ರಾಜ್ಯದಲ್ಲಿರುವುದು 'ಪೇ ಸಿಎಂ, ಪೇ ಡಿಸಿಎಂ' ಸರ್ಕಾರ: ಶಾಸಕ ಯತ್ನಾಳ್ ವಾಗ್ದಾಳಿ

ರಾಜ್ಯದಲ್ಲಿರುವುದು 'ಪೇ ಸಿಎಂ, ಪೇ ಡಿಸಿಎಂ' ಸರ್ಕಾರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಶುಕ್ರವಾರ ವಾಗ್ದಾಳಿ ನಡೆಸಿದರು.
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್

ಬೆಳಗಾವಿ: ರಾಜ್ಯದಲ್ಲಿರುವುದು 'ಪೇ ಸಿಎಂ, ಪೇ ಡಿಸಿಎಂ' ಸರ್ಕಾರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಶುಕ್ರವಾರ ವಾಗ್ದಾಳಿ ನಡೆಸಿದರು.

ಸದನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಯತ್ನಾಳ್‌ ಅವರು, ಸರ್ಕಾರಿ ಇಲಾಖೆಗಳ ಕಾಮಗಾರಿ ನಿರ್ವಹಿಸಿದ ರಾಜ್ಯದ ಗುತ್ತಿಗೆದಾರರಿಗೆ ಹಣ ಪಾವತಿಸದೆ ಕಡೆಗಣಿಸಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆದಾರರ ಬಿಲ್ ಗಳನ್ನು ಮಂಜೂರು ಮಾಡಲು ಸರ್ಕಾರ ಆಸಕ್ತಿ ತೋರಿಸುತ್ತಿದೆ ಎಂದು ಆರೋಪಿಸಿದರು.

ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಕಾಮಗಾರಿಗಳು ಕುಠಿತವಾಗಿದೆ. ನಮ್ಮ ಸರ್ಕಾರವನ್ನು ಪೇಟಿಎಂ ಸರ್ಕಾರ ಎಂದು ಹೇಳುತ್ತಿದ್ದರು. ಇದು ಪೇ ಸಿಎಂ ಸರ್ಕಾರ ಆಗಿದೆ. ಈ ಸರ್ಕಾರದಲ್ಲಿ ಪೇ ಸಿಎಂ, ಪೇ ಡಿಸಿಎಂ ಎಂಬ ದೊಡ್ಡ ಹಗರಣ ನಡೆದಿದೆ. ಸರ್ಕಾರದ ಕಮಿಷನ್ ಶೇ.80 ಕ್ಕೆ ಬಂದು‌ ನಿಂತಿದೆ ಎಂದು ವಾಗ್ದಾಳಿ ನಡೆಸಿದರು.

ಯತ್ನಾಳ್ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾಜಕೀಯ ದುರುದ್ದೇಶದಿಂದ ಆರೋಪ ಮಾಡಿತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com