ಬಾಗಲಕೋಟೆ ಬಿಜೆಪಿ ಸಭೆಯಲ್ಲಿ ಜಟಾಪಟಿ: ಪಕ್ಷ ವಿರೋಧಿಗಳ ಹೊರಹಾಕುವಂತೆ ಆಗ್ರಹ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಲು ನಗರದ ಚಿರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶವು ಅಕ್ಷರಶಃ ರಣರಂಗವಾಯಿತು.
ಮಾತಿನ ಚಕಮಕಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರು.
ಮಾತಿನ ಚಕಮಕಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರು.

ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಲು ನಗರದ ಚಿರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶವು ಅಕ್ಷರಶಃ ರಣರಂಗವಾಯಿತು.

ಕಳೆದ ವಿಧಾನಸಭಾ ಚುನಾವಣೆಯೂ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಕಾಣಿಸಿಕೊಂಡವರನ್ನು ಸಮಾವೇಶದಿಂದ ಹೊರದಬ್ಬದಿದ್ದರೆ ಪಕ್ಷ ನಿಷ್ಠರು ಹೊರಗೆ ನಡೆಯುತ್ತೇವೆಂದು ಕಾರ್ಯಕರ್ತರು ವೇದಿಕೆ ಮೇಲಿರುವ ನಾಯಕರಿಗೆ ನೇರವಾಗಿ ಸವಾಲೆಸೆದರು. ಇದರಿಂದ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.

ಕಾರ್ಯಕ್ರಮ ಆರಂಭಗೊಂಡು ಪಕ್ಷದ ಜಿಲ್ಲಾಧ್ಯಕ್ಷ ಎಸ್'ಟಿ ಪಾಟೀಲ ಅವರು ಕೂಡ ಪಕ್ಷ ವಿರೋಧಿಗಳಿಗೆ ತಕ್ಕಪಾಠ ಕಲಿಸಬೇಕೆಂಂಬ ಧಾಟಿಯಲ್ಲಿ ಭಾಷಣ ಮಾಡಿ ಮುಗಿಸಿದರು.

ನಂತರ ಸಭೆಗೆ ಕ್ಷಮೆಯಾಚಿಸಿ ಮಾತು ಆರಂಭಿಸಿದ ಪಕ್ಷದ ಜಿಲ್ಲಾ ಉಪಾಧ್ಯಕ್| ಆಯಿಲ್ ಕಾರ್ಪೊರೇಶನ್ ಆಫ್ ಇಂಡಿಯಾದ ನಿರ್ದೇಶಕ ರಾಜು ರೇವಣಕರ, ಮೊನ್ನೆಯ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಪಕ್ಷವನ್ನು ಸೋಲಿಸಲು ಓಡಾಡಿದವರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರನ್ನು ಹೊರದಬ್ಬಿ ನಿಮ್ಮಿಂದ ಅದು ಸಾಧ್ಯವಾಗದಿದ್ದರೆ, ನಾವೇ ಹೊರ ನಡೆಯುತ್ತೇವೆಂದು ಜೋರಾದ ಧ್ವನಿಯಲ್ಲಿ ಹೇಳಿದರು.

ರಾಜು ರೇವಣಕರ ಹೇಳಿಕೆ ನೀಡುತ್ತಿದ್ದಂತೆಯೇ ನೂರಾರು ಕಾರ್ಯಕರ್ತರು ಅವರಿಗೆ ಧ್ವನಿಗೂಡಿಸಿದರು. ಅತ್ತ ವೇದಿಕೆಯಲ್ಲಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜುನಾಯ್ಕರ ಕೂಡ ಇದಕ್ಕೆ ಧ್ವನಿಗೂಡಿಸಿದರು.

ನಂತರ ಸಭೆಯಿಂದ ಮುಖಂಡರಾದ ಶಂಭುಗೌಡ ಪಾಟೀಲ, ಚಂದ್ರಕಾಂತ ಕೇಸನೂರ ಅವರು ರಾಜು ರೇವಣಕರ ಸೇರಿದಂತೆ ಇದರರೊಂದಿಗೆ ವಾಗ್ವಾದ ನಡೆಸುತ್ತಲೇ ಹೊರ ನಡೆದರು. ಆದರೆ, ವೈದ್ಯಕೀಯ ಪ್ರಕೋಷ್ಟದ ಡಾ.ಶೇಖರ ಮಾನೆ ಹಾಗೂ ಮುಖಂಡ ಸಂಗನಗೌಡ ಪಾಟೀಲ ಅವರು ಸಭೆಯಲ್ಲೇ ಉಳಿದುಕೊಂಡರು.

ಕೆಲ ದಿನಗಳ ಹಿಂದೆಯಷ್ಟೇ ಹಿರಿಯ ನಾಯಕರಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ಪ್ರತಿಸ್ಪರ್ಧಿ ಅಭ್ಯರ್ಥಿಗಳ ಪಕ್ಷಗಳೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಆರೋಪಿಸಿದ್ದರು.

ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಮರು ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದರು. ಈ ಬೆಳವಣಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಬೊಮ್ಮಾಯಿ ಅವರಿಗೆ ಮುಜುಗರವನ್ನುಂಟು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com