ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಕೇಳಿಲ್ಲ.. ಕೊರಟಗೆರೆಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ: ಕಾಂಗ್ರೆಸ್ ನಾಯಕ ಡಾ. ಜಿ ಪರಮೇಶ್ವರ ಸ್ಪಷ್ಟನೆ
2 ಕ್ಷೇತ್ರಗಳಲ್ಲಿ ನಾನು ಟಿಕೆಟ್ ಕೇಳಿರುವ ವಿಚಾರ ಸತ್ಯಕ್ಕೆ ದೂರವಾದದ್ದು.. ನಾನು ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಜಿ ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ.
Published: 08th April 2023 04:07 PM | Last Updated: 08th April 2023 05:35 PM | A+A A-

ಜಿ ಪರಮೇಶ್ವರ
ತುಮಕೂರು: 2 ಕ್ಷೇತ್ರಗಳಲ್ಲಿ ನಾನು ಟಿಕೆಟ್ ಕೇಳಿರುವ ವಿಚಾರ ಸತ್ಯಕ್ಕೆ ದೂರವಾದದ್ದು.. ನಾನು ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಜಿ ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಬಲಿಜ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, 2 ಕ್ಷೇತ್ರಗಳಲ್ಲಿ ನಾನು ಟಿಕೆಟ್ ಕೇಳಿರುವ ವಿಚಾರ ಸತ್ಯಕ್ಕೆ ದೂರವಾದದ್ದು.. ನಾನು ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿದ್ದೇನೆ. 2 ಕ್ಷೇತ್ರದ ಗೊಂದಲ ಯಾಕೆ ಬಂತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ (Dr Parameshwara) ಸಹ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿತ್ತು. ಸದ್ಯ ಈ ಕುರಿತಾಗಿ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ನಾನು ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿದ್ದೇನೆ. 2 ಕ್ಷೇತ್ರದ ಗೊಂದಲ ಯಾಕೆ ಬಂತೋ ಗೊತ್ತಿಲ್ಲ ಎಂದಿದ್ದಾರೆ. ಆ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ: 2ನೇ ಪಟ್ಟಿ ಪ್ರಕಟ ಬೆನ್ನಲ್ಲೇ ಕಾಂಗ್ರೆಸ್'ಗೆ ತಲೆನೋವು, 12 ಕ್ಷೇತ್ರಗಳಲ್ಲಿ ಬಂಡಾಯ ನಾಯಕರೇ ಸವಾಲು!
ಅಂತೆಯೇ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಾವು ಅಧಿಕಾರದಲ್ಲಿ ಇದ್ದಾಗ ಸಿಲಿಂಡರ್ ದರ 400 ರೂ. ಇತ್ತು. ಈಗ 1000 ರೂ. ಗಡಿ ದಾಟಿದೆ. ಕಾಂಗ್ರೆಸ್ ಅಕ್ಕಿ ಕೊಡದಿದ್ದರೆ ಬಡವರು ಊಟ ಮಾಡಲು ಆಗುತ್ತಿರಲಿಲ್ಲ. ಯಾಕಿಷ್ಟು ಅಕ್ಕಿ ಕೊಡುತ್ತಿದ್ದೀರಾ ಅಂತ ಸಿದ್ದರಾಮಯ್ಯಗೆ ಕೇಳಿದೆ, ಆಗ ಸಿದ್ದರಾಮಯ್ಯ ತಮ್ಮ ಗ್ರಾಮದ ಸ್ಥಿತಿ ಬಗ್ಗೆ ವಿವರಿಸಿ ಹೇಳಿದರು. ಹಬ್ಬ ಅಥವಾ ಅನಾರೋಗ್ಯದ ವೇಳೆ ಮಾತ್ರ ಅನ್ನ ತಿನ್ನಬೇಕಿತ್ತು. ಅದಕ್ಕಾಗಿ ಸಿದ್ದರಾಮಯ್ಯ ಬಡವರಿಗೆ ಉಚಿತವಾಗಿ ಅಕ್ಕಿ ನೀಡಿದರು. ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಮೋದಿ ರಾಜ್ಯಕ್ಕೆ ಬಂದಾಗ 10% ಲಂಚದ ಬಗ್ಗೆ ಆರೋಪಿಸಿದ್ದರು. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಮೋದಿ ಆರೋಪಿಸಿದ್ದರು. ಆದರೆ ಈಗ ನಿಮ್ಮ ಸಿಎಂ 40% ಲಂಚ ತೆಗೆದುಕೊಳ್ತಿದ್ದಾರಲ್ಲ? ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಏನು ಮಾತನಾಡುತ್ತಿಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿರುವುದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸಭಾ ಚುನಾವಣೆ: ರಾಜಕೀಯ ಪಕ್ಷಗಳ ‘ಸೈಬರ್ ಸೈನ್ಯಗಳು' ಸಮರಕ್ಕೆ ಸಿದ್ಧ!
ಜೆಡಿಎಸ್ ವಿರುದ್ಧ ಕಿಡಿ
ಈ ಜಾಗೃತಿ ಸಮಾವೇಶ ಮೂಲಕ ನಿಜವಾದ ಬಣ್ಣ ಬಯಲಾಗುತ್ತೆ. ರಾಜ್ಯದಲ್ಲಿ ಬಡವರಿಗೆ ಒಳ್ಳೆಯ ಜೀವನವಾಗಬೇಕು. ಒಳ್ಳೆಯ ನೌಕರಿ ಸಿಗಬೇಕು. ನಮ್ಮ ಸರ್ಕಾರ ಮುಂದುವರೆದಿದ್ದರೇ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಜಾರಿ ತರುವ ಕೆಲಸ ಮಾಡುತ್ತಿದೆ. ಬಲಿಜ ಸಮುದಾಯದಲ್ಲಿ ಬಡವರು ಇದ್ದಾರೆ. ಅಂತವರಿಗೆ ನ್ಯಾಯ ಸಿಗಬೇಕಿದೆ. ಬಡವರ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿದೆ. ನ್ಯಾಯ ಕೇಳುವ ಸಮಾಜಗಳಿಗೆ ಸೂಕ್ತ ನ್ಯಾಯ ಕೊಡುವ ಕೆಲಸ ಬಿಜೆಪಿ ಮಾಡಿಲ್ಲ. ಯಾವುದೇ ಅರ್ಜಿ ಪಡೆಯದೇ ಅವರಿಗೆ ಕೇಂದ್ರ ಸರ್ಕಾರ 10% ಮೀಸಲಾತಿ ಕೊಡುವ ಕೆಲಸ ಮಾಡಿದೆ. ನಿಜವಾದ ಅನ್ಯಾಯವಾದ ಸಮಾಜದವರಿಗೆ ಮೀಸಲಾತಿ ಕಲ್ಪಿಸಿಲ್ಲ ಎಂದು ಪರಮೇಶ್ವರ ವಾಗ್ದಾಳಿ ನಡೆಸಿದರು.