ಸಿದ್ದರಾಮಯ್ಯರ ಜನ್ಮ ದಿನ ತಿಳಿಸಲು ವಿಕಿಪೀಡಿಯಾ ಅಧಿಕೃತ ವೆಬ್ ಸೈಟ್ ಅಲ್ಲ: ಎಚ್ ಕೆ ಪಾಟೀಲ್ ಕಿಡಿ

ಸಿದ್ದರಾಮಯ್ಯನವರೇ ನನಗೆ 75 ವರ್ಷ ವಯಸ್ಸಾಗಿದೆ ಎಂದು ಒಪ್ಪಿಕೊಂಡಿರುವಾಗ ಅದರ ಚರ್ಚೆ ಅನಗತ್ಯ..ಅವರ ಜನ್ಮ ದಿನ ತಿಳಿಸಲು ವಿಕಿಪೀಡಿಯಾ ಅಧಿಕೃತ ವೆಬ್ ಸೈಟ್ ಅಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗದಗ ಶಾಸಕ ಎಚ್ ಕೆ ಪಾಟೀಲ್ ಕಿಡಿಕಾರಿದ್ದಾರೆ.
ಎಚ್ ಕೆ ಪಾಟೀಲ್
ಎಚ್ ಕೆ ಪಾಟೀಲ್

ಬೆಂಗಳೂರು: ಸಿದ್ದರಾಮಯ್ಯನವರೇ ನನಗೆ 75 ವರ್ಷ ವಯಸ್ಸಾಗಿದೆ ಎಂದು ಒಪ್ಪಿಕೊಂಡಿರುವಾಗ ಅದರ ಚರ್ಚೆ ಅನಗತ್ಯ..ಅವರ ಜನ್ಮ ದಿನ ತಿಳಿಸಲು ವಿಕಿಪೀಡಿಯಾ ಅಧಿಕೃತ ವೆಬ್ ಸೈಟ್ ಅಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗದಗ ಶಾಸಕ ಎಚ್ ಕೆ ಪಾಟೀಲ್ ಕಿಡಿಕಾರಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಕೆ ಪಾಟೀಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯನವರ ವಯಸ್ಸಿನ ಚರ್ಚೆಯ ವಿಚಾರವಾಗಿ ಪ್ರತಿಕ್ರಿಯಿಸಿದರು. 'ಸಿದ್ಧರಾಮಯ್ಯನವರಿಗೆ ವಯಸ್ಸು ಎಷ್ಟಾದರು ಇರಲಿ ತಕರಾರು ಯಾಕೆ?. ಸಿದ್ದರಾಮಯ್ಯನವರೇ ನನಗೆ 75 ವರ್ಷ ವಯಸ್ಸಾಗಿದೆ ಎಂದು ಒಪ್ಪಿಕೊಂಡಿರುವಾಗ ಅದರ ಚರ್ಚೆ ಅನಗತ್ಯ..ಅವರ ಜನ್ಮ ದಿನ ತಿಳಿಸಲು ವಿಕಿಪೀಡಿಯಾ ಅಧಿಕೃತ ವೆಬ್ ಸೈಟ್ ಅಲ್ಲ. ಹುಟ್ಟಿದ್ದ ದಿನಾಂಕ ನಮ್ಮ ಅಪ್ಪ, ಅಮ್ಮನಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ ಟೀಚರ್ ದಾಖಲಿಸಿದ್ದು ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ, ನಾವು ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ಧರಾಮೋತ್ಸವ ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಕಾರ್ಯಕ್ರಮ ಆಗಿತ್ತು. ನಮ್ಮ ಪಕ್ಷಕ್ಕೆ ಇದರಿಂದ ದೊಡ್ಡ ಶಕ್ತಿ ಬಂದಿದೆ. ಈ ಕಾರಣಕ್ಕೆ ಬಹಳ ಜನ ಗಾಬರಿಯಾಗಿದ್ದಾರೆ. ಅದಕ್ಕೇನೂ ಮಾಡಲು ಆಗುವುದಿಲ್ಲ. ಜನರ ಪ್ರೀತಿಗಾಗಿ ಅಷ್ಟು ದೊಡ್ಡ ಕಾರ್ಯಕ್ರಮ ಆಗಿದೆ. ಅವರಿಗೆ 75 ವಯಸ್ಸು ಪೂರ್ಣಗೊಂಡಿಲ್ಲ ಎಂದು ಹುಡುಕುವುದರಲ್ಲಿ ಏನೂ ಲಾಭ ಇಲ್ಲ. ಅವರಿಗೆ 73, 74 ವಯಸ್ಸು ಎಂದು ಹುಡುಕಿದರೆ ಏನೂ ಲಾಭ ಇಲ್ಲ ಎಂದು ಗುಡುಗಿದರು.

'ಪರಿಹಾರದ ವಿಷಯದಲ್ಲಿ ಸರ್ಕಾರ ಗಪ್ ಚುಪ್'
ಇನ್ನು ಗದಗ ನಗರದ ಬೆಟಗೇರಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿದು ಹಲವು ಮನೆಗಳು ಕುಸಿದು ಬಿದ್ದಿವೆ. ಆದರೆ ಹತ್ತು ದಿನದ ಹಿಂದೆ ಮಳೆಯಿಂದಾಗಿ ಹಾನಿಗೊಳಗಾದವರಿಗೆ ಇನ್ನೂ ಪರಿಹಾರದ ಹಣ ಮುಟ್ಟಿಲ್ಲ. ಬಿದ್ದ ಮನೆಗಳಿಗೆ ಪರಿಹಾರ ನೀಡದೇ ಸರ್ಕಾರ ಗಪ್ ಚುಪ್ ಆಗಿದೆ. ತಕ್ಷಣ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೆಯೇ ‌ಕಿತ್ತು ಹೋಗಿರುವ ರಸ್ತೆಗಳನ್ನು ದುರಸ್ತಿ ಮಾಡಿಸಿ. ರಸ್ತೆಗಳು ಗುಂಡಿ ಬಿದ್ದಿದ್ದು, ವಾಹವ ಸವಾರರು ಪರದಾಡುವಂತೆ ಆಗಿದೆ. ತಕ್ಷಣ ಎಲ್ಲಾ ಕಡೆ ರಸ್ತೆ ರಿಪೇರಿ ಕೆಲಸವನ್ನು ಮಾಡಿಸಬೇಕು. ಹದಗೆಟ್ಡ ರಸ್ತೆಗಳ ಬಗ್ಗೆ ಜನ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಗದಗ ನಗರದಲ್ಲೂ ರಸ್ತೆ ಪಾಟ್ ಹೋಲ್ ಸಮಸ್ಯೆ ಇದೆ. ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಸೋಮವಾರದಿಂದ ಕೆಲಸ ಆರಂಭವಾಗುತ್ತದೆ ಎಂದರು.

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಬೆಳೆದ ಬೆಳೆಗಳೆಲ್ಲ ಜಲಾವೃತವಾಗಿ ಅನ್ನದಾತ ಭಾರೀ ತೊಂದರೆ ಅನುಭವಿಸುತ್ತಿದ್ದಾನೆ. ಆದರೆ ರಾಜ್ಯ ಸರ್ಕಾರ ಮಾತ್ರ ಪರಿಹಾರ ಕೊಡುವುದಕ್ಕೆ ಮುಂದಾಗುತ್ತಿಲ್ಲ ಎಂದು ಶಾಸಕ ಹೆಸ್‌.ಕೆ ಪಾಟೀಲ್‌ ಅಸಮಾಧಾನ ಹೊರಹಾಕಿದರು. ಗದಗನಲ್ಲಿ ಮಾತನಾಡಿದ ಅವರು ಬೆಳೆದು ನಿಂತ ಬೆಳೆ ನೆಲಕಚ್ಚಿವೆ. ಬೆಳೆ ಪರಿಹಾರವನ್ನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com