ಮಧ್ಯಪ್ರದೇಶದಲ್ಲಿ ನಡೆಯದ ಕನುಗೋಳು ಸ್ಟ್ಯಾಟರ್ಜಿ: ತೆಲಂಗಾಣ ಗೆಲುವು ರಾಜ್ಯ ಕಾಂಗ್ರೆಸ್ ಗೆ ಬೂಸ್ಟರ್ ಡೋಸ್!

ಪಕ್ಕದ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವು ಸಾಧಿಸಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಬೂಸ್ಟರ್ ಸಿಕ್ಕಿದಂತಾಗಿದೆ.
ತೆಲಂಗಾಣ ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ
ತೆಲಂಗಾಣ ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ

ಬೆಂಗಳೂರು: ಪಕ್ಕದ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವು ಸಾಧಿಸಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಬೂಸ್ಟರ್ ಸಿಕ್ಕಿದಂತಾಗಿದೆ. ಈಗ ಎರಡು ನೆರೆಯ ರಾಜ್ಯಗಳು ಒಂದೇ ಪಕ್ಷದ ಸರ್ಕಾರವನ್ನು ಹೊಂದಿದ್ದು, ಕರ್ನಾಟಕವು ತನ್ನ ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಪಡೆಯಬಹುದು ಮತ್ತು ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾಗುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬಹುದು ಎನ್ನಲಾಗಿದೆ, ಆದರೆ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎರಡು ರಾಜ್ಯಗಳು ಪರಿಹರಿಸುತ್ತವೆಯೇ ಎಂಬುದೇ ದೊಡ್ಡ ಪ್ರಶ್ನೆ.

ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರ ಸಂಪುಟ ಸಹೋದ್ಯೋಗಿಗಳಾದ ಕೆ.ಜೆ.ಜಾರ್ಜ್, ಜಮೀರ್ ಅಹಮದ್ ಖಾನ್ ಮತ್ತು ಡಾ.ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಪ್ರಮುಖರು ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೂಡ ಭಾಗಿಯಾಗಿದ್ದು, ಕರ್ನಾಟಕದಲ್ಲಿ ಖಾತ್ರಿ ಯೋಜನೆಗಳು ಕೆಲಸ ಮಾಡಿಲ್ಲ ಎಂಬ ಭಾರತ ರಾಷ್ಟ್ರ ಸಮಿತಿಯ ಪ್ರಚಾರಕ್ಕೆ ಕರ್ನಾಟಕದ ಕಾಂಗ್ರೆಸ್ ನಾಯಕರು ತಕ್ಕ ಉತ್ತರ ನೀಡಿದ್ದರು. ಗ್ಯಾರಂಟಿಗಳು ನಿಜವಾಗಿಯೂ ಕೆಲಸ ಮಾಡಿದೆ ಮತ್ತು ಸಾಕಷ್ಟು ಪರಿಣಾಮಕಾರಿಯಾಗಿವೆ ಎಂದು ಜನರಿಗೆ ಮನವರಿಕೆ ಮಾಡಿದ್ದಾಗಿ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಕರ್ನಾಟಕದ ಹಲವು ನಾಯಕರು ಕೊಡುಗೆ ನೀಡಿದ್ದಾರೆ. ಹೀಗಾಗಿ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸುವಾಗ ಕರ್ನಾಟಕಕ್ಕಿ ಖಂಡಿತವಾಗಿಯೂ ಸಹಾಯವಾಗುದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಎರಡು ರಾಜ್ಯಗಳ ರಾಜಧಾನಿಗಳಾದ ಬೆಂಗಳೂರು ಮತ್ತು ಹೈದರಾಬಾದ್‌ಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬೂಮ್ ಸಿಗಲಿದೆ, ಏಕೆಂದರೆ ಹೆಚ್ಚಿನ ಹೂಡಿಕೆದಾರರು ಎರಡು ರಾಜ್ಯಗಳನ್ನು ಆಳುವ ಪಕ್ಷದೊಂದಿಗೆ ಆಸಕ್ತಿ ತೋರಿಸಬಹುದು ಎಂದು ಅವರು ಹೇಳಿದರು.

ಕನುಗೋಳಿಗೆ ಫಿಫ್ಟಿ-ಫಿಫ್ಟಿ
ಚುನಾವಣಾ ತಂತ್ರಜ್ಞ ಸುನಿಲ್ ಕನುಗೋಲು ಅವರು ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಕರ್ನಾಟಕದಂತೆಯೇ ಕಾರ್ಯತಂತ್ರವನ್ನು ರೂಪಿಸಿದ್ದರೂ, ಅದು ಮಿಶ್ರ ಫಲಿತಾಂಶಗಳನ್ನು ನೀಡಿತು. ಅವರು ಎರಡೂ ರಾಜ್ಯಗಳಲ್ಲಿ ಚುನಾವಣಾ ವಾರ್ ರೂಂಗಳನ್ನು ತೆರೆದಿದ್ದರು ಮತ್ತು ಗ್ರೌಂಡ್ ಲೆವೆಲ್ ನಲ್ಲಿ ಅಳವಡಿಸಿಕೊಳ್ಳಬೇಕಾದ ಕಾರ್ಯತಂತ್ರಗಳನ್ನು ರೂಪಿಸಿದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ 125 ಮತ್ತು ತೆಲಂಗಾಣದಲ್ಲಿ 67 ಸ್ಥಾನ ಸಿಗುವುದಾಗಿ ಅವರು ಭವಿಷ್ಯ ನುಡಿದಿದ್ದರು, ಆದರೆ ಕಾಂಗ್ರೆಸ್ ಪಕ್ಷವು ಕ್ರಮವಾಗಿ 67 ಮತ್ತು 65 ಸ್ಥಾನಗಳನ್ನು ಗಳಿಸಿತು. ವಾರ್ ರೂಮ್‌ನ ಒಳಹರಿವು ನಮಗೆ ಹೆಚ್ಚಿನ ಸಹಾಯವನ್ನು ನೀಡಿತು, ಅದರಲ್ಲೂ ವಿಶೇಷವಾಗಿ ಕರ್ನಾಟಕ ಚುನಾವಣೆಗೆ ಮುನ್ನ ನೀಡಲಾದ ಭರವಸೆಗಳ ಆಧಾರದ ಮೇಲೆ ತೆಲಂಗಾಣ ಜನರಿಗೆ ಭರವಸೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಕನುಗೋಳು ಅವರ ತಂತ್ರಗಾರಿಕೆಗೆ ಸಹಾಯ ಮಾಡಿತು, ಆದರೆ ಮಧ್ಯಪ್ರದೇಶದಲ್ಲಿ  ಸಾಧ್ಯವಾಗಲಿಲ್ಲ. ಅಲ್ಲಿ ಅವರು ಅಧಿಕಾರ ವಿರೋಧಿ ಅಂಶದ ಲಾಭವನ್ನು ಪಡೆಯಲಾಗಲಿಲ್ಲ. ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸನ್ನು ಕನುಗೋಳು ಅವರಿಗೆ ನೀಡಲಾಯಿತು ಮತ್ತು ಸಿಎಂ ಅವರ ಮುಖ್ಯ ಸಲಹೆಗಾರ ಹುದ್ದೆಯನ್ನು ಬಹುಮಾನವಾಗಿ ನೀಡಿತು. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅವರ ಮೇಲೆ ಅವಲಂಬಿತವಾಗಿದೆಯೇ ಎಂಬುದನ್ನು ಈಗ ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com