ಸಿದ್ದರಾಮಯ್ಯ ಕಂಡರೆ ಭಯ; ಅದಕ್ಕೆ ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆ: ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯ ಕಂಡ್ರೆ ಕಾಂಗ್ರೆಸ್ನಲ್ಲಿ ಭಯ ಶುರುವಾಗಿದೆ. ಅದಕ್ಕೆ ವ್ಯಕ್ತಿ ಪೂಜೆಗೆ ನಾಯಕರು ಶರಣಾಗಿದ್ದಾರೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಸಿದ್ದರಾಮಯ್ಯ ಕಂಡ್ರೆ ಕಾಂಗ್ರೆಸ್ನಲ್ಲಿ ಭಯ ಶುರುವಾಗಿದೆ. ಅದಕ್ಕೆ ವ್ಯಕ್ತಿ ಪೂಜೆಗೆ ನಾಯಕರು ಶರಣಾಗಿದ್ದಾರೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಂಡ್ರೆ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಸಿದ್ರಾಮಯ್ಯ ಮುಟ್ಟಿದ್ರೆ ಭಯ ಶುರುವಾಗುತ್ತದೆ. ಅದಕ್ಕೆ ವ್ಯಕ್ತಿ ಪೂಜೆಗೆ ಶರಣಾಗಿದೆ.

ಪರಮೇಶ್ವರ್ ಗೆ ಬಿಸಿ ತಟ್ಟಿದೆ. ಪರಮೇಶ್ವರ್ ಒಲೈಕೆಗೆ ಮುಂದಾಗಿದೆ. ದಲಿತರನ್ನ ಸಿದ್ರಾಮಯ್ಯ ಸರಿಯಾಗಿ ನಡೆಸಿಕೊಳ್ತಿಲ್ಲ. ಸಿದ್ದರಾಮಯ್ಯ ದಲಿತ ವಿರೋಧಿ. ಜಾತಿಗಳನ್ನ ಒಡೆದಿದ್ದು ಸಿದ್ದರಾಮಯ್ಯ. ಲಿಂಗಾಯತ, ಒಕ್ಕಲಿಗರನ್ನೂ ಒಡೆದರು. ಕೆ.ಎನ್.ರಾಜಣ್ಣ ದೇವೇಗೌಡರ ಬಗ್ಗೆ ಅವಹೇಳನ ಮಾಡಿದ್ರು. ಈಗ ಇವರನ್ನೇ ಉತ್ಸವದ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಯಾರ ಹಿತವನ್ನ ಬಯಸಲ್ಲ. ಅವರ ಗುಂಡಿಯನ್ನ ಅವರೇ ತೋಡಿಕೊಳ್ತಾರೆ. ಕಾಂಗ್ರೆಸ್ ನಲ್ಲಿ ಒಡಕು ಹೆಚ್ಚಾಗುತ್ತಿದೆ. ಸಿದ್ದರಾಮೋತ್ಸವ, ಶಿವಕುಮಾರೋತ್ಸವ ನಡೆಯುತ್ತಿದೆ. ಅವರ ಪಕ್ಷದಲ್ಲಿ ಏನು ಬೇಕಾದ್ರೂ ಮಾಡಲಿ. ನಾವು ಬಹಳ ವರ್ಷದಿಂದ ಕಾಂಗ್ರೆಸ್ ಗಮನಿಸುತ್ತಿದ್ದೇನೆ.

ಎಸ್.ಬಂಗಾರಪ್ಪ 1992 ರಲ್ಲಿ ಸಿಎಂ ಆಗಿದ್ರು. ಕಾಂಗ್ರೆಸ್ ಹೈಕಮಾಂಡ್ ಮುಟ್ಟಲು ಯಾರಿಂದ ಸಾಧ್ಯವಿರಲಿಲ್ಲ. ಅವರು ಸಿಎಂ ಆಗಿ ಎರಡು ವರ್ಷ ಪೂರೈಸ್ತಾರೆ. ಒಂದು ಉತ್ಸವವನ್ನ ಮಾಡ್ತಾರೆ. ಆಗ ಕಾಂಗ್ರೆಸ್ ಉತ್ಸವ ಆಗಲ್ಲ, ಬಂಗಾರಪ್ಪ ಉತ್ಸವ ಆಗುತ್ತೆ. ಆಗ ಬಂಗಾರಪ್ಪನವರಿಗೆ ಕಿರುಕುಳ ನೀಡ್ತಾರೆ. ಉತ್ಸವ ನಡೆದರೆ ಗಾಂಧಿ ಕುಟುಂಬಕ್ಕೆ ಮಾತ್ರ ಇರಬೇಕು. ಬೇರೆಯವರ ಉತ್ಸವಕ್ಕೆ ಅಲ್ಲಿ ಅವಕಾಶವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಕ್ಪ್ರಹಾರ ನಡೆಸಿದರು.

ವಿ.ಪಿ.ಸಿಂಗ್ ಅವಧಿಯಲ್ಲೂ ಇದೇ ಆಗಿತ್ತು. ಕಾಂಗ್ರೆಸ್ ಇವತ್ತು ಒಬ್ಬ ವ್ಯಕ್ತಿಯನ್ನ ಇಟ್ಟುಕೊಂಡಿದೆ. ಅವರನ್ನ ಮೆರೆಸುವ ಕೆಲಸ ಮಾಡ್ತಿದೆ. ಸಿದ್ರಾಮಯ್ಯ ಮುಂದೆ ಹೈಕಮಾಂಡ್ ಶರಣಾಗಿದೆ. ತನ್ನ ಶಕ್ತಿಯನ್ನ ಕಾಂಗ್ರೆಸ್ ಕಳೆದುಕೊಂಡಿದೆ. ಕಾಂಗ್ರೆಸ್ ಸಂಪೂರ್ಣ ಕುಸಿದಿದೆ ಎಂದು ಹೇಳಿದರು.

ಎಸ್ಸಿಪಿ, ಟಿಎಸ್ಪಿ ಹಣ ದಲಿತರಿಗೆ ತಂದರು. ಅದರಡಿ 11ಡಿ ಅಂತ ತಂದ್ರಲ್ಲಾ ಅದು ಏನು ಎಂದು ಪ್ರಶ್ನಿಸಿದ ಅವರು, ಮೆಟ್ರೋ ಏನು ದಲಿತರಿಗೆ ಕೊಟ್ಟಿದ್ದಾರೆ. ಆಗ ಧೃವನಾರಾಯಣ್ ಕಡ್ಲೆಪುತಿ ತಿನ್ನುತ್ತಿದ್ರಾ? ದಲಿತರಿಗೆ ಮೂಗಿಗೆ ತುಪ್ಪ ಸವರಿದ್ರು. ೨ ಲಕ್ಷ ಕೋಟಿ ಹಣ ಬರಬೇಕಿತ್ತು. ಈಗ ಅದನ್ನ ಜಾರಿಗೆ ತರ್ತೇವೆ ಎಂದ ಛಲವಾದಿ ನಾರಾಯಸ್ವಾಮಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com