ಮೂರು ಪಕ್ಷಗಳಿಗೂ ಮಹಿಳೆಯರ ವೋಟ್ ಬ್ಯಾಂಕ್ ಟಾರ್ಗೆಟ್: ನಾರೀಮಣಿಯರ ಓಲೈಕೆಗೆ 'ಉಚಿತಗಳ' ಬಕೆಟ್!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷಗಳು ಮಹಿಳೆಯರಿಗೆ ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣದ ಭರವಸೆಗಳ ಮೇಲೆ ದೊಡ್ಡ ಬೆಟ್ಟಿಂಗ್ ನಡೆಸುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷಗಳು ಮಹಿಳೆಯರಿಗೆ ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣದ ಭರವಸೆಗಳ ಮೇಲೆ ದೊಡ್ಡ ಬೆಟ್ಟಿಂಗ್ ನಡೆಸುತ್ತಿವೆ.

ಭಾರತೀಯ ಜನತಾ ಪಕ್ಷ (ಬಿಜೆಪಿ), ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಜನತಾ ದಳ ಸೆಕ್ಯುಲರ್ (ಜೆಡಿಎಸ್)  ಪಕ್ಷಗಳು ಉಚಿತ ಸಿಲಿಂಡರ್, ನಗದು ಸಹಾಯದ ಭರವಸೆ ನೀಡುವ ಮೂಲಕ ಸುಮಾರು ಶೇ.50ರಷ್ಟಿರುವ ಮಹಿಳಾ ಮತದಾರರನ್ನು ಓಲೈಸಲು ಮುಂದಾಗಿವೆ.

ಪಕ್ಷಗಳು ಭರವಸೆಗಳನ್ನು ನೀಡುತ್ತಲೇ ಇರುತ್ತವೆ, ಆದರೆ ನಿಜವಾಗಿ ಎಷ್ಟು ಜನಸಾಮಾನ್ಯರಿಗೆ ಸಹಾಯ ಮಾಡುತ್ತಾರೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ. ಸೋಮವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದಾರೆ, ಅ.27ರಂದು ಬಿಡುಗಡೆ ಮಾಡಿದ ಜೆಡಿಎಸ್ ಪ್ರಣಾಳಿಕೆಯಲ್ಲಿ ಐದು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಹೇಳಿದ್ದು, ಮಹಿಳೆಯರ ಮತ ಬ್ಯಾಂಕ್ ಗುರಿಯಾಗಿಸಿಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಉದ್ಯಮಶೀಲತೆಗೆ ದೊಡ್ಡ ಬದ್ಧತೆಯನ್ನು ನೀಡಿರುವ ಕಾಂಗ್ರೆಸ್, ಮಹಿಳೆಯರು ನಡೆಸುವ ಉದ್ಯಮಗಳಿಗೆ ಕೈಗಾರಿಕಾ ಪಾರ್ಕ್‌ಗಳಲ್ಲಿ ಶೇಕಡಾ 20 ರಷ್ಟು ಭೂಮಿಯನ್ನು ನೀಡುವುದಾಗಿ ಭರವಸೆ ನೀಡಿತು. ಬಿಜೆಪಿಯು ಕೈಗಾರಿಕಾ ಸಮೂಹಗಳನ್ನು ರಚಿಸಿ ಮಹಿಳಾ ನೇತೃತ್ವದ ಉದ್ಯಮಗಳಿಗೆ 500 ಕೋಟಿ ರೂ. ಅನುದಾನದ ಭರವಸೆ ನೀಡಿದೆ.

ಮತ್ತೊಂದೆಡೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ನಡೆಸುತ್ತಿರುವ ಮಹಿಳಾ ಉದ್ಯಮಿಗಳಿಗೆ ಮೇಲಾಧಾರ ಭದ್ರತೆ ಇಲ್ಲದೆ 2 ಕೋಟಿ ರೂ.ವರೆಗೆ ಸಾಲ ನೀಡಲಾಗುವುದು ಎಂದು ಜೆಡಿಎಸ್ ಭರವಸೆ ನೀಡಿದೆ.

ಮತದಾನದ ದಿನದ ಮೊದಲ ಯೋಜನೆಗಳು ಮತ್ತು ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ.  ಗೆದ್ದವರು ಅಧಿಕಾರಕ್ಕೆ ಬಂದ ನಂತರ ಎಷ್ಟು ಫಲಾನುಭವಿಗಳು ಅದರ ಫಲ ಪಡೆಯುತ್ತಾರೆ ಎಂಬುದನ್ನು ನೋಡಬೇಕಾಗಿದೆ ಎಂದು ರಾಜಕೀಯ ವಿಶ್ಲೇಷಕ ಪ್ರಿಯಾಂಕಾ ಮಾಥುರ್ ಹೇಳಿದ್ದಾರೆ.

ಪ್ರಣಾಳಿಕೆಗಳು ಹಲವಾರು ಉಚಿತಗಳನ್ನು ಒಳಗೊಂಡಿವೆ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು 5 ಕೆಜಿ ಪಡಿತರ , ಋತುಚಕ್ರದ ಸಮಯದಲ್ಲಿ ಮನೆಗಳಲ್ಲಿ ಇರಲು ಅವಕಾಶವಿಲ್ಲದ ಕಾರಣ, ಋತುಚಕ್ರದ ಮಹಿಳೆಯರಿಗೆ ಗ್ರಾಮಗಳಲ್ಲಿ ಕಾಟೇಜ್ಗಳನ್ನು ನಿರ್ಮಿಸುವ ಭರವಸೆಯನ್ನು ಜೆಡಿಎಸ್ ನೀಡಿದೆ. ಹೈಸ್ಕೂಲ್ ಡ್ರಾಪ್ಔಟ್ ಮಹಿಳೆಯರಿಗೆ ಕಾಂಗ್ರೆಸ್ RTO ಗಳಲ್ಲಿ ಉಚಿತ ಮೋಟಾರು ವಾಹನ ತರಬೇತಿಯನ್ನು ನೀಡುತ್ತದೆ ಮತ್ತು ಸಬ್ಸಿಡಿಯಲ್ಲಿ ಆಟೋರಿಕ್ಷಾಗಳು ಮತ್ತು ಕಾರುಗಳನ್ನು ನೀಡುವ ಭರವಸೆ ಕೊಟ್ಟಿದೆ.

ಮೂರೂ ಪಕ್ಷಗಳು ವಿಧವೆಯರ ಪಿಂಚಣಿ ಹೆಚ್ಚಿಸುವುದಾಗಿ ಭರವಸೆ ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 2000 ರೂ., ಜೆಡಿಎಸ್ 2500 ರೂ. ಕಾಂಗ್ರೆಸ್ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಮಾಸಿಕ 2,000 ರೂ., ಬಿಜೆಪಿ ಗರ್ಭಿಣಿಯರಿಗೆ 21,000 ಧನಸಹಾಯ ನೀಡಲು ಪ್ರಸ್ತಾಪಿಸಿದೆ, ಮತ್ತು ಜೆಡಿಎಸ್ ಪ್ರಥಮ ದರ್ಜೆ ಕಾಲೇಜುಗಳ 60,000 ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಮೊಪೆಡ್ ನೀಡುವುದಾಗಿ ತಿಳಿಸಿದೆ.

ಮಹಿಳಾ ಮತದಾರರು ಈ ಪಕ್ಷಗಳಿಗೆ ಒಲವು ತೋರುತ್ತಾರೆಯೇ ಎಂಬುದನ್ನು ಒಂದು ಅಂಶ ಮಾತ್ರ ನಿರ್ಧರಿಸುತ್ತದೆ. "ಮಹಿಳೆಯರು ಈ ಹಿಂದೆ ಇಂತಹ ಯೋಜನೆಗಳಿಂದ ಪ್ರಯೋಜನ ಪಡೆದಿದ್ದರೆ ಮತ್ತು ಪಕ್ಷಗಳು ಚುನಾವಣಾ ಭರವಸೆಗಳನ್ನು ಪೂರೈಸಿದ್ದರೆ ಮಾತ್ರ ಮತ ಚಲಾಯಿಸುತ್ತಾರೆ ಎಂದು ರಾಜಕೀಯ ವಿಜ್ಞಾನಿ ಡಾ.ಸಂದೀಪ್ ಶಾಸ್ತ್ರಿ ತಿಳಿಸಿದ್ದಾರೆ.

ಪ್ರಮುಖ ಮತ ಬ್ಯಾಂಕ್

  • ರಾಜ್ಯದಲ್ಲಿ 2.64 ಕೋಟಿ ಮಹಿಳಾ ಮತದಾರರು
  • 1000 ಪುರುಷ ಮತದಾರರಿಗೆ 989 ಮಹಿಳಾ ಮತದಾರರು
  • ಕಳೆದ 5 ವರ್ಷಗಳಲ್ಲಿ ಅನುಪಾತವು 973 ರಿಂದ 989 ಕ್ಕೆ ಸುಧಾರಿಸಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com