ವಿಧಾನಸಭಾ ಚುನಾವಣೆ: ಸಮಾವೇಶಗಳತ್ತ ಜನರ ನಿರಾಸಕ್ತಿ, ಚಿಂತೆಯಲ್ಲಿ ಬಿಜೆಪಿ!

ರಾಜ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಹಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ ಜನರ ಹಾಜರಾತಿ ಕಡಿಮೆಯಾಗಿರುವುದು ಪಕ್ಷವು ಚಿಂತೆಗೊಳಗಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಹಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ ಜನರ ಹಾಜರಾತಿ ಕಡಿಮೆಯಾಗಿರುವುದು ಪಕ್ಷವು ಚಿಂತೆಗೊಳಗಾಗುವಂತೆ ಮಾಡಿದೆ.

ಬಳ್ಳಾರಿಯಲ್ಲಿ ನಡೆದ ಪಕ್ಷದ ಎಸ್‌ಸಿ/ಎಸ್‌ಟಿ ಸಮಾವೇಶದಲ್ಲಿ ಜನಸಂದಣಿ ನಿರೀಕ್ಷೆಗಿಂತ ಐದನೇ ಒಂದು ಭಾಗಕ್ಕಿಂತ ಕಡಿಮೆ ಇತ್ತು. ನಿರೀಕ್ಷಿತ ಸಂಖ್ಯೆ ಸುಮಾರು 3 ರಿಂದ 4 ಲಕ್ಷದಷ್ಟಿದ್ದರೆ, 60,000 ಕ್ಕಿಂತ ಕಡಿಮೆ ಜನರು ಸಮಾವೇಶದಲ್ಲಿ ಹಾಜರಿದ್ದರು.

ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಧಾನಿ ಮೋದಿ ಭಾಷಣ ಮಾಡಿದ ಸಾರ್ವಜನಿಕ ಕಾರ್ಯಕ್ರಮದಲ್ಲೂ ಜನರ ಸಂಖ್ಯೆ ಕಡಿಮೆಯಿತ್ತು. ಒಂದು ಅಂದಾಜಿನ ಪ್ರಕಾರ, 1 ರಿಂದ 1.5 ಲಕ್ಷ ಜನಸಮೂಹವನ್ನು ಈ ಕಾರ್ಯಕ್ರಮದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ, ಕೇವಲ 50,000ದಷ್ಟು ಜನರು ಮಾತ್ರ ಸೇರಿದ್ದರು.

ಇನ್ನು ಉಡುಪಿಯ ಕಾಪುವಿನಲ್ಲಿ ಬಿಜೆಪಿಯ ಭಾರೀ ಪ್ರಚಾರದ ಜನಸಂಕಲ್ಪ ಯಾತ್ರೆಗೂ ಜನರಿಂದ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿಯ ಸಮಾವೇಶ ಹಾಗೂ ರ್ಯಾಲಿಗಳಲ್ಲಿ ಖಾಲಿ ಕುರ್ಚಿಗಳ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ನಡುವೆ ಎಸ್‌ಸಿ/ಎಸ್‌ಟಿ ಸಮಾವೇಶದಲ್ಲಿ ಪಾಲ್ಗೊಳ್ಳಲು 2.5 ಲಕ್ಷ ಜನರನ್ನು ಸ್ವತಃ ಬಿಜೆಪಿಯೇ ಸಜ್ಜುಗೊಳಿಸಲಾಗಿತ್ತು, ಆದರೆ, ವ್ಯವಸ್ಥಾಪನಾ ಸಮಸ್ಯೆಯಿಂದಾಗಿ ಅವರನ್ನು ಸ್ಥಳಕ್ಕೆ ಕರೆತರಲಾಗಲಿಲ್ಲ. ಅನೇಕರು ವಿವಿಧ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡರು ಮತ್ತು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್ ಅವರು, “ಹೌದು, ನಮಗೆ ತಿಳಿದಿದೆ. ಆದರೆ ಕಲ್ಲಡ್ಕ ಪ್ರಭಾಕರ್ ಭಟ್ ಆಯೋಜಿಸಿದ್ದ ಶ್ರೀರಾಮ ದೇವಸ್ಥಾನದ ರಥ ಕಾರ್ಯಕ್ರಮ ನಡೆದಿದ್ದರಿಂದ ಜನಸಂದಣಿ ಇಬ್ಭಾಗವಾಗಿತ್ತು'' ಆದರೆ, ''ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರು ಭಾಷಣ ಮಾಡಿದ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನ ಸೇರಿದ್ದರು ಎಂದು ಹೇಳಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಟ್ರಾಫಿಕ್ ಮತ್ತು ಇತರ ಸಮಸ್ಯೆಗಳಿಂದಾಗಿ ನಾವೇ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೆವು ಎಂದು ತಿಳಿಸಿದ್ದಾರೆ.

ಈ ನಡುವೆ ಸಮಾವೇಶಗಳಿಗ ಹೆಚ್ಚಿನ ಜನರನ್ನು ಕರೆತರಲು ಕಳುಹಿಸಲಾಗಿತ್ತಾದರೂ, ಜನರು ಇಲ್ಲದ ಕಾರಣ ಖಾಲಿ ಬಸ್ ಗಳು ವಾಪಸ್ಸಾಗಿದ್ದವು ಎಂದು ಮೂಲಗಳು ತಿಳಿಸಿವೆ.

ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಅವರು ಮಾತನಾಡಿ, ಬಿಜೆಪಿ ಸಮಾವೇಶಗಳಲ್ಲಿನ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಖಾಲಿ ಕುರ್ಚಿಗಳು ಕಂಡು ಬಂದಿವೆ. ಜನರು ಇಲ್ಲದಿರುವುದನ್ನು ಮರೆಮಾಚುವುದು ಕಷ್ಟ. ಅಸಮರ್ಪಕ ಆಡಳಿತ ಇಲ್ಲದಿರುವುದು ಹಾಗೂ ಭ್ರಷ್ಟಾಚಾರ ಇದಕ್ಕೆ ಕಾರಮ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com