ಗೆಲ್ಲುವ ಅಂಶವೊಂದೆ ಮಾನದಂಡ, ಉಳಿದದ್ದೆಲ್ಲಾ ದಂಡ! ಶೇ.55ರಷ್ಟು ಕ್ರಿಮಿನಲ್ ಕೇಸ್; ಹೇಗಿದ್ದಾರೆ ನಮ್ಮ ಹೊಸ ಶಾಸಕರು?

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪೈಕಿ 122 (ಶೇ. 55) ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.
ವಿಧಾನಸೌಧ
ವಿಧಾನಸೌಧ
Updated on

ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪೈಕಿ 122 (ಶೇ. 55) ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.

ಕ್ರಿಮಿನಲ್ ಪ್ರಕರಣಗಳೊಂದಿಗೆ ಗೆಲ್ಲುವ ಅಭ್ಯರ್ಥಿಗಳ ಶೇಕಡಾವಾರು  ಪ್ರಮಾಣ  ಹೆಚ್ಚಾಗಿದೆ. 2018 ರ ವಿಧಾನಸಭಾ ಚುನಾವಣೆ ಶೇಕಡಾ 35 ರಿಂದ 2023 ರಲ್ಲಿ ಶೇಕಡಾ 55 ಕ್ಕೆ ಏರಿತು. 135 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, 78 ವಿಜೇತ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ಭಾರತೀಯ ಜನತಾ ಪಕ್ಷದಿಂದ 34 ಮತ್ತು ಜನತಾ ದಳ (ಜಾತ್ಯತೀತ) 9ಶಾಸಕರ ಮೇಲೆ ಕೇಸ್ ಗಳಿವೆ. ಇದಲ್ಲದೆ, 122 ಅಭ್ಯರ್ಥಿಗಳ ಪೈಕಿ 71 ಅಭ್ಯರ್ಥಿಗಳು ಅತ್ಯಾಚಾರ ಮತ್ತು ಕೊಲೆ ಯತ್ನದಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅತಿ ಹೆಚ್ಚು ಆಸ್ತಿ (1,413 ಕೋಟಿ ರೂ.) ಹೊಂದಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಲಂಚ, ಸುಳ್ಳು ಸಾಕ್ಷ್ಯ ಸೇರಿದಂತೆ ಅವರ ವಿರುದ್ಧ 19 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಟಣೆ ತಿಳಿಸಿದೆ.

ವರದಿಯ ಪ್ರಕಾರ, ಸಿಎಂ ಸ್ಥಾನದ ಅಭ್ಯರ್ಥಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ 13 ಕ್ರಿಮಿನಲ್ ಪ್ರಕರಣಗಳಿವೆ, ಇದರಲ್ಲಿ ಲಂಚ, ಚುನಾವಣೆಯಲ್ಲಿ ಅನಗತ್ಯ ಪ್ರಭಾವ, ಗಲಭೆ ಮತ್ತು ಮಾರಕ ಅಸ್ತ್ರಗಳನ್ನು ಹೊಂದಿದ್ದ ಸಂಬಂಧ ಕೇಸ್ ದಾಖಲಾಗಿವೆ.

ರಾಜಕೀಯ ಪಕ್ಷಗಳಿಗೆ, ಗೆಲ್ಲುವ ಅಂಶವೊಂದೇ ದೊಡ್ಡ ಮಾನದಂಡವಾಗಿದೆ. ಹೀಗಾಗಿ ಕ್ರಿಮಿನಲ್ ದಾಖಲೆಗಳು ನಗಣ್ಯ.  ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವೇಳೆ ಹಣ ಇರುವವರನ್ನೇ ಆಯ್ಕೆ ಮಾಡುತ್ತಾರೆ.  ಸಾಮಾನ್ಯವಾಗಿ, ಅಂತಹ ಅಭ್ಯರ್ಥಿಗಳು ಮನಿ ಅಂಡ್ ಸಲ್ ಪವರ್ ಹೊಂದಿರುತ್ತಾರೆ, ಇದು ಅವರನ್ನು ನಿರೀಕ್ಷಿತ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲು ಗಮನಾರ್ಹ ಕಾರಣವಾಗಿದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ (ಎಪಿಯು) ಸ್ಕೂಲ್ ಆಫ್ ಪಾಲಿಸಿ ಅಂಡ್ ಗವರ್ನೆನ್ಸ್‌ನ ನಾರಾಯಣ್ ವಿವರಿಸಿದ್ದಾರೆ.

ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಮತದಾರರು ಕೂಡ ತಪ್ಪು ಮಾಡುತ್ತಾರೆ ಎಂದು ನ್ಯಾಷನಲ್ ಎಲೆಕ್ಷನ್ ವಾಚ್, ಎಡಿಆರ್ ಸಂಸ್ಥಾಪಕ ಸದಸ್ಯ ಐಐಎಂ-ಬೆಂಗಳೂರಿನ ಪ್ರೊಫೆಸರ್ ತ್ರಿಲೋಚನ್ ಶಾಸ್ತ್ರಿ ಹೇಳಿದ್ದಾರೆ. ಸಾಮಾನ್ಯವಾಗಿ, ನಾಗರಿಕರು ತಮ್ಮ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಸರಿಯಾಗಿ ಮಾಹಿತಿ ಹೊಂದಿರುವುದಿಲ್ಲ ಮತ್ತು ಅವರ ರಾಜಕೀಯ ಮತ್ತು ಅಪರಾಧ ಹಿನ್ನೆಲೆಗಳನ್ನು ಸಂಶೋಧನೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಶೇಕಡಾ 97 ರಷ್ಟು ಕೋಟ್ಯಾಧಿಪತಿಗಳು ಆಯ್ಕೆಯಾಗಿದ್ದಾರೆ ಎಂದು ವಿಶ್ಲೇಷಿಸಿದೆ.  ರಾಜಕೀಯ ಪಕ್ಷಗಳಿಗೆ "ಹಣ" ಪ್ರಮುಖ "ಗೆಲುವು" ಅಂಶವಾಗಿದೆ  ಹೀಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರು ಸುಲಭವಾಗಿ ನೈತಿಕ ಅಂಶಗಳನ್ನು ನಿರ್ಲಕ್ಷಿಸುತ್ತಾರೆ ಎಂದು ರಾಜಕೀಯ ವಿಶ್ಲೇಷಕರಾದ ರಾಜೇಂದ್ರ ಚೆನ್ನಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com