ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಗಾರು ಮಳೆಗೆ 'ಅಕ್ಕಿ' ರಾಜಕೀಯದಲ್ಲಿ ಬೇಯುತ್ತಿರುವ ಕರ್ನಾಟಕ ರಾಜಕಾರಣ!

ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿ ಭಾಗ್ಯಗಳಲ್ಲಿ ಒಂದಾದ ಅನ್ನಭಾಗ್ಯವನ್ನು ಯಥಾಪ್ರಕಾರ ಜನತೆಗೆ ನೀಡಿದ ಆಶ್ವಾಸನೆಯಂತೆ ಜಾರಿಗೆ ತರಲು ಸರ್ಕಾರವು ವಿವಿಧ ಆಯ್ಕೆಗಳನ್ನು ಪ್ರಯತ್ನಿಸುತ್ತಿರುವುದರ ಮಧ್ಯೆ ಕರ್ನಾಟಕ ರಾಜಕೀಯ ಅಕ್ಕಿ ರಾಜಕಾರಣದಲ್ಲಿ ಬೆಂದುಹೋಗುತ್ತಿದೆ.
Published on

ಬೆಂಗಳೂರು: ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿ ಭಾಗ್ಯಗಳಲ್ಲಿ ಒಂದಾದ ಅನ್ನಭಾಗ್ಯವನ್ನು ಯಥಾಪ್ರಕಾರ ಜನತೆಗೆ ನೀಡಿದ ಆಶ್ವಾಸನೆಯಂತೆ ಜಾರಿಗೆ ತರಲು ಸರ್ಕಾರವು ವಿವಿಧ ಆಯ್ಕೆಗಳನ್ನು ಪ್ರಯತ್ನಿಸುತ್ತಿರುವುದರ ಮಧ್ಯೆ ಕರ್ನಾಟಕ ರಾಜಕೀಯ ಅಕ್ಕಿ ರಾಜಕಾರಣದಲ್ಲಿ ಬೆಂದುಹೋಗುತ್ತಿದೆ.

ಅನ್ಯ ರಾಜ್ಯಗಳು ಮತ್ತು ಕೇಂದ್ರ ಸಂಸ್ಥೆಗಳಿಂದ ಸಹಾಯ ಪಡೆದು 'ಅನ್ನ ಭಾಗ್ಯ' ಖಾತರಿ ಯೋಜನೆಯನ್ನು ಜುಲೈ.1 ರಂದು ಜಾರಿಗೆ ತರಲಾಗುವುದು ಎಂದು ನೀಡಿದ್ದ ಭರವಸೆ ಜಾರಿಗೆ ಬರುವುದು ಅಸಂಭವವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಾಯಕರ ಮಧ್ಯೆ ತೀವ್ರ ವಾಗ್ಬಾಣಗಳು, ರಾಜಕೀಯ ಕೆಸರೆರಚಾಟ ಮುಂದುವರಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಆಡಳಿತವಿರುವ ಛತ್ತೀಸ್ ಗಢ ರಾಜ್ಯದಿಂದ 1.5 ಟನ್ ಅಕ್ಕಿ ಖರೀದಿಸುವ ಭರವಸೆ ಹೊಂದಿದ್ದಾರೆ. ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳಿಂದ ಭತ್ತ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರವು ವೆಚ್ಚ ಪರಿಣಾಮಕಾರಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ.ಯೋಜನೆಯನ್ನು ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಅವರು ಭಾರತ ಸರ್ಕಾರದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF), ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ಕೇಂದ್ರೀಯ ಭಂಡಾರದಿಂದ ಪ್ರಮಾಣ ಮತ್ತು ಬೆಲೆಯ ವಿವರಗಳನ್ನು ಸರ್ಕಾರ ಕೇಳಿದೆ. 

ಭಾರತೀಯ ಆಹಾರ ನಿಗಮದಿಂದ ಪ್ರತಿ ಕೆಜಿಗೆ 36.40 ರೂ. (ಅಕ್ಕಿಯ ಬೆಲೆ ಪ್ರತಿ ಕೆಜಿಗೆ 34 ರೂ. ಕೆ.ಜಿ ಮತ್ತು ಹೆಚ್ಚುವರಿಯಾಗಿ ಕೆ.ಜಿ.ಗೆ 2.60 ರೂ. ಸಾಗಣೆ ವೆಚ್ಚ ಸೇರಿದಂತೆ) ವೆಚ್ಚವಾಗುತ್ತದೆ. ಆದರೆ ಅನ್ನಭಾಗ್ಯ ಯೋಜನೆ ಕಾರ್ಯರೂಪಕ್ಕೆ ಬರುವವರೆಗೆ ರಾಜಕೀಯ ವಿಷಯಗಳೇ ಹೆಚ್ಚು ಸುದ್ದಿಯಾಗುವ ಸಾಧ್ಯತೆಯಿದೆ.

ಬೆಲೆಗಳ ಹಣದುಬ್ಬರವನ್ನು ಪರಿಶೀಲಿಸಲು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ನಿಲ್ಲಿಸುವ ಕೇಂದ್ರದ ನೀತಿ ನಿರ್ಧಾರದಿಂದ ಈ ರಾಜಕೀಯ ಆರೋಪ-ಪ್ರತ್ಯಾರೋಪಗಳು ಆರಂಭವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ.

ಆದರೆ, ಜುಲೈ1 ರಂದು ಸರ್ಕಾರ ಖಾತರಿಯನ್ನು ಜಾರಿಗೊಳಿಸಲು ವಿಫಲವಾದರೆ ತೀವ್ರ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ಸರ್ಕಾರದ ಪೂರ್ವಸಿದ್ಧತೆಯ ಕೊರತೆಯೇ ಇದಕ್ಕೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದೂಷಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಸಿಎಂ ಸಿದ್ದರಾಮಯ್ಯ ಏನು ಹೇಳುತ್ತಾರೆ?: ಬೇರೆ ಏಜೆನ್ಸಿಗಳು ಇರುವುದರಿಂದ ಭಾರತೀಯ ಆಹಾರ ನಿಗಮದಿಂದ ಮಾತ್ರ ಅಕ್ಕಿ ತರಬಾರದು. ಸರ್ಕಾರ ಜನರಿಗೆ ನೀಡಿದ ಮಾತು ಉಳಿಸಿಕೊಳ್ಳಲು ಆದರೆ ಬಿಜೆಪಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಿ ಎಂದು ಸಿದ್ದರಾಮಯ್ಯ ಹೇಳಿದರು. 

ರಾಗಿ ಮತ್ತು ಜೋಳದ ದಾಸ್ತಾನು ಹಳೇ ಮೈಸೂರು ಭಾಗದವರಿಗೆ 2 ಕೆಜಿ ರಾಗಿ ಮತ್ತು ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದ ಜನರಿಗೆ 2 ಕೆಜಿ ಜೋಳವನ್ನು 3 ಕೆಜಿ ಅಕ್ಕಿಯೊಂದಿಗೆ ನೀಡಬಹುದಾದ್ದರಿಂದ ರಾಜ್ಯವು 6 ತಿಂಗಳಿಗೆ ತಲಾ 2 ಕೆಜಿ ವಿತರಿಸಲು ಸಾಕು, ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮನವೊಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ ಹೇಳಿದ್ದರು. 

ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರಿ ಫೆಡರಲಿಸಂ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ. ಕೇಂದ್ರ ಸರ್ಕಾರವು ರಾಜ್ಯಗಳಿಂದ ತೆರಿಗೆಗಳನ್ನು ಪಡೆಯುತ್ತದೆ ಹೀಗಿರುವಾಗ ರಾಜ್ಯಗಳಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು. 

ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿಎನ್ ಪ್ರಕಾಶ್ ಕಮ್ಮರಡ್ಡಿ ಅವರು ಕರ್ನಾಟಕ ರೈತರಿಂದ ರಾಗಿ ಮತ್ತು ಜೋಳವನ್ನು ಎಂಎಸ್‌ಪಿ-ಗರಿಷ್ಠ ಚಿಲ್ಲರೆ ದರದಲ್ಲಿ ಖರೀದಿಸಿ ಜನರಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆ-(PDS)ಮೂಲಕ ವಿತರಿಸಬೇಕು ಎಂದು ಸಲಹೆ ನೀಡಿದರು. ವಿತರಿಸಬೇಕಾದ ಅಗ್ಗದ ಗುಣಮಟ್ಟದ ಅಕ್ಕಿ ಮರುಬಳಕೆಗಾಗಿ ಕಾಳಸಂತೆಗೆ ಹೋಗುತ್ತಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com