆ. 

ಸೆಪ್ಟೆಂಬರ್ 3 ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಮತದಾನಕ್ಕೆ ಒಂದೇ ದಿನ ಬಾಕಿ ಇದ್ದು, ಬೆಳಗಾವಿ ಜನ ಯಾವ ವಿಚಾರಕ್ಕೆ ಮತ ಹಾಕಲಿದ್ದಾರೆ ಎಂಬುದು ಕಾದು ನೋಡಬೇಕು. ಒಟ್ಟು 58 ಸದಸ್ಯ ಬಲದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಢಳಿತ ಚುಕ್ಕಾಣೆ ಹಿಡಿಯಲು ಯಾವುದೇ ಪಕ್ಷ 30 ಸದಸ್ಯರ ಬೆಂಬಲ ಹೊಂದಿರಬೇಕು.  ಬೆಳಗಾವಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಹೆಚ್ಚಿನ ಸಂದರ್ಭಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದ ಎಂಇಎಸ್ ಈ ಬಾರಿ ತನ್ನ ಪ್ರಚಾರಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ಗಮನಿಸಿದರೆ ಈ ಬಾರಿ ಉತ್ತಮ ಅವಕಾಶವಿದೆ. ಬೆಳಗಾವಿಯಲ್ಲಿ ಮರಾಠಿಗರ ಬೃಹತ್ ಬೆಂಬಲದೊಂದಿಗೆ ಶಿವಸೇನಾ, ಮೈತ್ರಿ ಮಾಡಿಕೊಳ್ಳುವ ಮೂಲಕ ಎಂಇಎಸ್‌ನ ಅನೇಕ ಕಾರ್ಯತರು ಹೆಚ್ಚಿನ ಸೀಟುಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. 

ಏತನ್ಮಧ್ಯೆ, ಸ್ಥಳೀಯ ಚುನಾವಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸ್ಥಳೀಯ ಆಡಳಿತವು ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡುತ್ತಿದೆ. ಗೃಹ ರಕ್ಷಕರ ಉಪ ಕಮಾಂಡೆಂಟ್ ಪ್ರಕಾರ, ಬೆಳಗಾವಿ ನಗರದಲ್ಲಿ ಕನಿಷ್ಠ 300 ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಸಂಪೂರ್ಣವಾಗಿ ಲಸಿಕೆ ಹಾಕಿದ ಗೃಹ ರಕ್ಷಕರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಲಾಗುವುದು ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com