ಸಿದ್ದರಾಮಯ್ಯಗೆ ಕಲ್ಲು ಸಕ್ಕರೆಯಲ್ಲ 'ಕೋಲಾರ': ಗಂಗಾಡ್ಕರ್-ಮರಸು ಒಕ್ಕಲಿಗ ಜಾತಿ ಲೆಕ್ಕಾಚಾರ; ಮುನಿಯಪ್ಪ ಮನ ಗೆಲ್ಲದಿದ್ದರೆ ಸಂಚಾಕಾರ?

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸುಳಿವು ನೀಡುವ ಮುನ್ನ ಆ ಕ್ಷೇತ್ರದಲ್ಲಿ ಸರಿಯಾಗಿ ಸಂಶೋಧನೆ ನಡೆಸಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.
ಸಿದ್ದರಾಮಯ್ಯ ಮತ್ತು ಮುನಿಯಪ್ಪ
ಸಿದ್ದರಾಮಯ್ಯ ಮತ್ತು ಮುನಿಯಪ್ಪ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸುಳಿವು ನೀಡುವ ಮುನ್ನ ಆ ಕ್ಷೇತ್ರದಲ್ಲಿ ಸರಿಯಾಗಿ ಸಂಶೋಧನೆ ನಡೆಸಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.

28,000-30,000 ಒಕ್ಕಲಿಗರು, 26,000 ಕುರುಬರು, 45,000 ಮುಸ್ಲಿಂ ಮತ್ತು ಎಸ್‌ಸಿಗಳು, 10,000 ಎಸ್‌ಟಿಗಳು ಹಾಗೂ 11,000 ಒಬಿಸಿಗಳಿಂದ  ಮತಗಳು ಬರಲಿದೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.

ಕಾಂಗ್ರೆಸ್  ನ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಬಂಗಾರಪೇಟೆಯ ನಾರಾಯಣಸ್ವಾಮಿ, ಮಾಲೂರು ಶಾಸಕ ಕೆವೈ ನಂಜೇಗೌಡ ಸಿದ್ದರಾಮಯ್ಯ ಅವರನ್ನು ಇಲ್ಲಿಂದ ಕಣಕ್ಕಿಳಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ ಈ ಕ್ಷೇತ್ರಗಳಲ್ಲಿ ಶಾಸಕರ ವಿರೋಧಿ ಅಲೆ ಎದ್ದಿದೆ, ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೆ ಹಿರಿಯ ನಾಯಕರು ಸೋಲು ಎದುರಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೋಲಾರದಲ್ಲಿ ಅಪಾರ ಸಂಖ್ಯೆಯಿರುವ ಮರಸು ಒಕ್ಕಲಿಗರು ಗಂಗಾಡ್ಕರ್ ಗೌಡರಂತೆ ಜೆಡಿಎಸ್‌ಗೆ ಬೆಂಬಲ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಬೆಂಬಲಿಗರು ಹೇಳಿದ್ದಾರೆ. ಶರತ್ ಬಚ್ಚೇಗೌಡ, ಕೃಷ್ಣ ಬೈರೇಗೌಡ ಮತ್ತು ಶ್ರೀನಿವಾಸ್ ಗೌಡ ಅವರು ಕೋಲಾರದ ಒಕ್ಕಲಿಗ ಮತಗಳನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಬಹುದು.

ಆದರೆ ಹೇಳುವುದು ಸುಲಭ ಅದನ್ನು ಕಾರ್ಯಗತಗೊಳಿಸುವುದು ಕಷ್ಟ ಎನ್ನುತ್ತಾರೆ ಸ್ಥಳೀಯರು. ಎಂಎಲ್ಸಿಗಳಾದ ನಜೀರ್ ಅಹಮದ್ ಮತ್ತು ಗೋವಿಂದರಾಜ್ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡುತ್ತಾರೆ ಎಂದು ಅವರ ಬೆಂಬಲಿಗರು ಹೇಳಿದ್ದರೂ, ಅವರ ಪ್ರಾಬಲ್ಯ ಸೀಮಿತವಾಗಿದೆ ಎಂಬುದು ಸ್ಥಳೀಯರು ಅಭಿಪ್ರಾಯ.

ಗಂಗಾಡ್ಕರ್ ಒಕ್ಕಲಿಗರ ಪ್ರಾಬಲ್ಯವಿರುವ ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸುಲಭವಾಗಿ ಗೆಲ್ಲಬಹುದು ಎಂದು ಕೆಲ ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದು ಅಸುರಕ್ಷಿತ ಜೂಜಾಟವಿದ್ದಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಂದು ವೇಳೆ ಸಿದ್ದರಾಮಯ್ಯ ಕೋಲಾರದಿಂದ ಗೆಲ್ಲಬೇಕಾದರೇ ಕೆ.ಎಚ್ ಮುನಿಯಪ್ಪ ಅವರ ಮನಗೆಲ್ಲಬೇಕು, ಆದರೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಕಲಾ ಶಶಿಧರ್ ಗೈರಾಗಿದ್ದರು.

ಸುಮಾರು 10,000 ಕ್ರಿಶ್ಚಿಯನ್ನರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ ಎಂಬುದು ಸಿದ್ದರಾಮಯ್ಯ ಬೆಂಬಲಿಗರ ವಾದ, ಆದರೆ ಸುಮಾರು 10,000 ಬ್ರಾಹ್ಮಣರು ಮತ್ತು ಲಿಂಗಾಯತರು ಬೆಂಬಲ ಸಿಗುವುದಿಲ್ಲ ಎಂಬುದು ಸತ್ಯ, ಕ್ಷೇತ್ರದಲ್ಲಿ 10,000 ಬಲಿಜರಿದ್ದು, ಸಿದ್ದರಾಮಯ್ಯ ಅವರನ್ನು ಬೆಂಬಲಿಸದಿರಬಹುದು ಎಂದು ಹೇಳಲಾಗಿದೆ, ಒಟ್ಟಾರೆ ಕ್ಷೇತ್ರ ಆಯ್ಕೆಯ ವೇಳೆ ಸಿದ್ದರಾಮಯ್ಯ ಎಚ್ಚರಿಕೆ ಹೆಜ್ಜೆ ಇಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com