ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕೈತಪ್ಪಿದ ಟಿಕೆಟ್: ಬಿಜೆಪಿಯಿಂದ ಪರಿಶಿಷ್ಟ ಜಾತಿಗೆ ಅನ್ಯಾಯ ಎಂದ ಮಾಜಿ ಸಚಿವ ಬಿ. ಸೋಮಶೇಖರ್; ಪಕ್ಷಕ್ಕೆ ರಾಜೀನಾಮೆ

ಜೆ.ಎಚ್. ಪಟೇಲ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಬಿ. ಸೋಮಶೇಖರ್ ಶುಕ್ರವಾರ ಅಂಬೇಡ್ಕರ್ ಜಯಂತಿಯಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಬೆಂಗಳೂರು: ಜೆ.ಎಚ್. ಪಟೇಲ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಬಿ. ಸೋಮಶೇಖರ್ ಶುಕ್ರವಾರ ಅಂಬೇಡ್ಕರ್ ಜಯಂತಿಯಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಬಿಜೆಪಿ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿದೆ ಎನ್ನುವ ಗುರುತಾಗಿ ಈ ದಿನವನ್ನು ಆಯ್ಕೆ ಮಾಡಿದ್ದೇನೆ. ಪರಿಶಿಷ್ಟ ಜಾತಿ ಸಮುದಾಯದ ಸದಸ್ಯನಾಗಿ, ಪಕ್ಷದೊಳಗಿನ ಅತಿರೇಕದ ಜಾತೀಯತೆ ಮತ್ತು ಶ್ರೇಣಿ ವ್ಯವಸ್ಥೆಯಿಂದಾಗಿ ತಾವು ತಾರತಮ್ಯಕ್ಕೊಳಗಾಗಿರುವುದಾಗಿ ಮತ್ತು 'ಉಸಿರುಗಟ್ಟುವಿಕೆ' ಅನುಭವಿಸುತ್ತಿದ್ದಾಗಿ ಹೇಳಿದರು. ಮೂರು ವರ್ಷಗಳ ಕಾಲ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ಸೋಮಶೇಖರ್ ಅವರು, ಕೇಸರಿ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

2014 ರಲ್ಲಿ ಕೇಸರಿ ಪಕ್ಷದೊಂದಿಗೆ ಜೆಡಿಯು ವಿಲೀನಗೊಳಿಸಿದ ನಂತರ ಸುಮಾರು ಒಂದು ದಶಕದ ಕಾಲ ಅವರು ಬಿಜೆಪಿಯಲ್ಲಿದ್ದರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋತಿದ್ದರಿಂದ ಮಳವಳ್ಳಿಯಿಂದ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ಆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಕೆಲವು ಅಂಶಗಳ ನಡುವಿನ ಹೊಂದಾಣಿಕೆಯೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

ವಯಸ್ಸಿನ ಕಾರಣದಿಂದ ಕೈಬಿಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನನಗೆ 71 ವರ್ಷ, ನನಗಿಂತ ಹಿರಿಯರಾದ ಸೋಮಣ್ಣ ಅವರನ್ನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮಾಡಲಾಗಿದೆ. ಇನ್ನು ಹಿರಿಯರಾದ ತಿಪ್ಪಾರೆಡ್ಡಿ ಅವರಿಗೂ ಟಿಕೆಟ್ ಕೊಡಿಸಲು ಚಿಂತನೆ ನಡೆದಿದೆ. ಯಾರಿನ್ನೆಲ್ಲಾ ಕೈಬಿಡಲಾಗಿದೆಯೋ ಅಂತವರಿಗೆಲ್ಲಾ ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ. ಆದರೆ, ನನಗೆ ಯಾರೂ ಹೇಳಿಲ್ಲ. ಅದಕ್ಕೆ ಕಾರಣ ನಾನು ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com