ಬದಲಾಗದ ಜಾತಿ ಸಮೀಕರಣ, ಯಾರಿಗೆ ಗೆಲುವಿನ ಹೂರಣ: ಏನಂತಾರೆ ಧಾರವಾಡ ಕ್ಷೇತ್ರದ ಜನ?

ಮೊದಲು ಈ ಭಾಗವು ಹೆಚ್ಚಿನ ಕೃಷಿಕ ಜನಸಂಖ್ಯೆಯನ್ನು ಹೊಂದಿತ್ತು, ಆದ್ದರಿಂದ ಇಲ್ಲಿ ಮತ್ತು ನೆರೆಯ ನವಲಗುಂದ ಭಾಗದಲ್ಲಿ ರೈತರ ಚಳುವಳಿ ಪ್ರಬಲವಾಗಿತ್ತು. ಆದರೆ 2008ರ ಡಿಲಿಮಿಟೇಶನ್ ಕಸರತ್ತಿನ ನಂತರ ಧಾರವಾಡ ನಗರದ ಕೆಲವು ವಾರ್ಡ್‌ಗಳು ಸೇರ್ಪಡೆಯಾಗುವ ಮೂಲಕ ಕ್ಷೇತ್ರದ ಕ್ರಿಯಾಶೀಲತೆ ಬದಲಾಯಿತು.
ಅಮೃತ್ ದೇಸಾಯಿ ಮತ್ತು ವಿನಯ್ ಕುಲಕರ್ಣಿ
ಅಮೃತ್ ದೇಸಾಯಿ ಮತ್ತು ವಿನಯ್ ಕುಲಕರ್ಣಿ

ಹುಬ್ಬಳ್ಳಿ: ಚುನಾವಣೆ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಧಾರವಾಡ ಕ್ಷೇತ್ರ ವಿಭಿನ್ನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾರರ ಕಣ್ಣಿಗೆ ಕಾಣಿಸುತ್ತಿಲ್ಲ. ವಿನಯ್ ಕುಲಕರ್ಣಿ ಅವರು ಚುನಾವಣಾ ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶವಿಲ್ಲ ಹೀಗಾಗಿ ಅವರ ಕುಟುಂಬ ಸದಸ್ಯರು, ಆಪ್ತ ಬೆಂಬಲಿಗರನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.

ಮತ್ತೊಂದೆಡೆ, ಈ ಪರಿಸ್ಥಿತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು  ಪ್ರಯತ್ನಿಸುತ್ತಿದೆ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಹವಣಿಸುತ್ತಿದೆ. ಹಿಂದಿನ ಧಾರವಾಡ ಗ್ರಾಮೀಣ ಕ್ಷೇತ್ರವು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಭದ್ರಕೋಟೆಯಾಗಿಲ್ಲ, ಇಲ್ಲಿನ ಮತದಾರರು ಸಾಮಾನ್ಯ ಮತ್ತು ಉಪಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ.

ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರನ್ನು ಚುನಾಯಿಸಿದರೆ, ಮತ್ತೊಬ್ಬ ರೈತ ನಾಯಕ ಬಾಬಾಗೌಡ ಪಾಟೀಲ್ ಅವರು 1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಆಯ್ಕೆಯಾದ ನಂತರ ತಮ್ಮ ಸ್ಥಾನವನ್ನು ತೆರವು ಮಾಡಿದರು.

ಮೊದಲು ಈ ಭಾಗವು ಹೆಚ್ಚಿನ ಕೃಷಿಕ ಜನಸಂಖ್ಯೆಯನ್ನು ಹೊಂದಿತ್ತು, ಆದ್ದರಿಂದ ಇಲ್ಲಿ ಮತ್ತು ನೆರೆಯ ನವಲಗುಂದ ಭಾಗದಲ್ಲಿ ರೈತರ ಚಳುವಳಿ ಪ್ರಬಲವಾಗಿತ್ತು. ಆದರೆ 2008ರ ಡಿಲಿಮಿಟೇಶನ್ ಕಸರತ್ತಿನ ನಂತರ ಧಾರವಾಡ ನಗರದ ಕೆಲವು ವಾರ್ಡ್‌ಗಳು ಸೇರ್ಪಡೆಯಾಗುವ ಮೂಲಕ ಕ್ಷೇತ್ರದ ಕ್ರಿಯಾಶೀಲತೆ ಬದಲಾಯಿತು. ಆದಾಗ್ಯೂ, ಅದರ ಜಾತಿ ಸಮೀಕರಣವು ಬದಲಾಗಲಿಲ್ಲ, ಏಕೆಂದರೆ ಲಿಂಗಾಯತ ಮತಗಳು ಪ್ರಬಲವಾಗಿ ಮುಂದುವರಿಯುತ್ತವೆ ಮತ್ತು ನಿರ್ಣಾಯಕ ಅಂಶಗಳಾಗಿವೆ.

ಕಳೆದ ನಾಲ್ಕು  ಚುನಾವಣೆಗಳಲ್ಲಿ ವಿನಯ್ ಕುಲಕರ್ಣಿ ಎರಡು ಬಾರಿ ಗೆದ್ದಿದ್ದಾರೆ.  ಒಮ್ಮೆ ಸ್ವತಂತ್ರವಾಗಿ 2004 ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್‌ನಲ್ಲಿ 2013ರಲ್ಲಿ ಗೆಲುವು ಸಾಧಿಸಿದ್ದರು.  ಬಿಜೆಪಿ ಎರಡು ಬಾರಿ ಗೆದ್ದಿದೆ. ಬಿಜೆಪಿ ಹಾಲಿ ಶಾಸಕ ಅಮೃತ್ ದೇಸಾಯಿ ಅವರನ್ನು ಕಣಕ್ಕಿಳಿಸಿದೆ.

2016 ರಲ್ಲಿ ಬಿಜೆಪಿ ಸದಸ್ಯ ಯೋಗೀಶ್‌ಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ. 2019 ರಲ್ಲಿ ಸಿಬಿಐ ತನಿಖೆ ಕೈಗೆತ್ತಿಕೊಂಡ ನಂತರ, ಕುಲಕರ್ಣಿ ಅವರನ್ನು ನವೆಂಬರ್ 2020 ರಲ್ಲಿ ಬಂಧಿಸಲಾಯಿತು, ಆದರೆ 2021 ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದರು, ಆದರೆ ಧಾರವಾಡ ಜಿಲ್ಲೆಗೆ ಕುಲಕರ್ಣಿ ಪ್ರವೇಶಿಸದಂತೆ ಸುಪ್ರೀಂ ನಿರ್ಬಂಧ ವಿಧಿಸಿತು.

ಚುನಾವಣೆಗಾಗಿ ನಿರ್ಬಂಧ ತೆರವುಗೊಳಿಸಿಕೊಳ್ಳಲು ಯತ್ನಿಸಿದರೂ, ಹೈಕೋರ್ಟ್ ಇತ್ತೀಚೆಗೆ ಅವರ ಮನವಿಯನ್ನು  ತಿರಸ್ಕರಿಸಿತು. ಆದರೆ, ವಿನಯ್ ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು, ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಲಿಂಗಾಯತರ ಪಂಚಮಸಾಲಿ ಪಂಗಡವನ್ನು 2ಬಿ ಮೀಸಲಾತಿ ಕೋಟಾಕ್ಕೆ ಸೇರಿಸುವ ಆಂದೋಲನದಲ್ಲಿ ಅವರ ಪಾತ್ರ ಅವರ ಪರವಾಗಿ ಮತ್ತೊಂದು ಅಂಶವಾಗಿದೆ. ಅಲ್ಲದೆ, ಧಾರವಾಡದಲ್ಲಿ ಈ ಪಂಗಡದ ಮತಗಳು ಗಣನೀಯ ಸಂಖ್ಯೆಯಲ್ಲಿವೆ. ಬಿಜೆಪಿಯ ಅಮೃತ್ ದೇಸಾಯಿ ಅದೇ ಪಂಗಡಕ್ಕೆ ಸೇರಿದವರಾಗಿದ್ದರೂ, ಅವರು ಪ್ರಬಲವಾದ ಆಡಳಿತ ವಿರೋಧಿಯನ್ನು ಎದುರಿಸುತ್ತಿದ್ದಾರೆ.

ವಾಸ್ತವವಾಗಿ, ವಿನಯ್ ಬೇರೆ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿದ್ದರೆ ಅವರನ್ನು ಕೈಬಿಡಲು ಪಕ್ಷವು ಯೋಚಿಸಿತ್ತು.  ಮೋದಿ ಮತ್ತು ಬೊಮ್ಮಾಯಿ ಸರ್ಕಾರಗಳು ಜಾರಿಗೆ ತಂದಿರುವ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಅವರು ವಿಜಯದ ವಿಶ್ವಾಸ ಹೊಂದಿರುವುದಾರಿ ಎಂದು ಅಮೃತ್ ದೇಸಾಯಿ ಹೇಳಿದ್ದಾರೆ.

ಮತ್ತೊಂದೆಡೆ, ವಿನಯ್ ಕುಲಕರ್ಣಿ ಪ್ರಚಾರದ ನೇತೃತ್ವವನ್ನು ಪತ್ನಿ ಶಿವಲೀಲಾ ವಹಿಸಿಕೊಂಡಿದ್ದಾರೆ, ಅವರು ಮಾಡಿದ ಉತ್ತಮ ಕೆಲಸವು ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು  ತಿಳಿಸಿದ್ದಾರೆ. ತಮ್ಮ ಪ್ರಚಾರದ ವೇಳೆ ಬಿಜೆಪಿಯ ರಾಜಕೀಯದ ವಿಷಯವನ್ನು ಪ್ರಸ್ತಾಪಿಸಿದ ಅವರು, ವಿನಯ್ ಕ್ಷೇತ್ರದಲ್ಲಿ ಇಲ್ಲದಿದ್ದರೂ ಜನರಿಂದ ಸಾಕಷ್ಟು ಬೆಂಬಲ ಸಿಗುತ್ತಿದೆ ಎಂದಿದ್ದಾರೆ.

ಕ್ಷೇತ್ರದಲ್ಲಿ ಯಾವುದೇ ಪಕ್ಷದ ನಾಯಕರು ಸಕ್ರಿಯರಾಗಿಲ್ಲದ ಕಾರಣ ಪಕ್ಷಾಂತರವು ಬಿಜೆಪಿಗೆ ಲಾಭವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ತವನಪ್ಪ ಅಷ್ಟಗಿ ಪಕ್ಷ ತೊರೆದರೆ, ಮಾಜಿ ಶಾಸಕಿ ಸೀಮಾ ಮಸೂತಿ ಪ್ರಚಾರದಿಂದ ದೂರ ಉಳಿದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೂ ಪ್ರತಿಷ್ಠೆಯ ಕದನವಾಗಿದ್ದು, ಭಾರೀ ವಿರೋಧದ ನಡುವೆಯೂ ಅಮೃತ್  ದೇಸಾಯಿ ಅವರನ್ನು ಕಣಕ್ಕಿಳಿಸಿದ್ದಾರೆ.

ಧಾರವಾಡ:

ಅಮೃತ್ ದೇಸಾಯಿ -- ಬಿಜೆಪಿ

ವಿನಯ್ ಕುಲಕರ್ಣಿ -- ಕಾಂಗ್ರೆಸ್

ಮಂಜುನಾಥ ಹಗೇದಾರ -- ಜೆಡಿಎಸ್

2018 ರ ಫಲಿತಾಂಶ

ಅಮೃತ್ ದೇಸಾಯಿ - ಬಿಜೆಪಿ -- 85,123

ವಿನಯ್ ಕುಲಕರ್ಣಿ - ಕಾಂಗ್ರೆಸ್ -- 64,783

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com