'ಬಾರ್ ಸಲಹೆಗಾರ ಸಿಟಿ ರವಿ ಮಾರ್ಗದರ್ಶನದಲ್ಲಿ ಬಾರ್ ತೆರೆದು, ಬಿಜೆಪಿ ಕಚೇರಿಯಲ್ಲಿ ಕುಡಿದು ಬಡಿದಾಡಿಕೊಳ್ಳಲಿ'
ಮಾನಪ್ಪ ವಜ್ಜಲ್‌ರ ಪುತ್ರರಿಂದ ಮಾರಣಾಂತಿಕ ಹಲ್ಲೆ ನಡೆದರೂ ದೂರು ದಾಖಲಿಸಲಿಲ್ಲ, ರಾಜ್ಯದಲ್ಲಿ ಅಧಿಕಾರದಲ್ಲಿರುವ
ಬಿಜೆಪಿ ಸರ್ಕಾರ ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತಿದೆ ಎಂದು ಟೀಕಿಸಿದೆ.
Published: 17th September 2021 01:53 PM | Last Updated: 17th September 2021 05:27 PM | A+A A-

ಸಿ.ಟಿ ರವಿ
ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಉದ್ಯಮಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಹರಿ ಹಾಯ್ದಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾನಪ್ಪ ವಜ್ಜಲ್‌ರ ಪುತ್ರರಿಂದ ಮಾರಣಾಂತಿಕ ಹಲ್ಲೆ ನಡೆದರೂ ದೂರು ದಾಖಲಿಸಲಿಲ್ಲ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತಿದೆ ಎಂದು ಟೀಕಿಸಿದೆ.
ಇದನ್ನೂ ಓದಿ: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ಪುಂಡಾಟ: ಉದ್ಯಮಿ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಹಿಂದೆ ಗೋವಿಂದ್ ಕಾರಜೋಳರ ಪುತ್ರ ಪೊಲೀಸರಿಗೆ 'ಬಾಯಲ್ಲಿ ಬೂಟು ಇಡುತ್ತೇನೆ' ಎಂದು ಬೆದರಿಕೆಯೊಡ್ಡಿದ್ದ. ಇಂದು ಮಾನಪ್ಪ ವಜ್ಜಲ್ ಪುತ್ರರು ನಶೆಯಲ್ಲಿ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಪುತ್ರರನ್ನು ರೌಡಿಗಳನ್ನಾಗಿ ತಯಾರು ಮಾಡುತ್ತಿರುವಂತಿದೆ ಎಂದು ಲೇವಡಿ ಮಾಡಿದೆ.
ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರ ಬದಲು 'ಬಾರ್ ಸಲಹೆಗಾರ' ಸಿಟಿ ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಛೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ. ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ ಎಂದು ಹೇಳಿದೆ.
ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.
— Karnataka Congress (@INCKarnataka) September 17, 2021
ಇದರ ಬದಲು 'ಬಾರ್ ಸಲಹೆಗಾರ' @CTRavi_BJP ಮಾರ್ಗದರ್ಶನದಲ್ಲಿ @BJP4Karnataka ಕಛೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ.
ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ!#ಬಿಜೆಪಿಗೂಂಡಾಗಿರಿ