ಅಧಿಕಾರಸ್ಥ ಮಹಿಳೆಯರನ್ನು ನೋಡಲು ಪುರುಷರಿಗೆ ನಾಚಿಕೆಯೇ? ಪಿತೃಪ್ರಧಾನ ವ್ಯವಸ್ಥೆಯ ಅಸ್ತಿತ್ವ ಕಳೆದುಕೊಳ್ಳುವ ಭಯವೋ?

ಪಿತೃಪ್ರಧಾನ ಸಮಾಜದ ವ್ಯವಸ್ಥೆಯಲ್ಲಿ ಅನಾದಿ ಕಾಲದಿಂದಲೂ ರಾಜಕೀಯ ವಲಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಬಹುಕೇತ ಕಡಿಮೆ. ಕರ್ನಾಟಕ ರಾಜ್ಯ ರಾಜಕೀಯ ಕೂಡ ಇದಕ್ಕೆ ಹೊರತಲ್ಲ, 2018ರ ಚುನಾವಣೆಯಲ್ಲಿ 219 ಇದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಈ ವರ್ಷ 185ಕ್ಕೆ ಇಳಿದಿದೆ.
ಈ ಬಾರಿ ಚುನಾವಣಾ ಕಣದಲ್ಲಿರುವ ಪ್ರಮುಖ ಮಹಿಳಾ ಅಭ್ಯರ್ಥಿಗಳು
ಈ ಬಾರಿ ಚುನಾವಣಾ ಕಣದಲ್ಲಿರುವ ಪ್ರಮುಖ ಮಹಿಳಾ ಅಭ್ಯರ್ಥಿಗಳು

ಬೆಂಗಳೂರು: ಪಿತೃಪ್ರಧಾನ ಸಮಾಜದ ವ್ಯವಸ್ಥೆಯಲ್ಲಿ ಅನಾದಿ ಕಾಲದಿಂದಲೂ ರಾಜಕೀಯ ವಲಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಬಹುಕೇತ ಕಡಿಮೆ. ಕರ್ನಾಟಕ ರಾಜ್ಯ ರಾಜಕೀಯ ಕೂಡ ಇದಕ್ಕೆ ಹೊರತಲ್ಲ, 2018ರ ಚುನಾವಣೆಯಲ್ಲಿ 219 ಇದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಈ ವರ್ಷ 185ಕ್ಕೆ ಇಳಿದಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 5.05 ಕೋಟಿ ಮತದಾರರಿದ್ದು, ಅವರಲ್ಲಿ 2.50 ಕೋಟಿ ಮಹಿಳೆಯರು ಇದ್ದಾರೆ. ಆದರೂ, ತಜ್ಞರ ಪ್ರಕಾರ ವಿಧಾನಸಭೆಯಲ್ಲಿ ಸಾಕಷ್ಟು ಮಹಿಳಾ ಅಭ್ಯರ್ಥಿಗಳು ಇಲ್ಲ. 1962ರಲ್ಲಿ ಅಸೆಂಬ್ಲಿಯಲ್ಲಿ ಅತ್ಯಧಿಕ ಮಹಿಳಾ ಸದಸ್ಯರ ಸಂಖ್ಯೆ 18 ಆಗಿತ್ತು.

ರಾಜಕೀಯ ಪಕ್ಷಗಳು ಪುರುಷರನ್ನು ಹೆಚ್ಚು ಗೆಲ್ಲಬಹುದೆಂದು ಪರಿಗಣಿಸುತ್ತವೆ, ಮಹಿಳಾ ನಾಯಕರನ್ನು ಅಧಿಕಾರದ ಸ್ಥಾನಗಳಲ್ಲಿ ನೋಡುವದರಿಂದ ಅವರಲ್ಲಿ ಅಭದ್ರತೆ ಕಾಡುತ್ತದೆ. ಆದರೆ, ಚುನಾವಣೆಗಳಲ್ಲಿ ಪುರುಷರಿಗೆ ಗೆಲ್ಲುವ ಹೆಚ್ಚಿನ ಅವಕಾಶಗಳಿವೆ ಎಂಬ ಕಲ್ಪನೆಯನ್ನು ಬೆಂಬಲಿಸಲು ಯಾವುದೇ ಮಾಹಿತಿ ಇಲ್ಲ ಎಂದು ಲೋಕನೀತಿ ನೆಟ್‌ವರ್ಕ್‌ನ ರಾಷ್ಟ್ರೀಯ ಸಂಯೋಜಕ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.

ತಮ್ಮ ಇಮೇಜ್ ಹಾಳಾಗಬಹುದು ಎಂಬ ಭಯದಿಂದ ಮಹಿಳೆಯರು ಸಾರ್ವಜನಿಕರ ಜೀವನದಲ್ಲಿ ಇರುವುದಕ್ಕೆ ಮುಂದೆ ಬರುವುದಿಲ್ಲ. ಮಹಿಳೆಯರ ಮತಗಳ ಮೇಲೆ ಮಾತ್ರ ಉತ್ಸುಕವಾಗಿರುವ ಪಕ್ಷಗಳಿಗೆ ಅವರನ್ನು ನಾಯಕರನ್ನಾಗಿ ಮಾಡುವ ಇರಾದೆಯಿಲ್ಲ,

ಎಲ್ಲಾ ಪಕ್ಷಗಳಲ್ಲಿನ ಪಿತೃಪ್ರಧಾನ ವ್ಯವಸ್ಥೆಯು,  ಮಹಿಳೆಯರು ಅಧಿಕಾರಕ್ಕೆ ಬಂದರೆ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭಯದ ಭಾವನೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರೊ.ಶಾಸ್ತ್ರಿ ಹೇಳಿದರು.

"26 ವರ್ಷಗಳ ಹಿಂದೆ ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಈ ಭಯದಿಂದಾಗಿ ಬಾಕಿ ಉಳಿದಿದೆ" ಎಂದು ಅವರು ಹೇಳಿದರು.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ನಿಜವಾಗಿಯೂ ಹೀನಾಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪುತ್ರಿ, ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ. ಪ್ರತಿಗಾಮಿ ಮನಸ್ಥಿತಿಯೇ ಇದಕ್ಕೆ ಕಾರಣ. ಬೆಂಗಳೂರಿನ ವಿವಿಧ ಭಾಗಗಳ ಮಹಿಳೆಯರು ಮಹಿಳಾ ಪ್ರತಿನಿಧಿಯೊಂದಿಗೆ ಹೆಚ್ಚು ಆರಾಮದಾಯಕವಾಗಿರುವುದರಿಂದ ತಮ್ಮ ಕುಂದುಕೊರತೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ" ಎಂದು ಅವರು ಹೇಳಿದರು.

ಇದು ಸಮಾಜದ ನ್ಯೂನತೆ ಎಂದು ರಾಜಕೀಯ ವಿಶ್ಲೇಷಕ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಡೀನ್ ಮುಜಾಫರ್ ಅಸ್ಸಾದಿ ಹೇಳಿದ್ದಾರೆ. ಮಹಿಳೆಯರನ್ನು ಕೇವಲ ಶಿಕ್ಷಕಿ, ಗೃಹಿಣಿ ಮತ್ತು ಆಪ್ತ ಸಹಾಯಕಿಯಾಗಿ ಮಾತ್ರ ನೋಡುವ ಪ್ರವೃತ್ತಿ ಇದೆಯೇ ಹೊರತು ಚುನಾಯಿತ ಪ್ರತಿನಿಧಿಯಾಗಿ ಅಲ್ಲ. ಈ ಮನಸ್ಥಿತಿ ಬದಲಾಗಬೇಕು ಎಂದಿದ್ದಾರೆ.

ಸಾಮಾನ್ಯವಾಗಿ ರಾಜಕೀಯದಲ್ಲಿ ಮಹಿಳೆಯರು ತಮ್ಮ ಪತಿ, ತಂದೆ ಅಥವಾ ಪುತ್ರರ ಪ್ರಾಕ್ಸಿಗಳಾಗಿ ಕಾಣುತ್ತಾರೆ ಹೀಗಾಗಿ ರಾಜಕೀಯ ಪಕ್ಷಗಳು ಹೆಚ್ಚಾಗಿ ಈ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡುತ್ತವೆ ಎಂದು ಹೇಳಿದ್ದಾರೆ.

ಖಾನಾಪುರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ ಶಾಸಕಿ ಹೇಮಂತ್‌ ನಿಂಬಾಳ್ಕರ್‌ ಅವರ ಪತ್ನಿ ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಮಾತನಾಡಿ, ರಾಜಕೀಯಕ್ಕೆ ಬರುವುದು ಕಷ್ಟ, ಹೀಗಾಗಿ ಹೆಚ್ಚಿನ ಮಹಿಳೆಯರು ಇಷ್ಟ ಪಡುವುದಿಲ್ಲ. ಜನಪ್ರಿಯತೆ, ಆರ್ಥಿಕ ಸ್ಥಿತಿ ಮತ್ತು ಕೆಲಸದ ಗುಣಮಟ್ಟವು ಮಹಿಳೆಯರಿಗೆ ಕಠಿಣವಾಗಿದೆ ಎಂದು ಹೇಳಿದ್ದಾರೆ.

ಈ ಬಾರಿ ಚುನಾವಣಾ ಕಣದಲ್ಲಿರುವ ಪ್ರಮುಖ ಮಹಿಳಾ ಅಭ್ಯರ್ಥಿಗಳು

ಸೌಮ್ಯಾ ರೆಡ್ಡಿ - ಜಯನಗರ - ಕಾಂಗ್ರೆಸ್

ಡಾ ಅಂಜಲಿ ನಿಂಬಾಳ್ಕರ್ - ಖಾನಾಪುರ - ಕಾಂಗ್ರೆಸ್

ಚೈತ್ರಾ ಕೋಟಕರ್-ಕಾರವಾರ-ಜೆಡಿ(ಎಸ್)

ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ - ನಿಪ್ಪಾಣಿ - ಬಿಜೆಪಿ

ಮಂಜುಳಾ ಲಿಂಬಾವಳಿ- ಮಹದೇವಪುರ- ಬಿಜೆಪಿ

ಲಕ್ಷ್ಮಿ ಹೆಬ್ಬಾಳ್ಕರ್ - ಬೆಳಗಾವಿ ಗ್ರಾಮಾಂತರ - ಕಾಂಗ್ರೆಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com