ಮಗನಿಗೆ ಬಿಟ್ಟುಕೊಟ್ಟಿದ್ದ ವರುಣಾ ಕ್ಷೇತ್ರಕ್ಕೆ ಹೋದ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ: 'ಈ ಬಾರಿ ಇಲ್ಲೇ ನಿಂತು ಮುಖ್ಯಮಂತ್ರಿಯಾಗಿ' ಎಂದು ಒತ್ತಡ!

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣಾ. 2018ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಡಾ ಯತೀಂದ್ರಗೆ ಕ್ಷೇತ್ರ ಬಿಟ್ಟುಕೊಟ್ಟು ಅವರು ಶಾಸಕರಾದರು. ಇನ್ನೇನು ನಾಲ್ಕೈದು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗ ರಾಜಕೀಯ ನಾಯಕರ ಚಟುವಟಿಕೆಗಳು ಗರಿಗೆದರಿವೆ.
ತೆರೆದ ಕಾರಿನಲ್ಲಿ ಸಾಗಿದ ಸಿದ್ದರಾಮಯ್ಯನವರಿಗೆ ಕ್ಷೇತ್ರದ ಜನರಿಂದ ಭರ್ಜರಿ ಸ್ವಾಗತ
ತೆರೆದ ಕಾರಿನಲ್ಲಿ ಸಾಗಿದ ಸಿದ್ದರಾಮಯ್ಯನವರಿಗೆ ಕ್ಷೇತ್ರದ ಜನರಿಂದ ಭರ್ಜರಿ ಸ್ವಾಗತ
Updated on

ಮೈಸೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣಾ. 2018ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಡಾ ಯತೀಂದ್ರಗೆ ಕ್ಷೇತ್ರ ಬಿಟ್ಟುಕೊಟ್ಟು ಅವರು ಶಾಸಕರಾದರು. ಇನ್ನೇನು ನಾಲ್ಕೈದು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗ ರಾಜಕೀಯ ನಾಯಕರ ಚಟುವಟಿಕೆಗಳು ಗರಿಗೆದರಿವೆ.

ಈ ಬಾರಿ ಬಾದಾಮಿಯಲ್ಲಿ ಸಿದ್ದರಾಮಯ್ಯನವರು ಚುನಾವಣೆಗೆ ನಿಲ್ಲುತ್ತಿಲ್ಲ. ಬೇರೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ. ವರುಣಾದ ಮಂದಿ ಮತ್ತೆ ಸಿದ್ದರಾಮಯ್ಯನವರು ಅಲ್ಲಿಗೆ ಬರಬೇಕೆಂದು ಬಯಸುತ್ತಿದ್ದಾರೆ.

ಸಿದ್ದರಾಮಯ್ಯನವರು ನಿನ್ನೆ ವರುಣಾಕ್ಕೆ ಹೋದಾಗ ಅಲ್ಲಿನ ಜನ ಸ್ವಾಗತಿಸಿದ ರೀತಿ ನಿಜಕ್ಕೂ ನಿಬ್ಬೆರಗಾಗಿಸಿದೆ. ಮಹಿಳೆಯರು ಆರತಿ ತಟ್ಟೆ ಹಿಡಿದು, ಗ್ರಾಮಸ್ಥರು ಹೂದಳಗಳಿಂದ ತಮ್ಮ ಪ್ರೀತಿಯ ಕುರುಬ ಸಮುದಾಯದ ದಲಿತ ನಾಯಕನನ್ನು ಸ್ವಾಗತಿಸಿದ್ದಾರೆ.

ವರುಣಾ ಕ್ಷೇತ್ರದ ಮಂದಿಯ ಬೇಡಿಕೆ ಒಂದೇ-'' ನೀವು ವರುಣಾದಿಂದ ಸ್ಪರ್ಧಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು' ಎಂದು. ಸಿದ್ದರಾಮಯ್ಯ ಎರಡು ದಿನಗಳ ವರುಣಾ ಪ್ರವಾಸದಲ್ಲಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದ ಜನತೆಯ ನಾಡಿಮಿಡಿತ ಅರಿಯಲು ಭೇಟಿ ನೀಡಿದ್ದ ಅವರು ಪುತ್ರ ಯತೀಂದ್ರಗಾಗಿ ಬಿಟ್ಟುಕೊಟ್ಟಿದ್ದ ವರುಣಾ ಕ್ಷೇತ್ರಕ್ಕೆ ಮತ್ತೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯನವರನ್ನು ವರುಣಾ ಕ್ಷೇತ್ರದ ಜನರು ಎರಡು ಬಾರಿ ಭಾರಿ ಭಾರೀ ಮತಗಳ ಅಂತರದಿಂದ ಗೆಲ್ಲಿಸಿದ್ದರು. ವರುಣಾ ಕ್ಷೇತ್ರ ಸಿದ್ದರಾಮಯ್ಯನವರಿಗೆ ಒಂಥರಾ ಅದೃಷ್ಟದ ಕ್ಷೇತ್ರ. ನಿನ್ನೆ ತಮ್ಮ ಪುತ್ರ ಯತೀಂದ್ರ ಜೊತೆಗೆ ತೆರೆದ ಕಾರಿನಲ್ಲಿ ಮೆರವಣಿಗೆ ಸಾಗಿದ ಸಿದ್ದರಾಮಯ್ಯ ಜೊತೆಗೆ ಅವರ ನಿಕಟವರ್ತಿ ಹೆಚ್ ಸಿ ಮಹದೇವಪ್ಪ ಕೂಡ ಇದ್ದರು. ಅವರೆಲ್ಲಾ ಸಿದ್ದರಾಮಯ್ಯನವರ ಪರ ಘೋಷಣೆ ಕೂಗುತ್ತಾ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದರು.

ಜನರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ, ಎರಡು ಬಾರಿ ತಮ್ಮನ್ನು ಆಯ್ಕೆ ಮಾಡಿದ್ದರಿಂದಲೇ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಿದ್ದೇನೆ ಎಂದರು. ನಾನು ನೂರಕ್ಕೂ ಹೆಚ್ಚು ಬಾರಿ ವರುಣಕ್ಕೆ ಭೇಟಿ ನೀಡಿದ್ದೇನೆ, ಆದರೆ ಇಂತಹ ಆತ್ಮೀಯ ಸ್ವಾಗತ ಈ ಹಿಂದೆ ಸಿಕ್ಕಿರಲಿಲ್ಲ ಎಂದರು.

ಹದೀನಾರು ಮೋಳೆ ಗ್ರಾಮಸ್ಥರು ವರುಣಾದಿಂದ ಅಭ್ಯರ್ಥಿ ಎಂದು ಘೋಷಿಸುವಂತೆ ಒತ್ತಾಯಿಸಿದಾಗ, ಹಾಲಿ ಶಾಸಕ ಯತೀಂದ್ರ ಅವರ ಸಮ್ಮುಖದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ, ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನು ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಉಪ್ಪಾರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಶೇಕಡಾ 10 ರಷ್ಟು ಇಡಬ್ಲ್ಯೂಎಸ್ ಕೋಟಾ ನೀಡುವ ನಿರ್ಧಾರವನ್ನು ಉಲ್ಲೇಖಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವವರಿಗೆ ಜನ ಮತ ಹಾಕಬಾರದು ಎಂದರು. ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಕಡಿತ ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com