ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಚುನಾವಣೆಯಲ್ಲಿ ಗೆಲ್ಲಲು ವಾಸ್ತು ಮೊರೆ ಹೋದ ಕಾಂಗ್ರೆಸ್: 'ವಾಸ್ತು ಪ್ರಕಾರ' ಕಟ್ಟಡ ಬದಲಾವಣೆಯಿಂದ ಬದಲಾಗಲಿದ್ಯಾ ಸ್ಟಾರ್!

10 ವರ್ಷಕ್ಕೂ ಕಡಿಮೆ ಅವಧಿಯ ಈ ಕಚೇರಿಯಲ್ಲಿನ ಡಿಸಿಸಿ ಅಧ್ಯಕ್ಷರ ಕ್ಯಾಬಿನ್ ಮತ್ತು ಇತರ ಕಮೋಡ್‌ನ ದಿಕ್ಕನ್ನು ಬದಲಾಯಿಯಸಲಾಗಿದೆ. ಪ್ರವೇಶದ್ವಾರದ ಮೆಟ್ಟಿಲುಗಳ ಸಂಖ್ಯೆ ಹೆಚ್ಚು ಮಾಡಲಾಗಿದೆ.

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿಯ ಭದ್ರ ಕೋಟೆಯಲ್ಲಿ ಪಕ್ಷದ ಸ್ಟಾರ್ ಬದಲಾಗಲಿ ಎಂಬ ನಿರೀಕ್ಷೆಯಿಂದ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಕಟ್ಟಡದಲ್ಲಿ ವಾಸ್ತು ಬದಲಾವಣೆ ಮಾಡುತ್ತಿದೆ.

10 ವರ್ಷಕ್ಕೂ ಕಡಿಮೆ ಅವಧಿಯ ಈ ಕಚೇರಿಯಲ್ಲಿನ ಡಿಸಿಸಿ ಅಧ್ಯಕ್ಷರ ಕ್ಯಾಬಿನ್ ಮತ್ತು ಇತರ ಕಮೋಡ್‌ನ ದಿಕ್ಕನ್ನು ಬದಲಾಯಿಯಸಲಾಗಿದೆ. ಪ್ರವೇಶದ್ವಾರದ ಮೆಟ್ಟಿಲುಗಳ ಸಂಖ್ಯೆ ಹೆಚ್ಚು ಮಾಡಲಾಗಿದೆ. ಇದು ವಾಸ್ತು ಬದಲಾವಣೆಯಲ್ಲ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದು ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಆದರೆ ವಾಸ್ತು ತಜ್ಞರ ಸಲಹೆಯಂತೆ ಬದಲಾವಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಮ ಸಂಖ್ಯೆಯಾಗಬೇಕಾಗಿರುವುದರಿಂದ ಮೆಟ್ಟಿಲನ್ನು ಸೇರಿಸಲಾಗುತ್ತಿದೆ ಎಂದು ಮಂಗಳೂರು ನಗರದ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಮಾಜಿ ಮೇಯರ್ ತಿಳಿಸಿದ್ದಾರೆ. "ಬದಲಾಯಿಸಬೇಕಾದ ಕೆಲವು ಇತರ ವಿಷಯಗಳಿವೆ. ಇದು ಪಕ್ಷಕ್ಕೆ ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ, ಎಂದು ತಿಳಿಸಿದ್ದಾರೆ.

ಪಕ್ಷದ ರಾಜಕೀಯ ಭವಿಷ್ಯವನ್ನು ಬದಲಾಯಿಸುವ ಪ್ರಮುಖ ಸಲಹೆಗಳಲ್ಲಿ, ವಾಸ್ತು ಬದಲಾವಣೆಗಳು ಪ್ರಮುಖವಾಗಿ ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ವಾಸ್ತುವಿನ ಮೇಲೆ ನಂಬಿಕೆ ಇಟ್ಟಿರುವ ಕಾರಣ ಪಕ್ಷವು ಮೊರೆ ಹೋಗಲು ನಿರ್ಧರಿಸಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ ಮಾಡಲಾಗಿತ್ತು. ಅದಕ್ಕೂ ಮೊದಲು ಹಂಪನಕಟ್ಟೆಯ ಬಾಡಿಗೆ ಆವರಣದಲ್ಲಿ ಕಚೇರಿ ಇತ್ತು. "ನಾವು ಹೊಸ ಕಚೇರಿಗೆ ಸ್ಥಳಾಂತರಗೊಂಡ ನಂತರ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಕ್ಷವು ತನ್ನ ಕೆಟ್ಟ ಫಲಿತಾಂಶಗಳನ್ನು ಕಂಡಿತು. ನಿರ್ಮಾಣದ ಸಮಯದಲ್ಲಿ ವಾಸ್ತುಗೆ ಒತ್ತು ನೀಡದಿರುವುದು ಇದಕ್ಕೆ ಕಾರಣ, ”ಎಂದು ಮುಖಂಡರೊಬ್ಬರು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com