ಕೊಡಗು: ಬಿಜೆಪಿ-ಕಾಂಗ್ರೆಸ್ ರಾಜಕೀಯ ಕೆಸರೆರಚಾಟ; ಪ್ರತಾಪ್ ಸಿಂಹ ಎದುರು ಆರೋಪ-ಪ್ರತ್ಯಾರೋಪ!

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಕೊಡಗಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಗಳು ಶುರುವಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಕೊಡಗಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಗಳು ಶುರುವಾಗಿವೆ.

ಇತ್ತೀಚೆಗೆ ವಿರಾಜಪೇಟೆಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ ಅವರು, ಕೊಡವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ ರೂ.10 ಕೋಟಿ ಬಿಡುಗಡೆ ಮಾಡಿತ್ತು ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ವಿರಾಜಪೇಟೆ ಶಾಸಕ, ಈ ವರೆಗೂ ನಿಮಗಕ್ಕೆ ಯಾವುದೇ ರೀತಿಯ ಹಣವೂ ಬಂದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದವು.

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ ಅವರು, ಜಿಲ್ಲೆಯ ಮೂಲಭೂತ ಸಮಸ್ಯೆಗಳ ಕುರಿತು ತಮ್ಮ ಅವದಿಯಲ್ಲಿ ಯಾವುದೇ ಕಾಳಜಿ ತೋರದ ಸಂಸದ ಪ್ರತಾಪ ಸಿಂಹ ಅವರು ಅತ್ಯಂತ ನಿಷ್ಕ್ರಿಯ ಸಂಸದರು ಎಂದು ಹೇಳಿದರು.

ಚುನಾವಣಾ ಸಂಧರ್ಭಗಳಲ್ಲಿ ಪ್ರತ್ಯಕ್ಷರಾಗುವ ಪ್ರತಾಪ ಸಿಂಹರವರು ಭಾವನಾತ್ಮಕ ಮತ್ತು ಧರ್ಮಾದಾರಿತ ವಿಚಾರಗಳನ್ನೆತ್ತಿ ಮೋದಿ ಹೆಸರನ್ನು ಹೇಳಿ ಮತಯಾಚಿಸುವ ಅವರು ಅಭಿವೃದ್ಧಿ ಪರ ಚಿಂತನೆ ಹೊಂದಿಲ್ಲ. ಕೊಡಗಿನಲ್ಲಿ ಹತ್ತಾರು ಸಮಸ್ಯೆಗಳಿವೆ. ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆನೆ-ಮನುಷ್ಯ ಸಂಘರ್ಷದಿಂದ ಜೀವಹಾನಿಯಾಗುತ್ತಿದೆ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ನಡೆದಿವೆ. ಆದರೆ ಸಂಸದ ಪ್ರತಾಪ್ ಸಂಸತ್ತಿನಲ್ಲಿ ಈ ವಿಷಯಗಳ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ'' ಎಂದು ಆರೋಪಿಸಿದರು.

ಚುನಾವಣೆ ಸಂದರ್ಭದಲ್ಲಷ್ಟೇ ಪ್ರತಾಪ್ ಕೊಡಗಿಗೆ ಭೇಟಿ ನೀಡಿದ್ದಾರೆ. ಪ್ರತಾಪ್ ಜನರ ಭಾವನೆಗಳು ಮತ್ತು ಧರ್ಮಗಳ ಆಧಾರದ ಮೇಲೆ ಭಾಷಣಗಳನ್ನು ಮಾಡುದ್ದಾರೆ. ಜಿಲ್ಲೆಗೆ ರೈಲ್ವೆ ಮಾರ್ಗ ಮತ್ತು ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಭರವಸೆಗಳನ್ನು ಈಡೇರಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಜೆಡಿಎಸ್ ಜೊತೆಗಿನ ಮೈತ್ರಿಯನ್ನೂ ಲೇವಡಿ ಮಾಡಿದ ಅವರು, ಪ್ರತಾಪ್ ಸಿಂಹ ಅವರು ಹಲವಾರು ಸಂದರ್ಭಗಳಲ್ಲಿ ಜೆಡಿಎಸ್ ಮತ್ತು ದೇವೇಗೌಡರನ್ನು ದೂಷಿಸಿದ್ದಾರೆ. ಈಗ ಚುನಾವಣೆ ಹತ್ತಿರಬರುತ್ತಿದ್ದಂತೆಯೇ ದೇವೇಗೌಡರ ಕಾಲಿಗೆ ಬಿದ್ದಿದ್ದಾರೆ’ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ವಾಗ್ದಾಳಿ ಬೆನ್ನಲ್ಲೇ ಬಿಜೆಪಿ ಕೂಡ ತಿರುಗೇಟು ನೀಡಿತು. ಕಾಂಗ್ರೆಸ್ ವಾಗ್ದಾಳಿ ಬೆನ್ನಲ್ಲೇ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಸಂಕೇತ್ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಸಂಕೇತ್ ಪೂವಯ್ಯ ಅವರನ್ನು ವಲಸೆ ರಾಜಕಾರಣಿ ಎಂದು ಕಿಡಿಕಾರಿದರು.

ಆರೋಪ ಹಿನ್ನೆಲೆಯಲ್ಲಿ ಸಾರ್ವಜನಿಕ ವೇದಿಕೆಯಲ್ಲಿಯೇ ಶಾಸಕ ಪೊನ್ನಣ್ಣ ಅವರಿಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದರು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಶುರು ಮಾಡಿದ್ದಾರೆ. ಎರಡು ಬಾರಿಯೂ ಬಹುಮತದಿಂದ ಪ್ರತಾಪ್ ಸಿಂಹ ಅವರು ಗೆಲವು ಸಾಧಿಸಿದ್ದು, ಇದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ಜಿಲ್ಲೆಗೆ ಕೋಟ್ಯಾಂತರ ಹಣ ಬಿಡುಗಡೆ ಮಾಡಲು ಪ್ರತಾಪ್ ಸಿಂಹ ಸಹಕರಿಸಿದ್ದಾರೆ. ಆದರೂ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಹಿರಿಯರ ಪಾದ ಮುಟ್ಟುವುದು ಸನಾತನ ಧರ್ಮದ ಭಾಗ. ಸಂಕೇತ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ತಾವಿಟ್ಟ ಹೆಜ್ಜೆಯನ್ನೇ ಮರೆತಂತಿದ್ದಾರೆಂದು ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com