ರಾಮಸ್ವಾಮಿ-ಶಿವಲಿಂಗೇಗೌಡ ಆರೋಪಗಳು ರಾಜಕೀಯ ಪ್ರೇರಿತ: ಎಚ್ ಡಿ ರೇವಣ್ಣ

ಪಕ್ಷ ತೊರೆದಿರುವ AT ರಾಮಸ್ವಾಮಿ ಮತ್ತು ಶಿವಲಿಂಗೇಗೌಡ ಅವರ ಆರೋಪಗಳು ರಾಜಕೀಯ ಪ್ರೇರಿತವಾದದ್ದು ಎಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಹೇಳಿದ್ದಾರೆ.
ಎಚ್.ಡಿ ರೇವಣ್ಣ
ಎಚ್.ಡಿ ರೇವಣ್ಣ
Updated on

ಹಾಸನ: ಪಕ್ಷ ತೊರೆದಿರುವ AT ರಾಮಸ್ವಾಮಿ ಮತ್ತು ಶಿವಲಿಂಗೇಗೌಡ ಅವರ ಆರೋಪಗಳು ರಾಜಕೀಯ ಪ್ರೇರಿತವಾದದ್ದು ಎಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಹೇಳಿದ್ದಾರೆ.

ಜೆಡಿಎಸ್‌ನ ಹಾಲಿ ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತು ಕೆ.ಎಂ.ಶಿವಲಿಂಗೇಗೌಡ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ರೇವಣ್ಣ, 'ರಾಜಕೀಯ ಲಾಭಕ್ಕಾಗಿ ತಮ್ಮ ಮತ್ತು ಪಕ್ಷದ ವಿರುದ್ಧ ಎಟಿ ರಾಮಸ್ವಾಮಿ ಮತ್ತು ಶಿವಲಿಂಗೇಗೌಡ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹಾಸನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಇಬ್ಬರೂ ನಾಯಕರು ದಶಕಗಳಿಂದ ಅಧಿಕಾರವನ್ನು ಅನುಭವಿಸಿದ್ದಾರೆ.. ಆಗ ಪಕ್ಷದ ಹಿರಿಯ ನಾಯಕರ ವಿರುದ್ಧ ಯಾವುದೇ ವಿವಾದವನ್ನು ಎತ್ತಲಿಲ್ಲ. ಈಗ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಶಾಸಕ ಎ.ಮಂಜು (A.Manju) ಜೊತೆ ಅಡ್ಜಸ್ಟ್ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ ಎಂದು ಶಾಸಕ ಎ.ಟಿ ರಾಮಸ್ವಾಮಿ (A.T.Ramaswamy) ಸಾಬೀತು ಪಡೆಸಿದರೆ ನಾನು ಅವರು ಹೇಳುವ ಶಿಕ್ಷೆಗೆ ಗುರಿಯಾಗುತ್ತೇನೆ.. ಸುಳ್ಳು ಪ್ರಮಾಣ ಪತ್ರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಮಂಜು ಅವರನ್ನು ಸೆಳೆಯುವ ಪ್ರಶ್ನೆಯೇ ಇಲ್ಲ. ಎ ಮಂಜು ಜೆಡಿಎಸ್‌ಗೆ ಸೇರ್ಪಡೆಯಾಗುವ ಬಗ್ಗೆ ತಮಗೆ ತಿಳಿದಿಲ್ಲ, ಪಕ್ಷವು ಅವರಿಗೆ ಅರಕಲಗೂಡು ಟಿಕೆಟ್ ಅಂತಿಮಗೊಳಿಸಿಲ್ಲ ಎಂದು ಹೇಳಿದರು.

ಎ.ಟಿ ರಾಮಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಗನ ಮೇಲೆ ಕೇಸ್ ದಾಖಲಿಸಿದವನ ಜೊತೆ ರಾಜಿ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ರಾಮಸ್ವಾಮಿ ಹೇಳಿದ್ದಾರೆ. ಅವರು ಸೀನಿಯರ್ ಅಡ್ವಕೇಟ್ ಇಟ್ಟುಕೊಂಡರು ಸಹ ಹೈಕೋರ್ಟ್‍ನಲ್ಲಿ ನಮ್ಮ ಪರವೇ ಆಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ನಮ್ಮ ಅಡ್ವಕೇಟ್ ಬಾರದ ಕಾರಣ ರಿಮೆಂಟ್ ಆಯ್ತು. ಅದರ ಪ್ರತಿಯನ್ನು ರಾಮಸ್ವಾಮಿ ಓದಿಕೊಳ್ಳಲಿ. ನಮ್ಮ ಸಂಪೂರ್ಣ ಆಸ್ತಿಯನ್ನು ಐಟಿಗೆ ನೀಡಿದ್ದೇನೆ ಇಡಿ ಮೂಲಕ ತನಿಖೆ ನಡೆಸಿಕೊಳ್ಳಲಿ ಎಂದು ಗುಡುಗಿದ್ದಾರೆ. 

ರಾಮಸ್ವಾಮಿಯವರು ಎರಡು ವರ್ಷದಿಂದ ಯಾವ್ಯಾವ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದರು ಎಂದು ಹೇಳಲಿ. ಹಾಸನ ಮತ್ತು ಬೆಂಗಳೂರಿನಲ್ಲಿ ನಡೆದ ಜಲಧಾರೆ ಯಾತ್ರೆಗೆ ಯಾಕೆ ಬರಲಿಲ್ಲ? ಅವರಿಗೆ ಸೀಟ್ ಕೊಡದೆ ಒದ್ದು ಓಡಿಸಿದ್ದಕ್ಕೆ ನಿಮ್ಮ ಹತ್ರ ಬಂದಿದ್ದಾರೆ ಎಂದು ಶಿವಲಿಂಗೇಗೌಡರು ಹೇಳಿದ್ರಾ? ಹಾಗಾದರೆ ಶಿವಲಿಂಗೇಗೌಡರು ಧರ್ಮಸ್ಥಳದ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು.

ಎರಡು ವರ್ಷದಿಂದ ಕಾಂಗ್ರೆಸ್ ಕದ ತಟ್ಟುತ್ತಿದ್ದರು. ಅಲ್ಲಿ ಸೋಲ್ತಾರೆ ಎಂದ ಮೇಲೆ ನಮ್ಮ ಬಳಿ ಬಂದಿದ್ದಾರೆ. ನಾವು ಯಾರ ಹತ್ರವೂ ಅಡ್ಜಸ್ಟ್ ಆಗಿಲ್ಲ. ಎ. ಮಂಜು ಬರ್ತೀನಿ ಅಂದ್ರೆ ಪಕ್ಷ ತೀರ್ಮಾನ ಮಾಡುತ್ತದೆ. ಶಿವಲಿಂಗೇಗೌಡ (K.L.Shivalinge Gowda) ಪಕ್ಷ ತೊರೆದ ವಿಚಾರವಾಗಿ, ನಾವು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು. ಅವರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

ಪಕ್ಷ ಬಿಡಲ್ಲ ಅಂತ ಹೇಳಿದ್ದ ಶಿವಲಿಂಗೇಗೌಡ್ರೆ ಪಕ್ಷ ಬಿಟ್ರು
ದೇವರಾಣೆ ಪಕ್ಷ ಬಿಡಲ್ಲ ಎಂದು ಕೆ.ಎಂ ಶಿವಲಿಂಗೇಗೌಡ ಅಂದಿದ್ರು, ಆದರೂ ಪಕ್ಷ ತೊರೆದಿದ್ದಾರೆ. ಕುಮಾರಸ್ವಾಮಿಯವರ (H.D.Kumaraswamy) ಮನೆಯಲ್ಲಿ ಈ ಮಾತು ಹೇಳಿಲ್ಲ ಎಂದರೆ ಅವರು ಧರ್ಮಸ್ಥಳದ ಮಂಜುನಾಥಸ್ವಾಮಿಯ ಮೇಲೆ ಆಣೆಮಾಡಲಿ. ಶಿವಲಿಂಗೇಗೌಡರು ಹೇಳಿದ ಕೆಲಸಗಳನ್ನೆಲ್ಲ ಮಾಡಿಕೊಟ್ಟಿದ್ದೇವೆ. ಜೆಡಿಎಸ್ (JDS) ಗೆ ದುಡ್ಡು ಕೊಟ್ಟು ವೋಟು ತೆಗೆದುಕೊಳ್ಳುವ ಶಕ್ತಿ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬಳಿ ಖಜಾನೆಯಿದೆ. ಅರಸಿಕೆರೆಯಲ್ಲಿ ಬಿಜೆಪಿಯವನು ನಿಂತರೆ ಸೋಲುತ್ತೇನೆ. ಲಿಂಗಾಯತರೆಲ್ಲ ಒಂದೇ ಕಡೆ ಓಟು ಹಾಕುತ್ತಾರೆ ಎಂದು ಶಿವಲಿಂಗೇಗೌಡರು ಹೇಳಿದ್ದರು. ಕಳೆದ ಬಾರಿ ಐದು ಶಾಸಕರು ಕಾಂಗ್ರೆಸ್ (Congress) ತೊರೆದಿದ್ದರು. ಅರಸಿಕೆರೆ ಜನ ದುಡ್ಡಿಗೆ ಮತ ಹಾಕುತ್ತಾರಾ ಎಂದು ರೇವಣ್ಣ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com