ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗುವ ಸೂಚನೆ ಇಲ್ಲ- ಸಹಕಾರ ಸಚಿವ ಕೆಎನ್ ರಾಜಣ್ಣ

ಹಿರಿಯ ರಾಜಕಾರಣಿಯಾಗಿರುವ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಸಹಕಾರ ಸಚಿವ ಕೆಎನ್ ರಾಜಣ್ಣ
ಸಹಕಾರ ಸಚಿವ ಕೆಎನ್ ರಾಜಣ್ಣ

ಹಾಸನ:  ಹಿರಿಯ ರಾಜಕಾರಣಿಯಾಗಿರುವ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಭಾನುವಾರ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಶೆಟ್ಟರ್ ಗೆ ಫೋನ್ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ಎನ್ನುವುದು ನಿಂತ ನೀರಲ್ಲ. ಸದಾ ಚಲನ ಶೀಲ, ಯಾವ ಸಮಯದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದರಂತೆ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗುವ ಸೂಚನೆ ಇಲ್ಲ. ಬಿಜೆಪಿ ನಾಯಕರು ಅವರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ ಎಂದರು.

ಯಾವುದೇ ಕಾರಣಕ್ಕೂ ಶೆಟ್ಟರ್ ವಾಪಸ್ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ನಾವು 135 ಜನ ಶಾಸಕರಿದ್ದೀವಿ, ಎಲ್ಲರೂ ಕೂಡ ಗಟ್ಟಿಯಾಗಿ ಇದ್ದೀವಿ. ಯಾರೂ ಹೋಗೋದು ಇಲ್ಲಾ, ಇನ್ನೂ ಬರೋರು ಇದ್ದಾರೆ ಅಷ್ಟೆ. ಅಧಿಕಾರದಲ್ಲಿರುವಾಗ ಹೋಗಲು ಶಾಸಕರು ಏನು ದಡ್ಡರಾ! ಕಾಂಗ್ರೆಸ್‌ನಲ್ಲಿ ಎಲ್ಲಾ ಹಿರಿಯರೇ ಇದ್ದಾರೆ. ಮಂತ್ರಿಯಾಗುವ ಅರ್ಹತೆ ಇರುವವರೂ ಇದ್ದಾರೆ. ಹಿರಿಯ ನಾಯಕರು ಯಾವಾಗಲೂ ತಪ್ಪು ನಿರ್ಧಾರ ಮಾಡಲ್ಲ ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com