ಸಿದ್ದರಾಮಯ್ಯ-ಪರಮೇಶ್ವರ್ ನಡುವಿನ ವೈಮನಸ್ಸು ಬಹಿರಂಗ!

ದಿವಂಗತ ಲಕ್ಷ್ಮೀ ನರಸಿಂಹಯ್ಯ ಅವರ ಜನ್ಮದಿನವನ್ನು ಶನಿವಾರ ಆಚರಿಸಲಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಲಕ್ಷಿಸಿರುವುದು ಕಂಡು ಬಂದಿದೆ.
ತುಮಕೂರಿನಲ್ಲಿ ಶನಿವಾರ ನಡೆದ ದಿವಂಗತ ಲಕ್ಷ್ಮೀ ನರಸಿಂಹಯ್ಯ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
ತುಮಕೂರಿನಲ್ಲಿ ಶನಿವಾರ ನಡೆದ ದಿವಂಗತ ಲಕ್ಷ್ಮೀ ನರಸಿಂಹಯ್ಯ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ತುಮಕೂರು: ದಿವಂಗತ ಲಕ್ಷ್ಮೀ ನರಸಿಂಹಯ್ಯ ಅವರ ಜನ್ಮದಿನವನ್ನು ಶನಿವಾರ ಆಚರಿಸಲಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಲಕ್ಷಿಸಿರುವುದು ಕಂಡು ಬಂದಿದೆ.

ಪರಮೇಶ್ವರ ಅವರು ಸತತ ಮೂರನೇ ಬಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ನಡೆದ ಕುರುಬ ಮತ್ತು ಮುಸ್ಲಿಂ ಸಮುದಾಯದ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಿರಲಿಲ್ಲ. ಈ ಕಾರ್ಯಕ್ರಮದಲ್ಲೂ ಪರಮೇಶ್ವರ್ ಅವರು ಕಾಣಿಸಿಕೊಳ್ಳದಿರುವುದು ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿದೆ.

ಪರಮೇಶ್ವರ ಅವರ ಪ್ರತಿಸ್ಪರ್ಧಿ ಮಾಜಿ ಶಾಸಕ ಕೆಎನ್ ರಾಜಣ್ಣ ಅವರು ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಕಂಡು ಬಂದಿತ್ತು.

ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿರುವ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ಅವರೊಂದಿಗೆ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡಿದ್ದು, ಈ ಬೆಳವಣಿಗೆ ಮುಂದಿನ ವರ್ಷ ವಿಧಾನಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರು ಸಂದೇಶ ರವಾನಿಸಲು ಬಯಸುತ್ತಿದ್ದಾರೆಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ.

ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಗೋವಿಂದರಾಜು ಆಪ್ತರಾಗಿರುವುದರಿಂದ ಕಾಂಗ್ರೆಸ್‌ನಿಂದ ತುಮಕೂರು ನಗರ ವಿಧಾನಸಭೆಗೆ ಟಿಕೆಟ್ ಪಡೆಯಲು ಗೋವಿಂದರಾಜು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿದೆ.

ಸುಧಾಕರ್ ಅವರನ್ನು ಶ್ಲಾಘಿಸಿದ ಪರಮೇಶ್ವರ್
ಈ ನಡುವೆ ಪರಮೇಶ್ವರ್ ಅವರು ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿರ್ವಹಿಸಿದ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಶ್ಲಾಘಿಸಿದರು.

ನಾನು ಸಚಿವರನ್ನು ನಿಕಟವಾಗಿ ಗಮನಿಸುತ್ತಿದ್ದೇನೆ. ಸುಧಾಕರ್ ಅವರು ಎಲ್ಲಾ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com