'ಚಾರ್ಲಿ'ಗೆ ಕಣ್ಣೀರು ಹಾಕುವ ಸಿಎಂಗೆ ರಾಜ್ಯದ ಜನತೆಗೆ ನೆರವಾಗುವ ಹೃದಯವಂತಿಕೆ ತೋರಲು ಕಷ್ಟವೇ?: ಕಾಂಗ್ರೆಸ್
ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಗ 5 ರೂ. ಮತ್ತು ಡೀಸೆಲ್ ಗೆ 3 ರೂಪಾಯಿ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
Published: 15th July 2022 02:10 PM | Last Updated: 15th July 2022 02:42 PM | A+A A-

ಕಾಂಗ್ರೆಸ್ ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಗ 5 ರೂ. ಮತ್ತು ಡೀಸೆಲ್ ಗೆ 3 ರೂಪಾಯಿ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಚಾರ್ಲಿ 777 ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಅಗಲಿದ ತಮ್ಮ ಪ್ರೀತಿಯ ನಾಯಿಯನ್ನು ನೆನೆದು ಭಾವುಕರಾಗಿದ್ದರು. ಇದಕ್ಕೆ ವ್ಯಂಗ್ಯವಾಡಿರುವ ಕಾಂಗ್ರೆಸ್, ಚಾರ್ಲಿಗೆ ಕಣ್ಣೀರು ಹಾಕುವ ತಮಗೆ ರಾಜ್ಯದ ಜನತೆಗೆ ನೆರವಾಗುವ ಕನಿಷ್ಠ ಹೃದಯ ವಂತಿಕೆ ತೋರಲು ಕಷ್ಟವೇ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪೌಲ್ ರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಸಿದ್ದರಾಮಯ್ಯ ಆಗ್ರಹ
ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ಇಂಧನ ತೆರಿಗೆ ಇಳಿಸಿದೆ ಎಂದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನೆ ಮಾಡಿದೆ.
ಪೆಟ್ರೋಲ್ ₹5
— Karnataka Congress (@INCKarnataka) July 14, 2022
ಡೀಸೆಲ್ ₹3
ದರ ಇಳಿಕೆ, ಮಹಾರಾಷ್ಟ್ರದಲ್ಲಿ!
ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ಇಂಧನ ತೆರಿಗೆ ಇಳಿಸಿದೆ ಎಂದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ @CMofKarnataka ಅವರೇ?
ಚಾರ್ಲಿಗೆ ಕಣ್ಣೀರು ಹಾಕುವ ತಮಗೆ
ರಾಜ್ಯದ ಜನತೆಗೆ ನೆರವಾಗುವ ಕನಿಷ್ಠ ಹೃದಯವಂತಿಕೆ ತೋರಲು ಕಷ್ಟವೇ?
ಪಿಎಸ್ ಐ ಹಗರಣ ಕೊಲೆಗಿಂತಲೂ ಮಿಗಿಲಾದದ್ದು, ಕೊಲೆಯಾದರೆ ಒಬ್ಬನ ಪ್ರಾಣ ಹೋಗುತ್ತದೆ. ಇಲ್ಲಿ 50,000 ಜನರು ತೊಂದರೆಗೆ ಸಿಲುಕಿದ್ದಾರೆ. ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50,000 ಯುವಕರ ಜೀವನವನ್ನು ರಾಜ್ಯ ಬಿಜೆಪಿ ಸರ್ಕಾರ ಕೊಲೆ ಮಾಡಿದೆ. ಈ ಕೊಲೆಗೆ ಅಂದಿನ ಗೃಹ ಸಚಿವರೇ ಹೊಣೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
#PSIScam ಕೊಲೆಗಿಂತಲೂ ಮಿಗಿಲಾದದ್ದು, ಕೊಲೆಯಾದರೆ ಒಬ್ಬನ ಪ್ರಾಣ ಹೋಗುತ್ತದೆ, ಇಲ್ಲಿ 50,000 ಜನ ತೊಂದರೆಗೆ ಸಿಲುಕಿದ್ದಾರೆ.
— Karnataka Congress (@INCKarnataka) July 15, 2022
-ನ್ಯಾಯಾಧೀಶರು
ಜೀವದ ಕೊಲೆಯಂತೆಯೇ ಜೀವನದ ಕೊಲೆಯೂ ಭೀಕರವಾದುದು.
ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50,000 ಯುವಕರ 'ಜೀವನದ ಕೊಲೆ' ಮಾಡಿದೆ @BJP4Karnataka ಸರ್ಕಾರ.
ಈ ಕೊಲೆಗೆ ಅಂದಿನ ಗೃಹಸಚಿವರೇ ಹೊಣೆ.