ವಿಧಾನಸಭೆ ಚುನಾವಣೆ: ಬಿಜೆಪಿ- ಕಾಂಗ್ರೆಸ್ ಟಿಕೆಟ್ ಮಿಸ್ ; ಅವಕಾಶ ವಂಚಿತರಿಗಾಗಿ ಕಾಯುತ್ತಿದೆ ಜೆಡಿಎಸ್ 'ಬಸ್'!

ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಬಿಜೆಪಿ ತನ್ನ ಪಟ್ಟಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸಲಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು:  ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಬಿಜೆಪಿ ತನ್ನ ಪಟ್ಟಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸಲಿದೆ.

ಬಿಜೆಪಿ -ಕಾಂಗ್ರೆಸ್ ನಿಂದ ಟಿಕೆಟ್ ತಪ್ಪಿದವರು ಜೆಡಿಎಸ್‌ನತ್ತ ಮುಖ ಮಾಡುವ ಸಾಧ್ಯತೆಯಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಮಂಡಳಿ ಮತ್ತು ನಿಗಮಗಳಿಗೆ ನಾಮನಿರ್ದೇಶನ ಮಾಡುವ ಭರವಸೆಯೊಂದಿಗೆ ಇಂತಹ ನಡೆಗಳನ್ನು ವಿಫಲಗೊಳಿಸುವ ಸಾಧ್ಯತೆಯಿದೆ.

ಟಿಕೆಟ್ ನೀಡಲು ತನ್ನದೇ ಆದ ಸೂತ್ರವನ್ನು ಹೊಂದಿರುವ ಬಿಜೆಪಿ ಗೆಲುವಿನ ಅಂಶದೊಂದಿಗೆ ಹೋಗುವ ಸಾಧ್ಯತೆಯಿದೆ, ಇದರರ್ಥ ಕೆಲವು ಆಕಾಂಕ್ಷಿಗಳು ಟಿಕೆಟ್ ವಂಚಿತರಾಗಬಹುದು. ವಯಸ್ಸಿನ ಅಂಶದಿಂದಾಗಿ ಇತರರನ್ನು ಹೊರಗಿಡಬಹುದು.

ಈ ಬಾರಿ ಜಾತಿ ಸಮೀಕರಣ ಮತ್ತು ಜತೆಗೆ ಆಂತರಿಕ ಸಂಸ್ಥೆಗಳು ನಡೆಸುವ ವೈಜ್ಞಾನಿಕ ಸಮೀಕ್ಷೆಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ. ಉಭಯ ಪಕ್ಷಗಳ ಟಿಕೆಟ್‌ ವಿಚಾರದಲ್ಲಿ ಹೈಕಮಾಂಡ್‌  ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ  ಪಟ್ಟಿಗೆ ಸೇರಲು ತಪ್ಪಿಸಿಕೊಂಡವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸುವ ಸಾಧ್ಯತೆ ಇದೆ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ. ನಾವು ಪ್ರತಿಸ್ಪರ್ಧಿ ಪಕ್ಷಗಳಿಂದ ಅಂತಹ 30 ಬಂಡಾಯ ಅಭ್ಯರ್ಥಿಗಳನ್ನು ನಿರೀಕ್ಷಿಸುತ್ತಿದ್ದೇವೆ,  ಅವರಲ್ಲಿ ಕನಿಷ್ಠ 10 ಜನರಿಗೆ ಜೆಡಿಎಸ್ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಗೆಲ್ಲಬಹುದು, ಆದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ಈಗಾಗಲೇ ಕಾಂಗ್ರೆಸ್‌ನ ಮಾಜಿ ಮುಖಂಡ ಎ ಮಂಜು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು, ಅರಕಲಗೂಡಿನಿಂದ ಸ್ಪರ್ಧಿಸಲಿದ್ದಾರೆ. ಆದರೆ ಪಕ್ಷದ ನಾಯಕರು ಜೆಡಿಎಸ್‌ಗೆ ಬದಲಾಗುತ್ತಿರುವುದನ್ನು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.ಪಕ್ಷವು ಬಂಡಾಯಗಾರರನ್ನು ಮನವೊಲಿಸುವ ಮೂಲಕ ಇಂತಹ ಸಮಸ್ಯೆಗಳನ್ನು ಬಗೆಹರಿಸುತ್ತಿದೆ ಎಂದಿದ್ದಾರೆ.

ಕಿಮ್ಮನೆ ರತ್ನಾಕರ್ ಮತ್ತು ಟಿ ಬಿ ಜಯಚಂದ್ರ ಅವರಂತಹ ಹಿರಿಯ ನಾಯಕರಿಗೆ ತಮ್ಮ ಸ್ಥಾನವನ್ನು ತ್ಯಾಗ ಮಾಡಲು ಹಲವು ಪ್ರಬಲ ಸ್ಪರ್ಧಿಗಳು ಮನವರಿಕೆ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತ್ಯಾಗ ಮಾಡಿದವರಿಗೆ ಮಂಡಳಿ, ನಿಗಮಗಳಲ್ಲಿ ಹುದ್ದೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕರ್ನಾಟಕದಲ್ಲಿ ಮೂರೂ ಪಕ್ಷಗಳಿಂದ ಟಿಕೆಟ್ ತಪ್ಪಿದ ಕೆಲವರು, ಎಎಪಿ, ಎಸ್‌ಡಿಪಿಐ ಅಥವಾ ಬಿಎಸ್‌ಪಿಯಂತಹ ಪಕ್ಷಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಲಿದ್ದಾರೆ ಎಂದು ರಾಜಕೀಯ ಪಂಡಿತರು  ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com