ಮೈಸೂರು: ಲೋಕಸಭಾ ಚುನಾವಣೆ ಹತ್ತಿರಬರುತ್ತಿದ್ದು, ಇದರ ನಡುವಲ್ಲೇ ರಾಜ್ಯ ಕಾಂಗ್ರೆಸ್ ಆರಂಭಿಸಿರುವ ಆಪರೇಷನ್ ಹಸ್ತ ಬಿಜೆಪಿ ನಿದ್ದೆ ಕೆಡುವಂತೆ ಮಾಡಿದೆ. ಪಕ್ಷದ ನಾಯಕರು ಕಾಂಗ್ರೆಸ್ ಸೇರ್ಪಡೆ ತಡೆಯಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಹಿರಿಯ ನಾಯಕರ ಸಮಸ್ಯೆ ಬಗೆಹರಿಸುವ ಯತ್ನಗಳನ್ನು ಮಾಡುತ್ತಿದೆ.
ಆಪರೇಷನ್ ಹಸ್ತ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿಯವರು, ಪಕ್ಷದ ನಾಯಕರು ಯಾವ ಕಾರಣಕ್ಕೆ ಆತಂಕಕ್ಕೊಳಗಾಗಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸುತ್ತಿದ್ದಾರೆಂಬುದು ನಮಗೆ ತಿಳಿಯುತ್ತಿಲ್ಲ. ಆದರೆ, ಸ್ವಾಭಿಮಾನ ಇರುವ ನಾಯಕರು ಹಳೆಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ.
ನಾನು ದೇವೇಗೌಡ ಅವರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂದು ನನ್ನ ತಂದೆ ಬಯಸಿದ್ದರು. ಆದರೆ, ಬಿಜೆಪಿ ಪಕ್ಷದಲ್ಲಿರುವ ಬದ್ಧತೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ ಹೋರಾಟಗಳಿಂದ ಪ್ರಭಾವಿತನಾಗಿ ಬಿಜೆಪಿಯನ್ನು ಆರಿಸಿಕೊಂಡೆ ಎಂದು ತಿಳಿಸಿದರು.
ಇದೇ ವೇಳೆ ಕೆಲ ನಾಯಕರು ಪಕ್ಷಾಂತರಗೊಳ್ಳುತ್ತಿರುವುದನ್ನು ದೃಢಪಡಿಸಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತಮ್ಮ ವಿರುದ್ಧ ಕೆಲಸ ಮಾಡಿದ್ದರಿಂದ ಕೆಲ ನಾಯಕರು ಬೇಸರಗೊಂಡಿದ್ದಾರೆ. ಮಾಜಿ ಸಚಿವರಾದ ಎಸ್ ಟಿ ಸೋಮಶೇಖರ್, ಮುನಿರತ್ನ ಮತ್ತು ಗೋಪಾಲಯ್ಯ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಬಿಜೆಪಿಗೆ ನಾಯಕತ್ವದ ಕೊರತೆ ಇದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವ ಬಗ್ಗೆ ಉತ್ತರಿಸಿದ, ಅಧಿಕಾರ ಹಸ್ತಾಂತರ ಆಗಬಹುದು, ನಾಯಕತ್ವ ಜನರಲ್ಲಿ ಕಾಣಿಸಿಕೊಂಡಂತೆ ಹಸ್ತಾಂತರವಾಗುವುದಿಲ್ಲ. ಕಾಂಗ್ರೆಸ್ ಹಲವಾರು ಬಾರಿ ನಾಯಕರನ್ನು ಬದಲಿಸಿತ್ತು. ಆದರೆ, ಆ ನಾಯಕರು ಜನಸಾಮಾನ್ಯರನ್ನು ಹುರಿದುಂಬಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಮಕ್ಕಳಿಗೆ ಮೊಟ್ಟೆ ನೀಡಲು ಹಣವಿಲ್ಲದಷ್ಟು ರಾಜ್ಯದ ಹಣಕಾಸು ಕೆಳಗಿಳಿದಿದೆ. 200ಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರು ಹೆಚ್ಚಿನ ಹಣ ಪಾವತಿಸುವಂತೆ ಮಾಡಿದ್ದಾರೆಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
Advertisement