ಸಿಎಂ ಹುದ್ದೆ ರೇಸ್ ನಲ್ಲಿ ಸಿದ್ದು v/s ಡಿಕೆಶಿ: ಇಬ್ಬರು ನಾಯಕರ ಪ್ಲಸ್-ಮೈನಸ್ ಗಳೇನು?

16ನೇ ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದ ನಂತರ ಕಾಂಗ್ರೆಸ್ ಪಾಳೆಯದಲ್ಲಿ, ಹೈಕಮಾಂಡ್ ನಲ್ಲಿ ಮತ್ತು ಜನಸಾಮಾನ್ಯರಲ್ಲಿ ಕೇಳಿಬರುತ್ತಿರುವ ಒಂದೇ ಪ್ರಶ್ನೆ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು.
ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್
ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್
Updated on

ಬೆಂಗಳೂರು: 16ನೇ ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದ ನಂತರ ಕಾಂಗ್ರೆಸ್ ಪಾಳೆಯದಲ್ಲಿ, ಹೈಕಮಾಂಡ್ ನಲ್ಲಿ ಮತ್ತು ಜನಸಾಮಾನ್ಯರಲ್ಲಿ ಕೇಳಿಬರುತ್ತಿರುವ ಒಂದೇ ಪ್ರಶ್ನೆ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು.

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಹಳೆಯ ಯುದ್ಧ ಕುದುರೆಗಳಾದ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್(D K Shivakumar) ನಡುವೆ ಸ್ಪರ್ಧೆ ಪ್ರಬಲವಾಗಿದೆ. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಇಬ್ಬರೂ ನಾಯಕರು ದಕ್ಷಿಣ ರಾಜ್ಯವನ್ನು ಮುನ್ನಡೆಸುವ ಮಹತ್ವಾಕಾಂಕ್ಷೆಯನ್ನು ಬಹಿರಂಗವಾಗಿ ಹೇಳಿಕೊಂಡು ಬಂದಿದ್ದರು. 

ಕಳೆದ ರಾತ್ರಿ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP)ಸಭೆಯಲ್ಲಿ ಶಾಸಕರು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸರ್ವಾನುಮತದಿಂದ ಅಧಿಕಾರ ನೀಡಿದ್ದಾರೆ. 

ಇಬ್ಬರು ಮಹತ್ವಾಕಾಂಕ್ಷಿ ಮುಖ್ಯಮಂತ್ರಿ ಅಭ್ಯರ್ಥಿಗಳ SWOT ((Strengths, Weaknesses, Opportunities and Threats-ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಸಮಸ್ಯೆಗಳು) ಏನೇನು ಎಂಬ ವಿಶ್ಲೇಷಣೆ ಇಲ್ಲಿದೆ.

ಸಿದ್ದರಾಮಯ್ಯ:  

ಶಕ್ತಿ:

* ರಾಜ್ಯಾದ್ಯಂತ ಜನಸ್ಪಂದನ-ಮಾಸ್ ಲೀಡರ್ ಎಂಬ ಇಮೇಜ್
* ಕಾಂಗ್ರೆಸ್ ಶಾಸಕರ ದೊಡ್ಡ ವರ್ಗದಲ್ಲಿ ಜನಪ್ರಿಯತೆ 
* ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಸರ್ಕಾರ ನಡೆಸಿದ ಅನುಭವ (2013ರಿಂದ 2018ರವರೆಗೆ).
* 13 ಬಾರಿ ರಾಜ್ಯದಲ್ಲಿ ಬಜೆಟ್‌ ಮಂಡಿಸಿದ ಅನುಭವ ಹೊಂದಿರುವ ಸಮರ್ಥ ನಿರ್ವಾಹಕ.
* ಅಹಿಂದ ಪ್ರಭಾವ, ವರ್ಚಸ್ಸು (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು).
* ಬಿಜೆಪಿ ಮತ್ತು ಜೆಡಿಎಸ್ ನ್ನು ಸಮರ್ಥವಾಗಿ ಎದುರಿಸುವ ಶಕ್ತಿ, ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಸಮಸ್ಯೆಗಳನ್ನು ಪ್ರಬಲವಾಗಿ ಜನರ ಮಧ್ಯೆ ತೆಗೆದುಕೊಂಡು ಹೋಗುವ ಶಕ್ತಿ, ಸಾಮರ್ಥ್ಯ.
* ರಾಹುಲ್ ಗಾಂಧಿಗೆ ಆಪ್ತ ಎಂದು ಗುರುತಿಸಿಕೊಂಡಿರುವುದು. 

ದೌರ್ಬಲ್ಯ: 

* ಪಕ್ಷದೊಂದಿಗೆ ಸಂಘಟನಾತ್ಮಕವಾಗಿ ಸಂಪರ್ಕ ಹೊಂದಿಲ್ಲ.
* 2018ರಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ವಿಫಲ.
* ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯನವರನ್ನು ಇನ್ನೂ ಹೊರಗಿನವರೆಂದು ಪರಿಗಣಿಸಿರುವುದು. ಸಿದ್ದರಾಮಯ್ಯ ಹಿಂದೆ ಜೆಡಿಎಸ್‌ನಲ್ಲಿದ್ದರು.
* ವಯಸ್ಸು- ಸಿದ್ದರಾಮಯ್ಯ ಅವರಿಗೆ 75 ವರ್ಷ.

ಅವಕಾಶ: 

* ಸ್ವೀಕಾರಾರ್ಹತೆ, ಜನರ ಮಧ್ಯೆ ಪ್ರಭಾವ ಮತ್ತು ಅನುಭವವು ನಿರ್ಣಾಯಕ ಜನಾದೇಶದೊಂದಿಗೆ ಸರ್ಕಾರವನ್ನು ನಡೆಸಲು ಮತ್ತು 2024 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನ್ನು ಬಲಪಡಿಸಲು ಸಾಧ್ಯವೆಂಬ ನಂಬಿಕೆ.
* ಎದುರಾಳಿ ಶಿವಕುಮಾರ್ ವಿರುದ್ಧ ಐಟಿ, ಇಡಿ, ಸಿಬಿಐ ಕೇಸ್ ಗಳು, 
* ಸಿದ್ದರಾಮಯ್ಯಗೆ ಇದು ಕೊನೆಯ ಚುನಾವಣೆ ಮತ್ತು ಸಿಎಂ ಆಗುವ ಕೊನೆಯ ಅವಕಾಶ.

ಸಮಸ್ಯೆ: 

* ಸಿದ್ದರಾಮಯ್ಯನವರಿಂದಲೇ ಸಿಎಂ ಆಗುವುದು ತಪ್ಪಿದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ ಪರಮೇಶ್ವರ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಬಿ ಕೆ ಹರಿಪ್ರಸಾದ್, ಕೆ ಎಚ್ ಮುನಿಯಪ್ಪನಂತವರೂ ಸಿದ್ದರಾಮಯ್ಯ ವಿರುದ್ಧದ ಅಭಿಪ್ರಾಯಗಳು
* ದಲಿತರು ಸಿಎಂ ಆಗಬೇಕೆಂಬ ಕರೆ ಸಿದ್ದರಾಮಯ್ಯಗೆ ಹಿನ್ನಡೆ 

ಡಿ ಕೆ ಶಿವಕುಮಾರ್:

* ಶಿವಕುಮಾರ್ ಅವರ ಸಂಘಟನಾ ಶಕ್ತಿ, ಪಕ್ಷದ 'ಟ್ರಬಲ್‌ಶೂಟರ್' ಬಿರುದು, ದೇಶಾದ್ಯಂತ ಗಾಂಧಿ ಕುಟುಂಬಕ್ಕೆ ನಿಷ್ಠಾವಂತ ಎಂಬ ಹೆಸರು, ವಿಶೇಷವಾಗಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾಗೆ ಬಹಳ ಆಪ್ತ. 

ಶಕ್ತಿ: 

* ಬಲವಾದ ಸಂಘಟನಾ ಸಾಮರ್ಥ್ಯ ಮತ್ತು ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
* ಪಕ್ಷ ನಿಷ್ಠೆಗೆ ಹೆಸರುವಾಸಿ.
* ಕಷ್ಟದ ಸಮಯದಲ್ಲಿ ಕಾಂಗ್ರೆಸ್‌ನ ಟ್ರಬಲ್‌ಶೂಟರ್ ಎಂದು ಪರಿಗಣಿಸಲಾಗಿದೆ.
* ಸಂಪನ್ಮೂಲ ನಾಯಕ.
* ಪ್ರಬಲ ಒಕ್ಕಲಿಗ ಸಮುದಾಯ, ಅದರ ಪ್ರಭಾವಿ ದಾರ್ಶನಿಕರು ಮತ್ತು ಮುಖಂಡರ ಬೆಂಬಲವಿದೆ.
* ಗಾಂಧಿ ಕುಟುಂಬಕ್ಕೆ ಆಪ್ತತೆ.
* ಇನ್ನೂ ಡಿ ಕೆ ಶಿವಕುಮಾರ್ ಗೆ 62 ವರ್ಷ, ರಾಜಕೀಯದಲ್ಲಿ ಬಹಳ ಸಾಧನೆ, ಕೆಲಸ ಮಾಡಲು ಅವಕಾಶ, 
* ಸುದೀರ್ಘ ರಾಜಕೀಯ ಅನುಭವ; ವಿವಿಧ ಖಾತೆಗಳನ್ನು ನಿಭಾಯಿಸಿದ್ದಾರೆ.

ದೌರ್ಬಲ್ಯ:

* ಐಟಿ, ಇಡಿ ಮತ್ತು ಸಿಬಿಐ ಮುಂದೆ ವಿವಿಧ ಕೇಸುಗಳು, ಮುಂದೆ ವಿಚಾರಣೆಗೆ ಬರುವ ಸಾಧ್ಯತೆ 
* ತಿಹಾರ್‌ನಲ್ಲಿ ಜೈಲು ಶಿಕ್ಷೆ
* ಸಿದ್ದರಾಮಯ್ಯನವರಿಗೆ ಹೋಲಿಸಿದರೆ ಮಾಸ್ ಲೀಡರ್ ಎಂಬ ಇಮೇಜ್ ಕಡಿಮೆ ಮತ್ತು ಅನುಭವ ಸಹ ಕಡಿಮೆ. 
* ಡಿ ಕೆ ಶಿವಕುಮಾರ್ ಪ್ರಭಾವ ಹಳೆ ಮೈಸೂರು ಪ್ರದೇಶಕ್ಕೆ ಸೀಮಿತ
* ಇತರ ಸಮುದಾಯಗಳಿಂದ ಹೆಚ್ಚಿನ ಬೆಂಬಲವಿಲ್ಲ. 

ಅವಕಾಶ:

* ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯವು ಒಕ್ಕಲಿಗ ಶಿವಕುಮಾರ್ ಅವರ ಪಾಲಾಗುತ್ತದೆ.
* ಈ ಹಿಂದಿನ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರು ಸಿಎಂ ಆಗುವುದು ಸಹಜ ಹಿಂದೆ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ, ವೀರೇಂದ್ರ ಪಾಟೀಲ್.
* ಪಕ್ಷದ ಹಳಬರು ಬೆಂಬಲಿಸುವ ಸಾಧ್ಯತೆಗಳು.

ಸಮಸ್ಯೆ: 

* ಸಿದ್ದರಾಮಯ್ಯನವರ ಅನುಭವ, ಹಿರಿತನ ಮತ್ತು ಮಾಸ್ ಲೀಡರ್ ಎಂಬ ಇಮೇಜ್ 
* ಸಿದ್ದರಾಮಯ್ಯನವರ ಬೆಂಬಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಬರುವ ಸಾಧ್ಯತೆ.
* ಕೇಂದ್ರೀಯ ತನಿಖಾ ಸಂಸ್ಥೆಗಳು ದಾಖಲಿಸಿರುವ ಪ್ರಕರಣಗಳಿಂದಾಗಿ ಕಾನೂನು ಅಡಚಣೆಗಳು.
* ದಲಿತ ಅಥವಾ ಲಿಂಗಾಯತ ಸಿಎಂಗೆ ಕರೆ.
* ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿಯವರ ಬೆಂಬಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com