ಸಿದ್ರಾಮಣ್ಣ ಸಿಎಂ ಆಗಿದ್ದರಿಂದಲೇ ನಾನು ಎರಡು ಬಾರಿ ಎಂಎಲ್ಎ ಆಗಿದ್ದು: ಜೆಡಿಎಸ್ ಶಾಸಕ ಶಿವಲಿಂಗೇಗೌಡ!
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರಿಂದಲೇ ನಾನು ಎರಡೆರಡು ಬಾರಿ ಶಾಸಕನಾಗಿದ್ದೇನೆ' ಎಂದು ಹೇಳುವ ಮೂಲಕ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಗಮನ ಸೆಳೆದರು.
Published: 22nd September 2021 08:21 AM | Last Updated: 22nd September 2021 08:21 AM | A+A A-

ಶಿವಲಿಂಗೇಗೌಡ
ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರಿಂದಲೇ ನಾನು ಎರಡೆರಡು ಬಾರಿ ಶಾಸಕನಾಗಿದ್ದೇನೆ' ಎಂದು ಹೇಳುವ ಮೂಲಕ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಗಮನ ಸೆಳೆದರು.
ತಮಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ ಎಂದು ಜೆಡಿಎಸ್ ಸದಸ್ಯರು ಆರೋಪಿಸುತ್ತಿದ್ದ ವೇಳೆ ಎದ್ದು ನಿಂತ ಶಿವಲಿಂಗೇಗೌಡ, ಯಡಿಯೂರಪ್ಪನವರು ನಮಗೆ ಅನುದಾನ ಕೊಟ್ಟಿದ್ದಾರೆ. ಅದು ಸಣ್ಣದು ಎಂದು ಹೇಳಿ ಅವರ ಮನಸ್ಸು ನೋಯಿಸಬೇಡಿ. ಹೋಗ್ಲಿ ಬಿಡಿ ನಮ್ಮ ರೇವಣ್ಣ ಅವರಿಗೂ ಹತ್ತು ಕೋಟಿ ಕೊಟ್ಟು ಬಿಡಿ. ಇಲ್ಲದಿದ್ದರೆ ಅವರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಾಲೆಳೆದರು.
ಸಿದ್ರಾಮಣ್ಣ ಮುಖ್ಯಮಂತ್ರಿಯಾಗಿದ್ದರಿಂದಲೇ ನಾನು ಎರಡು ಸಾರಿ ವಿಧಾನಸಭೆಗೆ ಬಂದಿದ್ದೇನೆ. ಇದನ್ನು ನಾನು ಬಹಿರಂಗವಾಗಿಯೇ ಹೇಳುತ್ತೇನೆ. 550 ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ 300 ಕೋಟಿ ಕೊಟ್ಟಿದ್ದಾರೆ. ಎತ್ತಿನ ಹೊಳೆ ಮಂಜೂರು ಮಾಡಿಸಿಕೊಟ್ಟಿದ್ದಾರೆ. ನಾನು ಹಿಂದೆ ಮುಂದೆ ಹೇಳುವುದಿಲ್ಲ. ನಿಮ್ಮನ್ನು ದೇವೇಗೌಡರನ್ನು ಕೂರಿಸಿ ಸನ್ಮಾನ ಮಾಡಿ ಹೇಳಿದ್ದೇನೆ. ಯಾರು ಕೆಲಸ ಮಾಡಿ ಕೊಡ್ತಾರೋ ಅವರ ಬಗ್ಗೆ ಹೇಳಲೇಬೇಕು ಎಂದು ಪ್ರಶಂಸಿದರು.