ಜಿಟಿ ದೇವೇಗೌಡರ ರ‍್ಯಾಲಿ: ನನ್ನ ತಂದೆ ಮುಖ್ಯಮಂತ್ರಿಯಾಗಲು ರಾಜಕೀಯ ಜೀವನ ತ್ಯಾಗಕ್ಕೆ ಸಿದ್ಧ ಎಂದ ನಿಖಿಲ್ ಕುಮಾರಸ್ವಾಮಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಸವಾಲು ಹಾಕಲು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ನ ಅತೃಪ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವ ಸಂದರ್ಭದಲ್ಲೇ ದೇವೇಗೌಡ ಅವರು ಭಾನುವಾರ ಬೃಹತ್ ಸಮಾವೇಶ ನಡೆಸಿ ಟೀಕಾಕಾರರ ಬಾಯಿ ಮುಚ್ಚಿಸಿದರು.
ಜಿಟಿ ದೇವೇಗೌಡರ ರ‍್ಯಾಲಿಯಲ್ಲಿ ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ರ‍್ಯಾಲಿಯಲ್ಲಿ ನಿಖಿಲ್ ಕುಮಾರಸ್ವಾಮಿ
Updated on

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಸವಾಲು ಹಾಕಲು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ನ ಅತೃಪ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವ ಸಂದರ್ಭದಲ್ಲೇ ದೇವೇಗೌಡ ಅವರು ಭಾನುವಾರ ಬೃಹತ್ ಸಮಾವೇಶ ನಡೆಸಿ ಟೀಕಾಕಾರರ ಬಾಯಿ ಮುಚ್ಚಿಸಿದರು.

ಇದನ್ನು ಯುವ ನಾಯಕರ ಜನ್ಮೋತ್ಸವ ಎಂದು ಕರೆಯಲಾಗುತ್ತಿದ್ದು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಯಲವಾಲ್, ಗುಂಗ್ರಾಲ್ ಛತ್ರ, ಮಾವಿನಹಳ್ಳಿ ಸೇರಿದಂತೆ ಗ್ರಾಮೀಣ ಭಾಗದ ಸಾವಿರಾರು ಯುವಕರು ಬೈಕ್ ರ‍್ಯಾಲಿ ನಡೆಸಿದ್ದರಿಂದ ಯುವಜನೋತ್ಸವದಂತಿತ್ತು. 

ಮೈಸೂರು ಹೊರವಲಯದ ಎಚ್‌ಡಿ ಕೋಟೆ ರಸ್ತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪಕ್ಷದ ಯುವ ಮುಖಂಡರಾದ ಜಿಟಿ ದೇವೇಗೌಡ ಅವರ ಪುತ್ರ ಹರೀಶ್‌ ಗೌಡ ಮತ್ತು ಎಚ್.ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ಆಗಮಿಸಿದರು.

'ನನ್ನ ತಂದೆ ಹಾಗೂ ಪಕ್ಷದ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲು ರಾಜಕೀಯ ಜೀವನವನ್ನೇ ತ್ಯಾಗ ಮಾಡಲು ನಾನು ಸಿದ್ಧ ಎಂದು ನಿಖಿಲ್ ಹೇಳಿದ್ದಾರೆ. 

ದೇವೇಗೌಡ ಮತ್ತು ಇತರ ಜೆಡಿಎಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ನಿಖಿಲ್, ಜೆಡಿಎಸ್ ಶಾಸಕರು ಪಕ್ಷದ ಶಕ್ತಿ ಮತ್ತು ಒಂದು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯವಾಗಿರುತ್ತವೆ. ಜಿಟಿ ದೇವೇಗೌಡ ಮತ್ತು ಹರೀಶ್ ನಿಜವಾಗಿಯೂ ಅವಿಭಕ್ತ ಕುಟುಂಬದ ಸದಸ್ಯರು ಎಂದು ಅವರು ಹೇಳಿದರು.

ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರವಾದ ಯುವಕರ ನೆಲೆಯನ್ನು ಹೊಂದಿದ್ದು, ಹರೀಶ್, ಪಿರಿಯಾಪಟ್ಟಣ ಶಾಸಕ ಮಹದೇವು ಅವರ ಪುತ್ರ ಪ್ರಸನ್ನ, ಟಿ ನರಸೀಪುರ ಶಾಸಕ ಅಶ್ವಿನ್ ಕುಮಾರ್ ಮತ್ತಿತರರು ಕಳೆದ ಕೆಲವು ವರ್ಷಗಳಿಂದ ಜನರಿಗಾಗಿ ಶ್ರಮಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಪ್ರಬಲ ಅಲೆ ಇದೆ ಮತ್ತು ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿರುವ ದಕ್ಷಿಣದ ಇತರ ರಾಜ್ಯಗಳತ್ತ ಗಮನ ಹರಿಸಬೇಕು ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com