ಕಲಬುರಗಿ ಪಾಲಿಕೆ ಚುಕ್ಕಾಣಿ ಯಾರಿಗೆ? 'ತೆನೆ ಹೊತ್ತ ಮಹಿಳೆ' ನಡೆ ಇನ್ನೂ ನಿಗೂಢ; ಸೇಫ್ ಸ್ಥಳಕ್ಕೆ ಜೆಡಿಎಸ್ ಕೌನ್ಸಿಲರ್ಸ್!

ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗಿದೆ, ಪಕ್ಷವು ತನ್ನ ನಾಲ್ಕು ಕಲಬುರಗಿ ಕೌನ್ಸಿಲರ್‌ಗಳನ್ನು ಬೆಂಗಳೂರಿನ ಸುರಕ್ಷಿತ ಮನೆಯೊಂದರಲ್ಲಿ ಲಾಕ್ ಮಾಡಿಟ್ಟಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗಿದೆ, ಪಕ್ಷವು ತನ್ನ ನಾಲ್ಕು ಕಲಬುರಗಿ ಕೌನ್ಸಿಲರ್‌ಗಳನ್ನು ಬೆಂಗಳೂರಿನ ಸುರಕ್ಷಿತ ಮನೆಯೊಂದರಲ್ಲಿ ಲಾಕ್ ಮಾಡಿಟ್ಟಿದೆ.

ಕಲಬುರಗಿ  ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು  ಕಾಂಗ್ರೆಸ್ ಮತ್ತು ಬಿಜೆಪಿ ಹರಸಾಹಸ ಮಾಡುತ್ತಿವೆ. 55 ಸದಸ್ಯರಿರುವ ಕಲಬುರಗಿ ಪಾಲಿಕೆಯಲ್ಲಿ  ಕೊರತೆಯಿರುವ ಸ್ಥಾನಗಳನ್ನು ತುಂಬಲು ಎರಡು ಪ್ರಮುಖ ಪಕ್ಷಗಳು ಹಣದ ಹೊಳೆಯನ್ನೆ ಹರಿಸಲು ಸಿದ್ಧವಾಗಿವೆ.

ತಮ್ಮ ಪಕ್ಷದ ನಾಲ್ವರು ಸದಸ್ಯರನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  ಖಚಿತಪಡಿಸಿದ್ದಾರೆ. ಸದಸ್ಯರೊಂದಿಗೆ ಸಭೆ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಕೌನ್ಸಿಲರ್‌ಗಳಾದ ಎನ್ ಅಪ್ಪಾಜಿ ಗೌಡ, ಸಂದೇಶ್ ನಾಗರಾಜ್, ಸಿಆರ್ ಮನೋಹರ್ ಮತ್ತು ಕಾಂತರಾಜ್ ಬಿಎಂಎಲ್‌ ತಮ್ಮ ಕೌನ್ಸಿಲರ್ ಗಳಿಗೆ ತಲಾ 75 ಲಕ್ಷ ಪಾವತಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಯಾವ ಪಕ್ಷವನ್ನು ಬೆಂಬಲಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಈ ಸಂಬಂಧ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ , ಅದನ್ನು ನಾಲ್ವರು ಕೌನ್ಸಿಲರ್‌ಗಳಿಗೆ ಬಿಟ್ಟಿರುವುದಾಗಿ ಹೇಳಿದರು. ಜೆಡಿಎಸ್ ಬಿಗಿಪಟ್ಟು ಹಿಡಿದು ಚೌಕಾಶಿ ನಡೆಸುತ್ತಿದೆ, ಜೆಡಿಎಸ್‌ಗೆ ಮೇಯರ್ ಆಗಿ ಐದು ಅವಧಿಗಳಲ್ಲಿ ಎರಡು ಬಾರಿ ಮತ್ತು ಅವರ ಆಯ್ಕೆಯ ಮೂರು ಸ್ಥಾಯಿ ಸಮಿತಿಗಳನ್ನು ನೀಡಬೇಕು ಎಂದು ಕೌನ್ಸಿಲರ್‌ಗಳು ಬೇಡಿಕೆಯಿಟ್ಟಿದ್ದಾರೆ.

ಮೇಯರ್ ಮತ್ತು ಉಪ ಮೇಯರ್ ಚುನಾವಣೆ ದಿನಾಂಕಗಳನ್ನು ಘೋಷಿಸಿದ ನಂತರ ನಾವು ಈ ಎಲ್ಲವನ್ನು ನಿರ್ಧರಿಸುತ್ತೇವೆ. ನನ್ನ ಆದ್ಯತೆ ಈ ನಾಗರಿಕ ಚುನಾವಣೆಗಳಲ್ಲ. ಕಲಬುರಗಿ ದಕ್ಷಿಣ ಮತ್ತು ಉತ್ತರ ಎರಡು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ನಾನು ಕೌನ್ಸಿಲರ್‌ಗಳಿಗೆ ಹೇಳಿದ್ದೇನೆ. ನಾವು ರಾಜ್ಯಾದ್ಯಂತ ಒಟ್ಟಾರೆ 100 ವಿಧಾನಸಭಾ ಸ್ಥಾನಗಳನ್ನು ಗೆಲ್ಲಲು ಬಯಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಎಲ್ಲಾ ಮೂರು ಪಕ್ಷಗಳು ಈಗ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ 25 ಸ್ಥಾನಗಳಿಗೆ ಗರಿಷ್ಠ ಪಾಲನ್ನು ಪಡೆಯಲು ಪ್ರಯತ್ನಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com