ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಯೋಜನೆ ಜಾರಿಗೆ ತಂದಿದ್ದು ನಾವು; ಅದನ್ನೂ ಅದಾನಿಗೆ ಮಾರದಿರಿ: ಮೋದಿಗೆ ಕಾಂಗ್ರೆಸ್ ಟಾಂಗ್

70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ" ಎನ್ನುವ ಪ್ರಧಾನಿ ಮೋದಿಯವರೇ ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ. ದಯವಿಟ್ಟು ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: 70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ" ಎನ್ನುವ ಪ್ರಧಾನಿ ಮೋದಿಯವರೇ ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ. ದಯವಿಟ್ಟು ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.

ನಿನ್ನೆಯಷ್ಟೇ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ)ಗೆ ಚಾಲನೆ ನೀಡಿದರು.

ಈ ಕುರಿತು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದು, ಮೋದಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ.

"70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ" ಎನ್ನುವ ಮೋದಿಯವರೇ ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ. ಅದರ ಪರಿಣಾಮವೇ ಇಂದು ಹುಲಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ತಮ್ಮಲ್ಲಿ ವಿಶೇಷ ಮನವಿ -ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದು ಹೇಳಿದೆ.

ಮೋದಿ ಅವರೇ, ಕೋವಿಡ್ ಸಂದರ್ಭದಲ್ಲಿ ಕರ್ನಾಟಕಕ್ಕೆ ತಾವು ಮಾಡಿದ ಆಕ್ಸಿಜನ್ ವಂಚನೆ ಹಾಗೂ ಬಿಜೆಪಿ  ಸರ್ಕಾರದ ಉಡಾಫೆಯಿಂದಾಗಿ ಆಕ್ಸಿಜನ್ ಸಿಗದೆ 36 ಜನ ಮೃತಪಟ್ಟಿದ್ದರು. ಚಾಮರಾಜನಗರಕ್ಕೆ ಬಂದಿದ್ದರೂ ಮೃತರ ಕುಟುಂಬದವರನ್ನು ಭೇಟಿಯಾಗುವ ಇಚ್ಛೆ ಇಲ್ಲವೇಕೆ? ಸಂತ್ರಸ್ತರನ್ನು ಎದುರುಗೊಳ್ಳಲು ಭಯವಾಗುತ್ತಿದೆಯೇ? ಎಂದು ಪ್ರಶ್ನಿಸಿದೆ.

ತಾವು ಸಫಾರಿ ಮಾಡಿ ಪ್ರಚಾರ ಪಡೆದಿದ್ದೇನೋ ಸರಿ. ಹುಲಿ ಸಂರಕ್ಷಣಾ ಯೋಜನೆಗೆ ಬಿಜೆಪಿ ಸರ್ಕಾರದ ಕೊಡುಗೆ ಏನು? ನೀಡಿದ ಅನುದಾನವೆಷ್ಟು? "ನಾವೇ ಮಾಡಿದೆವು" ಎಂಬ ಸುಳ್ಳು ಹೇಳುವ ಖಯಾಲಿ ಇರುವ ಬಿಜೆಪಿ ಹುಲಿ ಸಂರಕ್ಷಣಾ ಯೋಜನೆಗೆ ತಾವು ನೀಡಿದ ಅಸಲಿ ಕೊಡುಗೆಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ?

ಮಾರಾಟಗಾರ ಬಂದಿದ್ದಕ್ಕೆ ಹುಲಿಗಳು ಹೆದರಿ ಕಾಡು ಬಿಟ್ಟವೇ ಅಥವಾ ಹುಲಿಗಳನ್ನೆಲ್ಲಾ ಮಾರಾಟ ಮಾಡಿಯಾಗಿದೆಯೇ!? ಪ್ರಾಜೆಕ್ಟ್ ಟೈಗರ್ ಯೋಜನೆಗೆ ಶೂನ್ಯ ಕೊಡುಗೆ ನೀಡಿದ ಮೋದಿಯವರು ಈಗ ಫೋಟೋಶೂಟ್ ಮಾಡಿಸಿಕೊಳ್ಳಲು ಬಂದಿದ್ದಕ್ಕೆ ಹುಲಿಗಳು ಮುನಿಸಿಕೊಂಡಿರಬಹುದು ಎಂದು ವ್ಯಂಗ್ಯವಾಡಿದೆ.

ಜನರಿಲ್ಲದ ಖಾಲಿ ರಸ್ತೆಗೆ ಕೈಬೀಸುವ ಖಯಾಲಿ ಹೊಂದಿರುವ ಮೋದಿ ನೋಡಲು ಜನರ ಮನೆಯಿಂದ ಹೊರಬಂದಿಲ್ಲವಂತೆ..ಎಂತಹ ನಾಚಿಕೆಗೇಡಿನ ಸಂಗತಿ! ಮೋದಿ ಬಂದು ಕೈಬೀಸಿ ಹೋದಾಗಲೆಲ್ಲ ಕನ್ನಡಿಗರಿಗೆ ಒಂದೊಂದು ಗಂಡಾಂತರ ಎದುರಾಗಿದೆ, ಹೀಗಿರುವಾಗ ಜನ ಬರುವರೇ? ಮೋದಿ ಎಂದರೆ ಜನತೆಗೆ ಭಯ ಬಂದಿದೆಯೇ ಅಥವಾ ಆಕ್ರೋಶ ಹುಟ್ಟಿದೆಯೇ? ಎಂದು ಪ್ರಶ್ನಿಸಿದೆ.

"ಮೋದಿ ಬಂದು ಎಲ್ಲರಿಗೂ ಒಂದೊಂದು ಲಕ್ಷ ಹಣ ಕೊಟ್ಟರು" ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಕೇವಲ ವಿಪಕ್ಷಗಳಿಗೆ ಮಾತ್ರ ಅನ್ವಯವಾಗುತ್ತದೆಯೇ? ಆಡಳಿತ ಪಕ್ಷಕ್ಕೆ ಇಲ್ಲವೇ? ಹಣ ಹಂಚಿದ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಂಡು ಚುನಾವಣಾ ಆಯೋಗಕ್ಕೆ ಬೆನ್ನುಮೂಳೆ ಇದೆ ಎಂಬುದನ್ನು ಜನರೆದುರು ನಿರೂಪಿಸಿ ಎಂದು ಸವಾಲು ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com