ವಿಧಾನಸಭಾ ಚುನಾವಣೆ: ಕೋಮು ವಿಚಾರಗಳಿಂದ ರಾಜಕೀಯ ಪಕ್ಷಗಳು ದೂರ ದೂರ ದೂರ..!

ಚುನಾವಣೆ ಬಂತೆಂದರೆ ಕೋಮು ವಿಚಾರಗಳು ತಾರಕಕ್ಕೇರುವುದು ಸಾಮಾನ್ಯ. ಚುನಾವಣೆ ವೇಳೆ ಕೋಮು ವಿಚಾರಗಳು ರಾಜಕೀಯ ಪಕ್ಷಗಳ ಅಸ್ತ್ರವಾಗಿರುತ್ತಿದ್ದವು. ಆದರೆ, ಈ ಬಾರಿ ಮಾತ್ರ ರಾಜಕೀಯ ಪಕ್ಷಗಳು ಇದರಿಂದ ದೂರ ಉಳಿದಿರುವಂತೆ ತೋರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಚುನಾವಣೆ ಬಂತೆಂದರೆ ಕೋಮು ವಿಚಾರಗಳು ತಾರಕಕ್ಕೇರುವುದು ಸಾಮಾನ್ಯ. ಚುನಾವಣೆ ವೇಳೆ ಕೋಮು ವಿಚಾರಗಳು ರಾಜಕೀಯ ಪಕ್ಷಗಳ ಅಸ್ತ್ರವಾಗಿರುತ್ತಿದ್ದವು. ಆದರೆ, ಈ ಬಾರಿ ಮಾತ್ರ ರಾಜಕೀಯ ಪಕ್ಷಗಳು ಇದರಿಂದ ದೂರ ಉಳಿದಿರುವಂತೆ ತೋರುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೋಮು ವಿಚಾರಗಳಿಂದ ದೂರ ಉಳಿದು, ಅಭಿವೃದ್ಧಿ, ಭ್ರಷ್ಟಾಚಾರ ವಿಷಯಗಳನ್ನು ಕೇಂದ್ರೀಕರಿಸುತ್ತಿವೆ.

ಕಳೆದ ಒಂದು ವರ್ಷದಲ್ಲಿ ಇಡೀ ದೇಶವೇ ರಾಜ್ಯದತ್ತ ನೋಡುವಂತೆ ಮಾಡಿದ್ದ ಹಿಜಾಬ್, ಆಜಾನ್ ಮತ್ತು ಹಲಾಲ್‌ ವಿವಾದಗಳು ಅಕ್ಷರಶಃ ಮರೆಯಾಗಿವೆ.

ಪ್ರತಿ ಬಾರಿಯೂ ಕೋಮು ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಕಾಂಗ್ರೆಸ್‌ ಭರವಸೆ ನೀಡುತ್ತಿತ್ತು. ಆದರೆ, ಈ ಬಾರಿ, ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರಳಿ ಒದಗಿಸುವುದನ್ನು ಬಿಟ್ಟರೆ, ಬೇರಾವುದೇ ರೀತಿಯ ಕೋಮು ವಿಷಯಗಳ ಕುರಿತು ಕಾಂಗ್ರೆಸ್ ತುಟಿಬಿಚ್ಚುತ್ತಿಲ್ಲ. ಇದರಿಂದಾಗಿ, ಬಿಜೆಪಿಗೆ ಅಸ್ತ್ರವೇ ಇಲ್ಲದಂತಾಗಿದೆ.

ಕೋಮು ಪರಿಭಾಷೆ ಬಳಸಿ, ಕಾಂಗ್ರೆಸ್‌ ವಿರುದ್ಧವಾಗಲೀ, ಅಲ್ಪಸಂಖ್ಯಾತರ ವಿರುದ್ಧವಾಗಲೀ ಹೆಚ್ಚಾಗಿ ಮಾತನಾಡಲಾಗುತ್ತಿಲ್ಲ.

ಬಿಜೆಪಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಸಿ.ಟಿ ರವಿ ಹಾಗೂ ಅವರಂತಹ ಕೆಲವು ಮುಖಂಡರು ‘ಸಿದ್ದರಾಮುಲ್ಲಾ ಖಾನ್‌’ ಎಂದು ಸಿದ್ದರಾಮಯ್ಯರನ್ನು ವೈಯಕ್ತಿಕವಾಗಿ ನಿಂದಿಸುವ ಯತ್ನ ಮಾಡುತ್ತಿದ್ದು ಬಿಟ್ಟರೆ, ಇನ್ನಾವುದೇ ಮಾತಗಳೂ ಕೇಳಿ ಬರುತ್ತಿಲ್ಲ. ಈ ವಿಚಾರ ಕೂಡ ಬಿಜೆಪಿಗೆ ಫಲ ನೀಡುತ್ತಿಲ್ಲ ಎನ್ನಲಾಗುತ್ತಿದೆ.

ಉಳಿದಂತೆ, ಹಿಂದುತ್ವ, ಹಿಂದು ರಾಷ್ಟ್ರ, ರಾಮ, ಹನುಮಂತ, ಮಂದಿರ, ಮಸೀದಿ, ಹಿಜಾಬ್, ಹಲಾಲ್‌ನಂತಹ ಯಾವ ವಿಚಾರಗಳೂ ಚರ್ಚೆಗೆ ಬರುತ್ತಿಲ್ಲ. ಬಿಜೆಪಿ ನಾಯಕರೂ ಕೂಡ ಮುಸ್ಲಿಮರ ಕುರಿತು ಯಾವುದೇ ಮಾತುಗಳನ್ನೂ ಹೇಳುತ್ತಿಲ್ಲ.

2018ರಲ್ಲಿ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಸಿದ್ದರಾಮಯ್ಯನವರ ಆಡಳಿತದಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಮುಖಂಡ ಡಿ ಕುಟ್ಟಪ್ಪ, ಪರೇಶ್ ಮೇಸ್ತ ಮತ್ತಿತರರ ಹತ್ಯೆಗಳ ಮೇಲೆ ಕುರಿತು ಧ್ವನಿ ಎತ್ತಿತ್ತು. ಈ ವಿಚಾರ ಬಿಜೆಪಿಗೆ ವರವಾಗಿ ಮಾರ್ಪಟ್ಟಿತ್ತು. ಕರಾವಳಿ ಪ್ರದೇಶದಲ್ಲಿ ಬಹುತೇಕ ಭಾಗಗಳಲ್ಲಿ ಗೆಲುವು ಸಾಧಿಸುವಂತೆ ಮಾಡಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರಾದ ಹರ್ಷ ಮತ್ತು ದಕ್ಷಿಣ ಕನ್ನಡದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗಳು ರಾಜಕೀಯ ಪಕ್ಷಗಳು ತುಟಿಬಿಟ್ಟಿಲ್ಲ. ಬದಲಿಗೆ ಅಭಿವೃದ್ಧಿ ಕಾರ್ಯಗಳು, ಭ್ರಷ್ಟಾಚಾರ ವಿಚಾರಗಳನ್ನಿಟ್ಟುಕೊಂಡು ಪ್ರಚಾರ ನಡೆಸುತ್ತಿವೆ.

ಸಿದ್ದರಾಮಯ್ಯ ಅವರ 'ಭಾಗ್ಯ'ಯೋಜನೆಗಳ ಕೊಂಡಾಡಿದ ಪ್ರಿಯಾಂಕಾ ಗಾಂಧಿ
ನಿನ್ನೆಯಷ್ಟೇ ಹನೂರಿನಲ್ಲಿ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ ಪ್ರಿಯಾಂಕಾ ಗಾಂಧಿಯವರು, ಸಿದ್ದರಾಮಯ್ಯ ಅವರ 'ಭಾಗ್ಯ' ಯೋಜನೆಗಳ ಕೊಂಡಾಡಿದ್ದರು.

ನಿರುದ್ಯೋಗದ ಸಮಸ್ಯೆಯನ್ನು ಉಲ್ಲೇಖಿಸಿ ಮಾತನಾಡಿದ್ದ ಅವರು, ಕಾರ್ಯಕ್ರಮದಲ್ಲಿ ಹಾಜರಿದ್ದ ನಿರುದ್ಯೋಗಿ ಯುವಕರು ಕೈ ಎತ್ತುವಂತೆ ಹೇಳಿದರು. ಬಳಿಕ ಅಧಿಕಾರಕ್ಕೆ ಬಂದರೆ ಅವರಿಗೆ ಉದ್ಯೋಗ ನೀಡುವ ಭರವಸೆ ನೀಡಿದರು.

ನಮ್ಮ ಪಕ್ಷವು ಗ್ಯಾರಂಟಿ ಕಾರ್ಡ್‌ಗಳನ್ನು ನೀಡಿದ್ದು, ಈ ಭರವಸೆಗಳನ್ನು ಈಡೇರಿಸುತ್ತೇವೆ. ಮಹಿಳೆಯರು, ದಲಿತರು ಮತ್ತು ಇತರ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸಿದ್ದರಾಮಯ್ಯ ಸರ್ಕಾರದ ವಿವಿಧ “ಭಾಗ್ಯ” ಯೋಜನೆಗಳನ್ನು ಜಾರಿಗೆ ತಂದಿತ್ತು ಎಂದರು.

ಕರ್ನಾಟಕದಲ್ಲಿ ನಂದಿನಿಯನ್ನು ಮುಗಿಸಲು ಹೊರಟಿದ್ದಾರೆ. ಗುಜರಾತ್ ನ ಅಮೂಲ್ ಸಂಸ್ಥೆಯನ್ನು‌ ಕರ್ನಾಟಕದ ‌ನಂದಿನಿಯೊಂದಿಗೆ ವಿಲೀನ ಮಾಡಲು ಯೋಚಿಸುತ್ತಿದ್ದಾರೆ. ಇಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ, ಇಲ್ಲಿ ಎಷ್ಟು ಹಾಲಿತ್ತು ಎಂದರೆ ಕ್ಷೀರ ಭಾಗ್ಯ ಎಂಬ ಯೋಜನೆ ಜಾರಿಗೆ ತಂದಿದ್ದೆವು. ಶಾಲಾ ಮಕ್ಕಳಿಗೆ ಬಿಸಿ ಬಿಸಿ ಹಾಲು ಕೊಡುತ್ತಿದ್ದೆವು. ಹಾಗಿರುವಾಗಬೀಗ ಹೇಗೆ ಹಾಲು ಉತ್ಪಾದನೆ ಕಡಿಮೆಯಾಯಿತು' ಎಂದು ಪ್ರಶ್ನಿಸಿದರು.

ಅಲ್ಲದೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಕೆಎಂಎಫ್ ಮತ್ತು ಅದಕ್ಕೆ ಸಂಬಂಧಿಸಿದ ರೈತರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರಿಯಾಂಕಾ ಗಾಂಧಿಯವರು, ಕೆಆರ್ ನಗರದಲ್ಲಿ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿದರು.

ರೋಡ್ ಶೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ಕೆಲಕಾಲ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com