ಕರ್ನಾಟಕ ವಿಧಾನಸಭೆ ಚುನಾವಣೆ: ಮಕ್ಕಳ ಭವಿಷ್ಯ ರೂಪಿಸಲು ಅನುಭವಿ ನಾಯಕರ ಡಬಲ್ ಡ್ಯೂಟಿ, ಗೆಲುವಿಗೆ ಹರಸಾಹಸ

ಇವರಷ್ಟೇ ಅಲ್ಲ, ರಾಜಕೀಯ ವಲಯದಾದ್ಯಂತ ಪೋಷಕರು ತಾವು ಕೂಡ ಚುನಾವಣಾ ಕದನದಲ್ಲಿ ಹೋರಾಡುತ್ತಿರುವಾಗ, ತಮ್ಮ ಮಕ್ಕಳ ಪರವಾಗಿಯೂ ಹೋರಾಟಕ್ಕೆ ಇಳಿದಿದ್ದಾರೆ.
ಬಿಜೆಪಿ-ಜೆಡಿಎಸ್-ಕಾಂಗ್ರೆಸ್
ಬಿಜೆಪಿ-ಜೆಡಿಎಸ್-ಕಾಂಗ್ರೆಸ್
Updated on

ಬೆಂಗಳೂರು: ಬಿಟಿಎಂ ಲೇಔಟ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ರಾಮಲಿಂಗಾರೆಡ್ಡಿ ಅವರು ಪುತ್ರಿ ಸೌಮ್ಯಾ ರೆಡ್ಡಿ ಸ್ಪರ್ಧಿಸುತ್ತಿರುವ ಪಕ್ಕದ ಕ್ಷೇತ್ರ ಜಯನಗರದ ಮೇಲೂ ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿ ಸೌಮ್ಯ ಅವರು ಗೆಲ್ಲಲು ಹೆಚ್ಚಿನ ಪ್ರಯತ್ನ ನಡೆಸಬೇಕು ಎಂಬ ಪ್ರತಿಕ್ರಿಯೆ ಸಿಕ್ಕಾಗಿನಿಂದ ಸೀನಿಯರ್ ರೆಡ್ಡಿ ಜಯನಗರದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರಣತಂತ್ರ ಹೆಣೆಯುತ್ತಿದ್ದಾರೆ.

ಇವರಷ್ಟೇ ಅಲ್ಲ, ರಾಜಕೀಯ ವಲಯದಾದ್ಯಂತ ಪೋಷಕರು ತಾವು ಕೂಡ ಚುನಾವಣಾ ಕದನದಲ್ಲಿ ಹೋರಾಡುತ್ತಿರುವಾಗ, ತಮ್ಮ ಮಕ್ಕಳ ಪರವಾಗಿಯೂ ಹೋರಾಟಕ್ಕೆ ಇಳಿದಿದ್ದಾರೆ.

ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ (92) ಹಾಗೂ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಇಬ್ಬರೂ ಕಣದಲ್ಲಿದ್ದಾರೆ. ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಹಿರಿಯ ನಾಯಕ, ಮಗನನ್ನು ಗೆಲ್ಲಿಸಲು ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಸ್ವಯಂಸೇವಕರು ಮತ್ತು ಬೆಂಬಲಿಗರ ಸೈನ್ಯದ ಮುಖ್ಯಸ್ಥರಾಗಿದ್ದಾರೆ.

ವಿಜಯನಗರದಲ್ಲಿ 2018ರಲ್ಲಿ ಗೋವಿಂದರಾಜನಗರದಿಂದ ಸೋತಿದ್ದ ಪುತ್ರ ಪ್ರಿಯಕೃಷ್ಣ ಗೆಲುವಿಗೆ ಮಾಜಿ ಸಚಿವ ಎಂ. ಕೃಷ್ಣಪ್ಪ ಶ್ರಮಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬಿಡುವಿಲ್ಲದ ವೇಳಾಪಟ್ಟಿ ಮತ್ತು ರಾಜ್ಯದಾದ್ಯಂತ ಪ್ರಚಾರ ಪ್ರವಾಸದ ನಡುವೆಯೂ ಪುತ್ರ ಪ್ರಿಯಾಂಕ್ ಅವರ ಕ್ಷೇತ್ರ ಚಿತ್ತಾಪುರದ ಮೇಲೆ ನಿಗಾ ಇಡುತ್ತಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕದನ ಕಣದಲ್ಲಿ ಇಲ್ಲದಿರಬಹುದು. ಆದರೆ, ತಮ್ಮ ಸ್ವಕ್ಷೇತ್ರ ಶಿಕಾರಿಪುರದಿಂದ ಮಗ ಬಿ.ವೈ. ವಿಜಯೇಂದ್ರಗೆ ದೊಡ್ಡ ಗೆಲುವು ತಂದುಕೊಡಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಜೆಡಿಎಸ್ ಕಥೆ ಮತ್ತಷ್ಟು ಕುತೂಹಲ ಕೆರಳಿಸಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವ ರಾಮನಗರದಲ್ಲಿ ಕುಮಾರಸ್ವಾಮಿ ಅವರು ತಾವು ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದರೂ ಕೂಡ ಮಗನ ಪ್ರಚಾರ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ತಾತ ಎಚ್‌ಡಿ ದೇವೇಗೌಡ ಅವರು ಖುದ್ದು ನೋಡಿಕೊಳ್ಳುತ್ತಿದ್ದಾರೆ. ತಾಯಿ ಮತ್ತು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ನಿಖಿಲ್‌ಗಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿ, ತಂದೆ ಮತ್ತು ಮಗನಿಗಾಗಿ ದುಡಿಯುತ್ತಿದ್ದಾರೆ.

ಜಿಟಿ ದೇವೇಗೌಡರು ಚಾಮುಂಡೇಶ್ವರಿಯಿಂದ ಕಣಕ್ಕಿಳಿದಿರಬಹುದು. ಆದರೆ, ಅವರ ಗಮನ ಹುಣಸೂರಿನಲ್ಲಿದ್ದು, ಅಲ್ಲಿ ಪುತ್ರ ಹರೀಶ್ ಗೌಡ ಸ್ಪರ್ಧಿಸುತ್ತಿದ್ದಾರೆ.

ತಾಯಂದಿರೂ ಹಿಂದೆ ಬಿದ್ದಿಲ್ಲ. ಮಾಜಿ ಸಚಿವೆ ಸಿ ಮೋಟಮ್ಮ ಪುತ್ರಿ ನಯನಾ ಪ್ರಚಾರಕ್ಕೆ ಮುಂದಾಗಿದ್ದು, ಕೇಂದ್ರದ ಮಾಜಿ ಸಚಿವೆ ಹಾಗೂ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಅವರ ಪುತ್ರಿ ನಿವೇದಿತ್ ಆಳ್ವಾ ಅವರಿಗಾಗಿ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಜಾಲ ಬೀಸುತ್ತಿದ್ದಾರೆ.

ಕೊಪ್ಪಳದಿಂದ ಸ್ಪರ್ಧಿಸಿರುವ ಮಂಜುಳಾ ಕರಡಿ ಅವರಿಗೆ ಈ ಹಿಂದೆ ಶಾಸಕರಾಗಿದ್ದ ಮಾವ ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರಿಂದಲೂ ಭಾರಿ ಪೈಪೋಟಿ ವ್ಯಕ್ತವಾಗಿದೆ. ಮಹದೇವಪುರದ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಪತ್ನಿ ಮಂಜುಳಾ ಅವರ ಪ್ರಚಾರಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ಸಮನ್ವಯಗೊಳಿಸಲು ಮತ್ತು ಭೇಟಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com