ಬಿಜೆಪಿಯೇ ನನ್ನ ಕುಟುಂಬ: ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ವಿಚಾರಕ್ಕೆ ತೆರೆ ಎಳೆದ ಗಾಲಿ ಜನಾರ್ಧನ ರೆಡ್ಡಿ
ಭಾರತೀಯ ಜನತಾ ಪಕ್ಷವೇ ನನ್ನ ರಾಜಕೀಯ ಜೀವನವಾಗಿದೆ. ಕಳೆದ 30 ವರ್ಷಗಳಿಂದ ಭಾಜಪವೇ ನನ್ನ ಕುಟುಂಬ, ಲಾಲ್ ಕೃಷ್ಣ ಅಡ್ವಾಣಿ ಮತ್ತು ರಾಮಮಂದಿರ ಕಾರಣದಿಂದ ಎಮೋಷನಲ್ ಆಗಿ ರಾಜಕೀಯಕ್ಕೆ ಬಂದಿದ್ದೇನೆ. ನನ್ನ ವಿಚಾರದಲ್ಲಿ ಪಕ್ಷದ ಹಿರಿಯರು ಏನು ತೀರ್ಮಾನ ಮಾಡುತ್ತಾರೆ...
Published: 07th December 2022 11:28 AM | Last Updated: 07th December 2022 01:49 PM | A+A A-

ಜನಾರ್ಧನ ರೆಡ್ಡಿ
ಗದಗ: ಭಾರತೀಯ ಜನತಾ ಪಕ್ಷವೇ ನನ್ನ ರಾಜಕೀಯ ಜೀವನವಾಗಿದೆ. ಕಳೆದ 30 ವರ್ಷಗಳಿಂದ ಭಾಜಪವೇ ನನ್ನ ಕುಟುಂಬ, ಲಾಲ್ ಕೃಷ್ಣ ಅಡ್ವಾಣಿ ಮತ್ತು ರಾಮಮಂದಿರ ಕಾರಣದಿಂದ ಎಮೋಷನಲ್ ಆಗಿ ರಾಜಕೀಯಕ್ಕೆ ಬಂದಿದ್ದೇನೆ. ನನ್ನ ವಿಚಾರದಲ್ಲಿ ಪಕ್ಷದ ಹಿರಿಯರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡುತ್ತಿದ್ದೇನೆ ಎಂದು ಹೇಳುವ ಮೂಲಕ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ವಿಚಾರಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಹನುಮ ಮಾಲಾಧಾರಣೆ ಮಾಡಿದ ಮಾಜಿ ಸಚಿವ ಜನಾರ್ಧನ ರೆಡ್ಡಿ: ರಾಜಕೀಯ ಬದುಕಿನ ಎರಡನೇ ಅಧ್ಯಾಯ ಆರಂಭಿಸಲು ನಿರ್ಧಾರ?
ನಗರದ ಐತಿಹಾಸಿಕ ಭೀಷ್ಮಕೆರೆಯಲ್ಲಿರುವ 116 ಅಡಿ ಎತ್ತರದ ಬಸವೇಶ್ವರ ಪ್ರತಿಮೆಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದ ಅವರು, 12 ವರ್ಷಗಳ ಕಾಲ ನಾನು ಮನೆಯಲ್ಲಿ ಇದ್ದೆ. ಮಕ್ಕಳ ಶಿಕ್ಷಣ, ಮದುವೆ ಎಲ್ಲವೂ ಅಯಿತು. ಮನೆಯಲ್ಲಿ ಕುಳಿತುಕೊಳ್ಳೋ ವಯಸ್ಸೂ ನನ್ನದಲ್ಲ. ಸಾರ್ವಜನಿಕ ಬದುಕಲ್ಲಿ ಬರಬೇಕೆನ್ನುವುದು ನನ್ನ ಸ್ಪಷ್ಟ ತೀರ್ಮಾನ. ಹೀಗಾಗಿ ನಾನು ಗಂಗಾವತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಆಪ್ತ ಗೆಳೆಯರಂತಿದ್ದ ಶ್ರೀ ರಾಮುಲು- ಜನಾರ್ದನ ರೆಡ್ಡಿ ನಡುವೆ ವೈಮನಸ್ಸು?
ಶ್ರೀರಾಮುಲು ಜತೆ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿ, ಶ್ರೀರಾಮುಲು ಮತ್ತು ಜನಾರ್ದನರೆಡ್ಡಿ ನಡುವೆ ಬಿರುಕು ಎಂಬುವುದು ಕನಸು, ನಮ್ಮ ನಡುವೆ ಯಾವತ್ತೂ ಬಿರುಕು ಎಂಬ ಪ್ರಶ್ನೆಯೇ ಬರುವುದಿಲ್ಲ. ಬೇರೆ ರಾಜಕೀಯ ವಿಚಾರಗಳನ್ನು ಹೇಳಲು ಇದು ಸರಿಯಾದ ಸಮಯವಲ್ಲ. ನಾನು ಯಾವ ಮಾರ್ಗದಲ್ಲಿ ಹೋಗುವುದು ಬಿಡುವುದು ಎಂಬುವುದು ಬಸವೇಶ್ವರನಿಗೆ ಬಿಟ್ಟದ್ದು ಎಂದು ತಿಳಿಸಿದರು.