ನಿಮಗೂ ಮೀರಿ ಆಳುತ್ತಿರುವ 'ಅಜ್ಞಾತ ಸಿಎಂ' ಯಾರು? 'ಮನಿ'ರತ್ನ ವಿರುದ್ಧ ಅಬ್ಬರಿಸಿದ್ದ ಪಿಎಂ 'ಮೌನವ್ರತ' ಪಾಲಿಸುತ್ತಿರುವುದೇಕೆ?

ಬಸವರಾಜ ಬೊಮ್ಮಾಯಿ ಅವರೇ ತಾವು ಕೇವಲ ಭ್ರಷ್ಟರ ಹಾಗೂ ಸಂಘಪರಿವಾರದ ಕೈಲಾಡುವ #PuppetCM ಮಾತ್ರವೇ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರೇ ತಾವು ಕೇವಲ ಭ್ರಷ್ಟರ ಹಾಗೂ ಸಂಘಪರಿವಾರದ ಕೈಲಾಡುವ #PuppetCM ಮಾತ್ರವೇ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಧಿಕಾರಿಗಳು ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದಾದರೆ ಸರ್ಕಾರ ಯಾರ ಹಿಡಿತದಲ್ಲಿದೆ? ನಿಮಗೂ ಮೀರಿ ಆಳುತ್ತಿರುವ 'ಅಜ್ಞಾತ ಸಿಎಂ' ಯಾರು? ಎಂದು ಪ್ರಶ್ನಿಸಿದೆ.

ಸಚಿವ 'ಮನಿ'ರತ್ನ ಅವರ ವಿರುದ್ಧ ಹಣ ವಸೂಲಿಯ ಆರೋಪ ಇದು ಮೊದಲೇನಲ್ಲ. ತೋಟಗಾರಿಕಾ ಇಲಾಖೆಯಲ್ಲೂ ಹಣ ವಸೂಲಿ ಮಾಡಿದ ಆರೋಪದ ಬಗ್ಗೆ ಪ್ರಧಾನಿಗೆ ಪತ್ರ ಹೋಗಿತ್ತು. ಹಿಂದೆ ಇದೇ ಮುನಿರತ್ನರ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಿಗಳು ಈಗ 'ಮೌನವ್ರತ' ಪಾಲಿಸುತ್ತಿರುವುದೇಕೆ? ಪತ್ರಕ್ಕೆ ಪ್ರತಿಕ್ರಿಯೆ ಇಲ್ಲವೇಕೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.

ಗೋ ರಕ್ಷಕರೆಂದು ಹೇಳಿಕೊಳ್ಳುವವರಿಂದ 35 ಎಕರೆ ಗೋಮಾಳ ಭೂಮಿ ಆರೆಸ್ಸೆಸ್ ಅಂಗ ಸಂಸ್ಥೆ ಜನಸೇವಾ ಟ್ರಸ್ಟ್ ಗೆ ಬಿಟ್ಟಿಯಾಗಿ ಮಂಜೂರಾಗಿದೆ. ಅಮೂಲ್ಯ ಭೂಮಿಯೆಂದು ತಿರಸ್ಕೃತಗೊಂಡಿದ್ದ ಮಂಜೂರಾತಿ ಯಾರ 'ಕೈವಾಡ'ದಿಂದ ಮತ್ತೆ ಅನುಮೋದನೆಗೊಂಡಿತು? ಕಂದಾಯ ಸಚಿವ ಆರ್ ಅಶೋಕ್ ಅವರಿಗೇಕೆ ಇದರಲ್ಲಿ 'ವಿಶೇಷ' ಆಸಕ್ತಿ? ಎಂದು ಕಾಂಗ್ರೆಸ್ ತಪರಾಕಿ ಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com