ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಉತ್ಸವ! ವಿಡಿಯೋ ಮೂಲಕ ಬಿಜೆಪಿ ಕಾಲೆಳೆದ ಕಾಂಗ್ರೆಸ್!

ಬಿಜೆಪಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಸಮಾವೇಶದಲ್ಲಿ  ಖಾಲಿ ಕುರ್ಚಿಗಳ ವಿಡಿಯೋಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಲೇವಡಿ ಮಾಡಿದೆ.
ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳು
ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳು
Updated on

ಬೆಂಗಳೂರು: ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಸಮಾವೇಶದಲ್ಲಿ ಖಾಲಿ ಕುರ್ಚಿಗಳ ವಿಡಿಯೋಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಲೇವಡಿ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡುವಾಗ ಕಂಡುಬಂದ ಖಾಲಿ ಕುರ್ಚಿಗಳ ವಿಡಿಯೋಗಳನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ! ಇದು ಜನೋತ್ಸವವಲ್ಲ, ಖಾಲಿ ಕುರ್ಚಿಗಳ ಉತ್ಸವ! ಎಂದು ವ್ಯಂಗ್ಯ ಮಾಡಿದೆ. 

ಬಸವರಾಜ ಬೊಮ್ಮಾಯಿ ಅವರ ಒಂದು ವರ್ಷದ ಸಾಧನೆ ಏನೆಂದು ಈ ಖಾಲಿ ಕುರ್ಚಿಗಳೇ ಹೇಳುತ್ತಿವೆ.  ರಾಜ್ಯಕ್ಕೆ ದ್ರೋಹವೆಸಗಿ ಪೊಳ್ಳು ಸಮಾವೇಶ ಮಾಡಿದ್ದಕ್ಕೆ ರಾಜ್ಯ ಬಿಜೆಪಿಗೆ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ದಮ್ಮು ತಾಕತ್ತು ಇದ್ದರೆ ತಡೆಯಿರಿ' ಎಂದಿರುವ ಬೊಮ್ಮಾಯಿ ಅವರೇ ಅವರೇ, ಯಾರೂ ನಿಮ್ಮ ಸಮಾವೇಶ ತಡೆಯಬೇಕಿಲ್ಲ, ಜನರೇ ತಡೆಯುತ್ತಾರೆ. ಜನರೂ ಇಲ್ಲ, ಉತ್ಸವವೂ ಇಲ್ಲ, ಜನರ ಸ್ಪಂದನೆಯೂ ಇಲ್ಲ, ಬಿಜೆಪಿಗೆ ಉತ್ಸಾಹವೂ ಇಲ್ಲ. ಭ್ರಷ್ಟಾಚಾರದ ಉತ್ಸವ ನಡೆಸುತ್ತಿರುವ ಸರ್ಕಾರಕ್ಕೆ ಖಾಲಿ ಕುರ್ಚಿಗಳು ಉತ್ತರ ಹೇಳುತ್ತಿವೆ. ಜನರೆಲ್ಲ ಮಳೆ ನೀರಲ್ಲಿ ಮುಳುಗಿರುವಾಗ ಸ್ಪಂದನೆ ಇಲ್ಲದ ಸರ್ಕಾರಕ್ಕೆ ಜನ ಉತ್ತರಿಸಿದ್ದಾರೆ.ಈ ಖಾಲಿ ಕುರ್ಚಿಗಳು 'ಜನಾಕ್ರೋಶ'ವನ್ನು ಸಾರುತ್ತಿವೆ ಎಂದು ಕಾಂಗ್ರೆಸ್ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com