ಮಕ್ಕಳನ್ನು ಬಳಸಿಕೊಂಡು ರಾಜಕೀಯ ಮಾಡುವ ಅವಶ್ಯಕತೆ ಕಾಂಗ್ರೆಸ್ ಗಿಲ್ಲ; ರಾಹುಲ್ ನೋಡಲು ಬರುತ್ತಿದ್ದಾರೆ: ಡಿಕೆ ಶಿವಕುಮಾರ್

ರಾಜಕಾರಣಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ. ಮಕ್ಕಳ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷ ಯೋಜನೆಗಳನ್ನು ರೂಪಿಸಿದೆ. ರಾಜಕೀಯಕ್ಕಾಗಿ ಮಕ್ಕಳ ಆಯೋಗದಿಂದ ದೂರು ದಾಖಲಿಸಲಾಗಿದೆ.
ಮಕ್ಕಳ ಜೊತೆ ರಾಹುಲ್ ಪಾದಯಾತ್ರೆ
ಮಕ್ಕಳ ಜೊತೆ ರಾಹುಲ್ ಪಾದಯಾತ್ರೆ

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಯಾವತ್ತೂ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ತೊಟ್ಟಿಲಿನಿಂದ ಹಿಡಿದು ಕಾಲೇಜಿನವರೆಗಿನ ಎಲ್ಲಾ ಮಕ್ಕಳಿಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಇಲ್ಲಿ ಹೇಳಿದರು.

ಭಾರತ್‌ ಜೋಡೊ ಯಾತ್ರೆಯಲ್ಲಿ ಮಕ್ಕಳ ದುರುಪಯೋಗ ಆರೋಪದ ಮೇರೆಗೆ ಮಕ್ಕಳ ಆಯೋಗದವರು ನೋಟಿಸ್‌ ನೀಡಿದ್ದಾರೆ. ಮಹಿಳಾ ಆಯೋಗದ ಈ ನಡೆ ಹಿಂದೆ ರಾಜಕೀಯ ಇದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ನೋಟಿಸ್‌ಗೆ ಈಗಾಗಲೇ ಪಕ್ಷದಿಂದ ಐವತ್ತು ಪುಟದ ಉತ್ತರ ನೀಡಲಾಗಿದೆ. ಭಾರತ್‌ ಜೋಡೋ ಯಾತ್ರೆಯಲ್ಲಿ ಪಕ್ಷ, ಜಾತಿ, ಧರ್ಮ ಇಲ್ಲ. ಮಕ್ಕಳೊಂದಿಗೆ ಬಂದು ಯಾರು ಬೇಕಾದರೂ ಭಾಗಿ ಆಗಬಹುದು. ಇಂದಿರಾಗಾಂಧಿ ಕುಟುಂಬದ ಮೊಮ್ಮಗನ ಯಾತ್ರೆಗೆ ಜನ ಬರುತ್ತಿದ್ದಾರೆ. ರಾಹುಲ್‌ ಜನರ ನೋವು, ನಲಿವು ಹಂಚಿಕೊಳ್ಳುತ್ತಿದ್ದಾರೆ ಎಂದರು.

ರಾಜಕಾರಣಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ. ಮಕ್ಕಳ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷ ಯೋಜನೆಗಳನ್ನು ರೂಪಿಸಿದೆ. ರಾಜಕೀಯಕ್ಕಾಗಿ ಮಕ್ಕಳ ಆಯೋಗದಿಂದ ದೂರು ದಾಖಲಿಸಲಾಗಿದೆ. ಜನ ತೋರುವ ಪ್ರೀತಿ ಸಹಿಸದೆ ಅಸೂಯೆಯಿಂದ ದೂರು ದಾಖಲು ಮಾಡಲಾಗಿದೆ, ಇದನ್ನು ಬಿಜೆಪಿ ಸ್ನೇಹಿತರು ಅರ್ಥಮಾಡಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ರಾಹುಲ್ ಗಾಂಧಿ ನೋಡಲು ಮಕ್ಕಳು ನಿಂತಿದ್ದರು. ಇದನ್ನು ಕಂಡು 4 ಜನ ಮಕ್ಕಳನ್ನ ಕರೆದು ರಾಹುಲ್ ಮಾತನಾಡಿಸಿ ಮಕ್ಕಳ ಜೊತೆ ಕೈ ಹಿಡಿದು ಹೆಜ್ಜೆ ಹಾಕಿದ್ದರು. ಇನ್ನು ಇದೇ ವೇಳೆ ಮಕ್ಕಳ‌ನ್ನ ಕರೆದಾಗ ವ್ಯಕ್ತಿಯೊಬ್ಬ ರಾಹುಲ್ ಬಳಿಕ ಬರಲು ‌ಪ್ರಯತ್ನಿಸಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನ ತಡೆದು ಪಕ್ಕಕ್ಕೆ ಕಳಿಸಿದ್ದರು.  ರಾಹುಲ್ ಗಾಂಧಿ ನೋಡಲು ಚಿಕ್ಕ ಹುಡುಗನೊಬ್ಬ ಕಾಂಗ್ರೆಸ್ ಬಾವುಟ ಹಿಡಿದು ರಸ್ತೆ ಪಕ್ಕದಲ್ಲಿ ನಿಂತಿದ್ದನು. ಹುಡುಗ ನಿಂತಿರುವ ಜಾಗಕ್ಕೆ ಹೋಗಿ ಅವನನ್ನು ಕರೆದುಕೊಂಡು ಬಂದು ಕೊನೆಗೆ ಅವನ ಕೈ ಹಿಡಿದು ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದರು.

ಹರ್ತಿಕೋಟೆ ಬಳಿ ಮಕ್ಕಳೊಂದಿಗೆ ರಾಹುಲ್ ಹೆಜ್ಜೆ ಹಾಕಿತ್ತಿರುವಾಗ ಐದಾರು ಮಕ್ಕಳನ್ನು ರನ್ನಿಂಗ್ ರೇಸ್ ಮಾಡಿಸಿದ್ದರು. ರಾಹುಲ್ ಎದುರು ಸ್ಪರ್ಧೆಗೆ ಬಿದ್ದು ಮಕ್ಕಳು ಓಡಿದ್ದರು. ಮತ್ತೆ ಮಕ್ಕಳನ್ನು ಹತ್ತಿರ ಕರೆದು ರಾಹುಲ್‌ ಗಾಂಧಿ ಹೆಜ್ಜೆ ಹಾಕಿದ್ದರು.

ಭಾರತ್ ಜೋಡೋ ಯಾತ್ರೆ ಒಂದು ಸಾಮೂಹಿಕ ಆಂದೋಲನವಾಗಿದೆ, ಇದರಲ್ಲಿ ಯಾವುದೇ ಪಕ್ಷ, ಧರ್ಮ, ಸಮುದಾಯ ಅಥವಾ ಪಂಥವಿಲ್ಲ, ಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು, ಮತ್ತು ಪೋಷಕರು ತಮ್ಮ ಮಕ್ಕಳನ್ನು ಇಂದಿರಾ ಗಾಂಧಿಯವರ ಮೊಮ್ಮಗ ರಾಹುಲ್ ಗಾಂಧಿಯನ್ನು ತೋರಿಸಲು ಕರೆ ತರುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಸಿಗುತ್ತಿರುವ ಬೆಂಬಲವನ್ನು ನೋಡಿದರೆ, ಕೇಂದ್ರ ಸರ್ಕಾರವು NCPCR ನಲ್ಲಿ ಆಧಾರರಹಿತ ದೂರನ್ನು ದಾಖಲಿಸಿದೆ, ಆದರೆ ನಾವು ಅದನ್ನು ಪರಿಹರಿಸಿದ್ದೇವೆ ಎಂದು ಅವರು ಹೇಳಿದರು. ಮಕ್ಕಳ ಹಕ್ಕುಗಳ ಸಂಸ್ಥೆಯು ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ವಿರುದ್ಧ "ರಾಜಕೀಯ ಸಾಧನಗಳಾಗಿ ಮಕ್ಕಳನ್ನು ದುರುಪಯೋಗಪಡಿಸಿಕೊಂಡಿದೆ" ಎಂದು ಆರೋಪಿಸಿ ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com