2024 ಲೋಕಸಭಾ ಚುನಾವಣೆ: ಹಿಂದುಳಿದ ವರ್ಗಗಳ ಸೆಳೆಯಲು ಬಿಜೆಪಿ ಮುಂದು

2024ರ ಲೋಕಸಭೆ ಚುನಾವಣೆಗೆ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಮೂಲಕ ಬಿಜೆಪಿ ತನ್ನ ಸಿದ್ಧತೆಗಳ ಆರಂಭಿಸಿದೆ.
ಒಬಿಸಿ ಮೋರ್ಚಾ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.
ಒಬಿಸಿ ಮೋರ್ಚಾ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಮೂಲಕ ಬಿಜೆಪಿ ತನ್ನ ಸಿದ್ಧತೆಗಳ ಆರಂಭಿಸಿದೆ.

ಈಶಾನ್ಯ ರಾಜ್ಯಗಳಲ್ಲಿ ನಡೆದ ಪರಿಶಿಷ್ಟ ಪಂಗಡ ಮೋರ್ಚಾ ಕಾರ್ಯಾಗಾರದ ನಂತರ, ಕರ್ನಾಟಕದಲ್ಲಿ ಒಬಿಸಿ ಮೋರ್ಚಾದ ಪದಾಧಿಕಾರಿಗಳಿಗೆ ಇದೇ ರೀತಿಯ ಕಾರ್ಯಕ್ರಮವನ್ನು ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಹಿತಾಸಕ್ತಿಗಾಗಿ ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ ಕಾರ್ಯಗಳ ಬಗ್ಗೆ ಜನರಲ್ಲಿ ಯಾವ ರೀತಿ ಜಾಗೃತಿ ಮೂಡಿಸಬೇಕೆಂಬುದನ್ನು ಹೇಳಿಕೊಡಲಾಗುತ್ತಿದೆ. 

ಮೂರು ದಿನಗಳ 'ಪ್ರಶಿಕ್ಷಣ ಶಿಬಿರ'ದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಬಿಜೆಪಿ ಸರ್ಕಾರ ಒಬಿಸಿಗಳೊಂದಿಗೆ ಇದೆ ಎಂಬ ಸಂದೇಶವನ್ನು ರವಾನಿಸಿದರು.

ರಾಜ್ಯದಲ್ಲಿ 2023 ರಲ್ಲಿ ಚುನಾವಣೆ ಆರಂಭವಾಗುತ್ತಿರುವ ಕಾರಣ ಈ ಹಂತದಲ್ಲಿ ಕಾರ್ಯಾಗಾರದ ಅತ್ಯಂತ ಮುಖ್ಯವಾಗಿದೆ. ಈ ಚುನಾವಣೆಯಲ್ಲಿ ಒಬಿಸಿ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಲಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಜನಸಂಖ್ಯೆಯಲ್ಲಿ ಶೇ.33 ರಷ್ಟಿರುವ ಒಬಿಸಿಗಳು ರಾಜಕೀಯವಾಗಿ ಜಾಗೃತರಾಗಿದ್ದು, ಮುಂದೆ ಒಗ್ಗಟ್ಟಾಗುತ್ತಾರೆ. "ನಾವು ಪ್ರಬಲ ಹಿಂದುಳಿದ ವರ್ಗಗಳೊಂದಿಗೆ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ ಮತ್ತು ಅವರ ಸಬಲೀಕರಣಕ್ಕೆ ಬದ್ಧರಾಗಿದ್ದೇವೆ" ಎಂದು ಹೇಳಿದರು. 

ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ.ಕೆ.ಲಕ್ಷ್ಮಣ್ ಅವರು ಮಾತನಾಡಿ, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಒಬಿಸಿ ಕೋಟಾಕ್ಕಾಗಿ ಮಂಡಲ್ ಆಯೋಗದ ಶಿಫಾರಸುಗಳಿಗೆ ವಿರುದ್ಧವಾಗಿದ್ದರು. ಆದರೂ ಕೂಡ ಕಾಂಗ್ರೆಸ್ ಎಂದಿಗೂ ಒಬಿಸಿಗಳೊಂದಿಗೆ ಇರಲಿಲ್ಲ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಬಿಬಿಎಂಪಿ ಚುನಾವಣೆಗೂ ಮುನ್ನ ಒಬಿಸಿ ಕೋಟಾ ಕಾಯ್ದುಕೊಳ್ಳುವುದನ್ನು ಪಕ್ಷ ಖಚಿತಪಡಿಸುತ್ತದೆ ಎಂದು ತಿಳಿಸಿದರು.

ಈಶ್ವರಪ್ಪ ಗೈರು
ರಾಜ್ಯದಲ್ಲಿ ಪಕ್ಷದ ಹಿಂದುಳಿದ ವರ್ಗಗಳ ಮುಖವಾಗಿರುವ ಕುರುಬ ಜನಾಂಗದ ಮಾಜಿ ಆರ್‌ಡಿಪಿಆರ್‌ ಸಚಿವ ಕೆಎಸ್‌ ಈಶ್ವರಪ್ಪ ಕಾರ್ಯಾಗಾರದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. 

ಚಿತ್ರದುರ್ಗದಲ್ಲಿ ನಡೆದ ನಡ್ಡಾ ಕಾರ್ಯಕ್ರಮದಲ್ಲೂ ಕೂಡ ಈಶ್ವರಪ್ಪ ಎಲ್ಲಿಯೂ ಕಾಣಿಸಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ ಅವರು, ಇದು ಕೇವಲ ಪದಾಧಿಕಾರಿಗಳಿಗೆ 'ಪ್ರಶಿಕ್ಷಣ ಶಿಬಿರ' ಆಗಿರುವುದರಿಂದ ನನ್ನನ್ನು ಆಹ್ವಾನಿಸಲಾಗಿಲ್ಲ. ಇದು ಪಕ್ಷದಲ್ಲಿ ಒಂದು ವ್ಯವಸ್ಥೆಯಾಗಿದೆ ಮತ್ತು ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಹೇಳಿದ್ದಾರೆ. 

ಆದರೆ ಇಡೀ ಕಾರ್ಯಕ್ರಮಕ್ಕೆ ಅಲ್ಲದಿದ್ದರೂ ಉದ್ಘಾಟನೆ ಅಥವಾ ಸಮಾರೋಪ ಸಮಾರಂಭಕ್ಕೆ ಈಶ್ವರಪ್ಪ ಅವರಂತಹ ನಾಯಕರನ್ನು ಆಹ್ವಾನಿಸಬೇಕಿತ್ತು ಎಂದು ಪಕ್ಷದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com