1000 ಕಿಮೀ ಕ್ರಮಿಸಿದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ: ಬಳ್ಳಾರಿಯಲ್ಲಿ ಕಾಂಗ್ರೆಸ್ ಮೆಗಾ ರ್ಯಾಲಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಶನಿವಾರ 1,000 ಕಿಲೋಮೀಟರ್‌ಗಳನ್ನು ಕ್ರಮಿಸುವ ಮೂಲಕ ಮೈಲಿಗಲ್ಲನ್ನು ತಲುಪಲಿದೆ. ಪಾದಯಾತ್ರೆ ಬಳ್ಳಾರಿ ತಲುಪುವ ಮೂಲಕ 1000 ಕಿಮೀ ಕ್ರಮಿಸಿದೆ.
ಭಾರತ್ ಜೋಡೋ ಯಾತ್ರೆ
ಭಾರತ್ ಜೋಡೋ ಯಾತ್ರೆ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಶನಿವಾರ 1,000 ಕಿಲೋಮೀಟರ್‌ಗಳನ್ನು ಕ್ರಮಿಸುವ ಮೂಲಕ ಮೈಲಿಗಲ್ಲನ್ನು ತಲುಪಲಿದೆ. ಪಾದಯಾತ್ರೆ ಬಳ್ಳಾರಿ ತಲುಪುವ ಮೂಲಕ 1000 ಕಿಮೀ ಕ್ರಮಿಸಿದೆ.

3,500 ಕಿಲೋಮೀಟರ್ ನಡೆಯಲಿರುವ ಯಾತ್ರೆಯು ಕಾಂಗ್ರೆಸ್ ಪಕ್ಷ ಮತ್ತು ಇಡೀ ದೇಶಕ್ಕೆ ಐತಿಹಾಸಿಕ ಘಟನೆಯಾಗಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಸಮಾವೇಶ ಆಯೋಜಿಸಿದ್ದೆ. ಇದೊಂದು ರಾಜಕೀಯೇತರ ಯಾತ್ರೆ ಎಂದು ಹೇಳಿದ್ದರು. ಆದರೂ ರಾಜಕೀಯದಲ್ಲಿ ಯಾರೂ ಸಂತರಲ್ಲ, ಈ ಯಾತ್ರೆಯಿಂದ ಕಾಂಗ್ರೆಸ್ ಗೆ ಸಂಪೂರ್ಣ ಲಾಭ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿಲೋಮೀಟರ್‌ಗಳ ಪಾದಯಾತ್ರೆಯು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಮತ್ತು ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆಯುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿದೆ.

2024 ರ ಲೋಕಸಭೆ ಮತ್ತು 2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷದ ನೆಲೆಯನ್ನು ಬಲಪಡಿಸುವ ಪ್ರಯತ್ನವಾಗಿ ಅನೇಕ ಕಾಂಗ್ರೆಸ್ ನಾಯಕರು ಯಾತ್ರೆಯ ಮೇಲೆ ವಿಶ್ವಾಸವಿರಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಯಾತ್ರೆ ಸರಿಯಾದ ಸಮಯದಲ್ಲಿ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೊಂದು ಮಿಷನ್ ಆಗಿರುವ ಕಾರಣ ಕ್ರಮಿಸಿರುವ ದೂರ ಅಪ್ರಸ್ತುತವಾಗಿದೆ. ರಾಹುಲ್ ಗಾಂಧಿ ಎಷ್ಟು ದೂರ ಕ್ರಮಿಸಿದ್ದಾರೆ ಎಂಬ ಬಗ್ಗೆ ಆಸಕ್ತಿಯಿಲ್ಲ, ಆದರೆ ಅದರ ಪರಿಣಾಮದ ಬಗ್ಗೆ ನಮ್ಮ ಕಾಳಜಿ ಎಂದು ತಿಳಿಸಿದ್ದಾರೆ.

ದೇಶವು ಕವಲುದಾರಿಯಲ್ಲಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೃಷ್ಟಿಸಿರುವ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಮೂಲಕ ಆರ್ಥಿಕ ಅಸಮಾನತೆ, ನಿರುದ್ಯೋಗ ಮತ್ತು ಭ್ರಷ್ಟಾಚಾರ ರಹಿತ ಭವಿಷ್ಯದ ಭರವಸೆಯನ್ನು ಜನರಲ್ಲಿ ಮೂಡಿಸುತ್ತದೆ.

ರಾಹುಲ್ ಗಾಂಧಿ ದಾಖಲೆ ನಿರ್ಮಿಸಲು ಬಂದಿಲ್ಲ, ಭಾರತವು ಪ್ರಗತಿಯ ಹಾದಿಯಲ್ಲಿ ಮರಳುವುದನ್ನು ಬಯಸುತ್ತಿದ್ದಾರೆಎಂದಿದ್ದಾರೆ. ರಾಹುಲ್ ಗಾಂಧಿ ಕಾಶ್ಮೀರದಲ್ಲಿ ನಿಂತು, ತಾವು ಅಂದುಕೊಂಡ ಧ್ಯೇಯವನ್ನು ಪೂರ್ಣಗೊಳಿಸುವುದೇ ನಿಜವಾದ ಸಾಧನೆ.

ಅದು ನಮ್ಮ ಪೂರ್ವಜರು ಕಲ್ಪಿಸಿಕೊಂಡಿದ್ದ ಭಾರತದ ಕಲ್ಪನೆಯನ್ನು ರಕ್ಷಿಸಲು ಎಂದು ಪ್ರಿಯಾಂಕ್ ಹೇಳಿದರು. ರಾಹುಲ್ ತಮ್ಮ ಅಜ್ಜಿ ಇಂದಿರಾ ಗಾಂಧಿಯವರ ಪರಂಪರೆಯನ್ನು ಅನುಸರಿಸುತ್ತಿದ್ದಾರೆ. ಇಂದಿರಾ ಅವರನ್ನು ಅನುಸರಿಸುವುದು ತಪ್ಪಲ್ಲ.

ಪೌರ ಕಾರ್ಮಿಕರೊಂದಿಗೆ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನನ್ನ ಅಜ್ಜಿ ಸಿಂಹಿಣಿ ಮತ್ತು ನಾನು ಅವಳಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com